ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಗಂತ್‌ಗೆ ಕೊಂಚ ಅಹಂ ಇದೆ, ಹೊಂದ್ಕೊಳ್ಳಲ್ಲ: ನಿಧಿ ಸುಬ್ಬಯ್ಯ (Pancharangi | Nidhi Subbaiah | Diganth | Yogaraj Bhat)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಈಗ ಸಕ್ಸಸ್ ಮೂಡಿನಲ್ಲಿದ್ದಾರೆ. ದಿಗಂತ್ ಜೋಡಿಯಾಗಿ ಅಭಿನಯಿಸಿದ, ಯೋಗರಾಜ್ ಭಟ್ರ 'ಪಂಚರಂಗಿ' ಚಿತ್ರ 50 ದಿನಗಳನ್ನು ಪೂರೈಸಿ ಮುನ್ನೆಡೆಯುತ್ತಿದ್ದು, ಗಲ್ಲಾಪೆಟ್ಟಿಗೆ ತುಂಬಿಸಿದೆ. ಇದರಿಂದ ಗಾಂಧಿನಗರಕ್ಕೆ 'ನಿಧಿ' ಸಿಕ್ಕಿದಂತಾಗಿದ್ದರೂ, ದಿಗಂತ ಮತ್ತು ನಿಧಿ ನಡುವೆ ಅಷ್ಟಕಷ್ಟೆ ಎಂಬುದು ಬಯಲಾಗಿದೆ.

ಇನ್ನು ನಿಧಿಗಂತೂ ಭಟ್ಟರು ಸಿಕ್ಕಿದ್ದು ಕೊಡಗನ್ನು ಕೊಂಡುಕೊಂಡಷ್ಟೆ ಸಂತೋಷವಾಗಿದೆ. ತನ್ನಲ್ಲಿರುವ ನಟನೆಯನ್ನು ಹೊರತೆಗೆದ ಇಂಜಿನಿಯರ್ ಭಟ್ಟರು ಎಂದು ವರ್ಣಿಸಿದ್ದಾರೆ. ಅವರ ಸಮಸ್ಯೆ ಇರುವುದು ದಿಗಂತ್ ಜತೆ.

ದಿಗಂತ್‌ಗೆ ಸ್ವಲ್ಪ ಆಟಿಟ್ಯೂಡ್ ಪ್ರಾಬ್ಲಮ್ ಇದೆ, ಕೊಂಚ ಅಹಂಕಾರಿ ಎಂದು ಅವರು ಕಿಡಿ ಹಚ್ಚಿದ್ದಾರೆ.

ಇತರ ನಟರ ಜೊತೆಯಲ್ಲೂ ಕೆಲಸ ಮಾಡಿದ್ದೇನೆ. ಅವರು ಸಾಮಾನ್ಯವಾಗಿ ಎಲ್ಲ ವಿಷಯಗಳಲ್ಲೂ ಸಲಹೆ ನೀಡುತ್ತಾರೆ. ಆದರೆ, ದಿಗಂತ್ ಮಾತ್ರ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುವುದರಲ್ಲೇ ನಿರತನಾಗಿರುತ್ತಾನೆ ಎಂದು ನಿಧಿ ಮೂಗು ಮುರಿದಿದ್ದಾರೆ.

ಆದರೂ ಪಂಚರಂಗಿ ಸೆಟ್ ಮೇಲೆ ನನ್ನ ಮತ್ತು ದಿಗಂತ್ ಕೆಮೆಸ್ಟ್ರಿ ಚೆನ್ನಾಗಿತ್ತು. ಆ ಚಿತ್ರಕ್ಕೆ ದಿಗಂತ್ ವಯಸ್ಸು ಮತ್ತು ಕ್ಯಾರೆಕ್ಟರ್ ಹೇಳಿ ಮಾಡಿಸಿದ ರೀತಿಯಲ್ಲಿತ್ತು ಎನ್ನುವ ನಿಧಿ, ಅವನಿಗೆ ಸ್ವಲ್ಪ ಅಹಂ ಇದೆ ಎಂದಿದ್ದಾರೆ.

ಯಾವ ವಿಚಾರದಲ್ಲಿ ಅಹಂ, ಏನಾದರೂ ಸಮಸ್ಯೆಗಳು ಎದುರಾಗಿದ್ದವೇ ಎಂಬುದನ್ನು ವಿವರಿಸಲು ನಿರಾಕರಿಸಿರುವ ನಿಧಿ, ಈ ಚಿತ್ರದಿಂದ ನಾನೂ ಸಹ ಒಬ್ಬ ಪರಿಪೂರ್ಣ ನಟಿ ಎನಿಸಿದ್ದೇನೆ. ಚಿತ್ರ ವೀಕ್ಷಿಸಿ ಕನ್ನಡಿಗರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ ಎಂದಷ್ಟೇ ಹೇಳಿ ಜಾಗ ಖಾಲಿ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಂಚರಂಗಿ, ನಿಧಿ ಸುಬ್ಬಯ್ಯ, ದಿಗಂತ್, ಯೋಗರಾಜ್ ಭಟ್