ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪ್ಪಿಯ 'ಸೂಪರ್' ನವೆಂಬರಿನಲ್ಲಿ ತೆರೆಗೆ ಬರಲಿದೆಯೇ? (Super | Upendra | Hari Krishna | Nayantara)
ಸುದ್ದಿ/ಗಾಸಿಪ್
Bookmark and Share Feedback Print
 
PR
ಚಿತ್ರೀಕರಣ ಮುಗಿಸಿದರೂ ಸಿನಿಮಾಕ್ಕೆ ಹೆಸರನ್ನಿಡದೆ ಕುತೂಹಲ ಹುಟ್ಟಿಸಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಸೂಪರ್' ಎಂದು ಹೇಳಲಾಗುತ್ತಿರುವ ಚಿತ್ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಬರೋಬ್ಬರಿ 10 ವರ್ಷಗಳ ನಂತರ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಉಪ್ಪಿಗೆ ನಾಯಕಿಯಾಗಿರುವುದು ತಮಿಳಿನ ಹಾಟ್ ಕೇಕ್ ನಯನತಾರ. ಚಿತ್ರೋದ್ಯಮದ ಮೂಲಗಳ ಪ್ರಕಾರ ಚಿತ್ರ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ.

ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪ್ರಸಕ್ತ ಚೆನ್ನೈಯಲ್ಲಿ ಬೀಡು ಬಿಟ್ಟಿದೆ. ಡಿಜಿಟಲ್ ಅಳವಡಿಕೆ ಮತ್ತು ರೀ-ರೆಕಾರ್ಡಿಂಗ್ ನಡೆಯುತ್ತಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಹಲವು ತಂತ್ರಜ್ಞರು ಉಪ್ಪಿಯ ವಿಶಿಷ್ಟ ಕಲ್ಪನೆಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.

ಚಿತ್ರದ ಸಂಕಲನ ಕಾರ್ಯವನ್ನು ಉಪ್ಪಿ ಬಹುತೇಕ ಈಗಾಗಲೇ ಮುಗಿಸಿದ್ದಾರೆ. ಅಂತಿಮ ಸುತ್ತಿನ ಎಡಿಟಿಂಗ್ ಕೂಡ ಶೀಘ್ರದಲ್ಲೇ ನಡೆಯಲಿದೆ. ಚಿತ್ರದ ಧ್ವನಿ ಸುರುಳಿ ಇದುವರೆಗೂ ಬಿಡುಗಡೆಯಾಗಿಲ್ಲ. ಬಹುಶಃ ದೀಪಾವಳಿ ಹೊತ್ತಿಗೆ ಅಥವಾ ಅದರ ನಂತರ ಕೆಲವು ದಿನಗಳ ಬಳಿಕ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಈ ಚಿತ್ರಕ್ಕಾಗಿ ಕೆಲಸ ಮಾಡಿರುವ ತಂತ್ರಜ್ಞರೊಬ್ಬರ ಪ್ರಕಾರ ಇದು ಪಕ್ಕಾ ಉಪೇಂದ್ರ ಚಿತ್ರ. ಅವರಿಗೆ ನಾಯಕಿಯಾಗಿ ನಯನತಾರಾ ಅತ್ಯುತ್ತಮ ಸಾಥ್ ನೀಡಿದ್ದಾರೆ. ಅವರ ನಟನೆಯೂ ಚಿತ್ರದ ಪ್ಲಸ್ ಪಾಯಿಂಟ್.

ಕನ್ನಡದ ಜತೆ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ 'ಸೂಪರ್' ಚಿತ್ರವನ್ನು ಒಪ್ಪಿಕೊಂಡ ನಂತರ ನಯನತಾರಾ ಇತರ ಯಾವುದೇ ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಇದಕ್ಕಿದ್ದ ಕಾರಣ ಉಪ್ಪಿಗೆ ಬೇಕಾಗಿದ್ದ ಕಮಿಟ್‌ಮೆಂಟ್ ಮತ್ತು ನಯನತಾರಾ ವೈಯಕ್ತಿಕ ಜೀವನದ ಏರುಪೇರುಗಳು ಎಂದು ಹೇಳಲಾಗಿದೆ.

ಆರಂಭದಿಂದಲೂ ಚಿತ್ರದ ಬಗ್ಗೆ ಒಂದು ರೀತಿಯ ರಹಸ್ಯ ಕಾಯ್ದುಕೊಂಡು ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿರುವ ಉಪ್ಪಿ, ಈ ಬಾರಿ ಯಾವ ಮ್ಯಾಜಿಕ್ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂಪರ್, ಉಪೇಂದ್ರ, ಹರಿಕೃಷ್ಣ, ನಯನತಾರ