ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರೀಕ್ಷಿಸಿ, ಚುಕುಬುಕು ಹುಡುಗಿಯ ಜೆನ್ನಿಫರ್ ಸ್ಟಂಟ್! (Prince | Jennifer Kothwal | Omprakash | Darshan)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಚುಕುಬುಕು ರೈಲು... ಎಂದು ಯದ್ವಾತದ್ವಾ ಕುಣಿದು ಪಡ್ಡೆ ಹುಡುಗರ ಹೃದಯದಲ್ಲಿ ಕಚಗುಳಿ ಇಟ್ಟಿದ್ದ ಜೆನ್ನಿಫರ್ ಕೊತ್ವಾಲ್, ಈಗ ಸ್ಟಂಟ್, ಫೈಟ್ಸ್ ಮಾಡಲು ಹೊರಟಿದ್ದಾರೆ. ಬಾಲಿವುಡ್ ಬೆಡಗಿ ತುಂಬು ದೇಹದ ಹಾಲ್ಗೆನ್ನೆ ಚೆಲುವೆ ಜೆನ್ನಿ ಈಗ 'ಪ್ರಿನ್ಸ್' ಚಿತ್ರದಲ್ಲಿ ರ‌್ಯಾಂಬೋ ರಾಣಿಯಾಗಿ ಮಿಂಚಿದ್ದಾರೆ.

ಸುಮಾರು ಎರಡು ವರ್ಷಗಳಿಂದ ಹೆಚ್ಚಿನ ಚಿತ್ರಗಳಿಲ್ಲದೆ ಆರಾಮಾಗಿ ಬಾಂಬೆ-ಬೆಂಗಳೂರು ಓಡಾಡಿಕೊಂಡಿದ್ದ ಜೆನ್ನಿಗೆ ಮತ್ತೆ ಸ್ಯಾಂಡಲ್‌ವುಡ್ ಅದೃಷ್ಟ ಖುಲಾಯಿಸಿದೆ. ಈ ಬಾರಿ ಚಿತ್ರ ರಸಿಕರಿಗೆ ಕಿಕ್, ಪಂಚ್‌ಗಳನ್ನು ತೋರಿಸಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದುವರೆಗೆ ಈ ರೀತಿಯ ಗಂಡೆದೆಯ ಪಾತ್ರದಲ್ಲಿ ನಟಿಸಿರಲಿಲ್ಲ ಎಂದು ಹೇಳುವ ಜೆನ್ನಿ, ವಿದೇಶದಲ್ಲಿ ಕೆಲವು ಹಾಡುಗಳ ಚಿತ್ರೀಕರಣಕ್ಕಾಗಿ ಸದ್ಯದಲ್ಲೇ ತಂಡದೊಂದಿಗೆ ತೆರಳಲಿದ್ದೇನೆ. ಇದರ ನಂತರ ಓಂಪ್ರಕಾಶ್ ಅವರ ನಿರ್ದೇಶನದಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದೇನೆ ಎಂದಿದ್ದಾರೆ.

ಅಂದ ಹಾಗೆ ಓಂಪ್ರಕಾಶ್ ರಾವ್ ನಿರ್ದೇಶನದ 'ಪ್ರಿನ್ಸ್' ಚಿತ್ರದಲ್ಲಿ ಜೆನ್ನಿಫರ್ ಮಾತ್ರ ನಾಯಕಿಯಲ್ಲ. ದರ್ಶನ್‌ಗೆ ಇಲ್ಲಿ ಇಬ್ಬಿಬ್ಬರು ನಾಯಕಿಯರು. ಮೂಲಗಳ ಪ್ರಕಾರ ಮತ್ತೊಬ್ಬ ನಾಯಕಿ ನಿಖಿತಾಗೆ ಚಿತ್ರದಲ್ಲಿ ಪ್ರಾಮುಖ್ಯತೆ ಹೆಚ್ಚು. ಆದರೂ ತನಗೆ ಮಿಂಚಲು ಅವಕಾಶ ಹೆಚ್ಚಿದೆ ಎಂದು ಜೆನ್ನಿ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿನ್ಸ್, ಜೆನ್ನಿಫರ್ ಕೊತ್ವಾಲ್, ಓಂಪ್ರಕಾಶ್, ದರ್ಶನ್