ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದೀಪಾವಳಿ ಬಳಿಕ ರಮೇಶ್ ಅದೃಷ್ಟ ಬದಲಾಗಲಿದೆ! (Ramesh Aravind | Horror | Pooja Gandhi | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
PR
ಸ್ಯಾಂಡಲ್‌ವುಡ್ ಚೆಂದುಳ್ಳಿ ಚೆಲುವ, ನಿರ್ದೇಶಕ ರಮೇಶ್ ಅರವಿಂದ್‌ಗೆ ಚಿತ್ರರಂಗದ ಏಳುಬೀಳುಗಳು ಹೊಸತಲ್ಲ. ಆದರೂ ಅಭಿನಯದಲ್ಲಿನ ಸಮತೋಲನದಿಂದಾಗಿ ಅವರಿಗೆ ಎಲ್ಲೂ ಮೋಸವಾಗಿಲ್ಲ. ಆಕ್ಷನ್ ಪಾತ್ರ ಬಿಟ್ಟು ಉಲಿದ ಯಾವುದೇ ಪಾತ್ರಕ್ಕೆ ನ್ಯಾಯ ಸಲ್ಲಿಸುವ, ಮಿಂಚುವ ಛಾತಿ ಅವರದ್ದು. ಅಂತಹ ರಮೇಶ್ ಇದೀಗ ಹಾರರ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಾಕಚಕ್ಯತೆ, ಸಂಭಾಷಣೆಯಲ್ಲಿ ಚುರುಕುತನ, ಭಾವನಾತ್ಮಕ ಅಭಿನಯದಲ್ಲೇ ಮಿಂಚಿ ಕನ್ನಡದ ಜನತೆಯ ಮನದಲ್ಲಿ ಅಚ್ಚಳಿಯದೆ ಉಳಿದಿರುವ ರಮೇಶ್‌ಗೆ ಕಳೆದ ವರ್ಷ ಮತ್ತು ಬಹುತೇಕ ಈ ವರ್ಷವೂ ಲಕ್ ಕೊಂಚ ಕೈಕೊಟ್ಟಿತ್ತು. ಆದರೆ ದೀಪಾವಳಿಯ ಶುಭದಿನದ ನಿರೀಕ್ಷೆಯಲ್ಲಿದ್ದಾರೆ.

ಹೇಳಿಕೇಳಿ ದೀಪಾವಳಿ ಅವರ ಇಷ್ಟದ ಹಬ್ಬ. ಎಲ್ಲೆಲ್ಲೂ ದೀಪ ಬೆಳಗಿಸುವುದನ್ನಂತೂ ತಪ್ಪಿಸಿಕೊಳ್ಳುವವರೇ ಅಲ್ಲ. ಪ್ರಾಣ ಅಥವಾ ದೇಹಕ್ಕೆ ತೊಂದರೆಯಾಗದಂತೆ ಹಬ್ಬ ಆಚರಿಸಿ ಎಂದು ಅಭಿಮಾನಿಗಳಿಗೆ ಸಲಹೆ ಬೇರೆ ನೀಡಿದ್ದಾರೆ.

ಅದಿರಲಿ, ರಮೇಶ್ ನಟಿಸಿರುವ 'ಹಾರರ್' ಚಿತ್ರ ಇದೇ ನವೆಂಬರ್ 19ರಂದು ಬಿಡುಗಡೆಯಾಗಲಿದೆಯಂತೆ. ಚಿತ್ರದಲ್ಲೆ ಕತ್ತಲೇ ಹೆಚ್ಚಾದರೂ, ದೀಪಾವಳಿಯ ಬೆಳಕು ಮತ್ತೆ ಚಿತ್ರರಂಗದಲ್ಲಿ ಕಾಣಿಸುವ ಭರವಸೆ ಅವರಲ್ಲಿದೆ.

ಬಹಳ ವರ್ಷಗಳ ನಂತರ ಕನ್ನಡದಲ್ಲಿ ಒಂದು ಉತ್ತಮ 'ಹಾರರ್' ಸಿನಿಮಾ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಹ.ಸು. ರಾಜಶೇಖರ್. ಚಿತ್ರದ ತಾರಾಗಣದಲ್ಲಿ ಸುಮಾ, ಅಶ್ವತ್ಥ್ ನಿನಾಸಂ ನಟಿಸಿದ್ದಾರೆ.

ಜತೆಗೆ ರಮೇಶ್ ಅವರ ತಮಿಳು ಚಿತ್ರವೂ ಬಿಡುಗಡೆಯಾಗುತ್ತಿದೆ. ಪೂಜಾ ಗಾಂಧಿಯೂ ನಟಿಸಿರುವ 'ಎನ್ನಮೋ ನಾಡಕ್ಕುಳು' ಶೀಘ್ರದಲ್ಲೇ ತೆರೆಗೆ ಬರಲಿದೆ.

'ಹೇ ಸರಸು', 'ಪ್ರೇಮ ಕುಟುಂಬ', 'ಹ್ಯಾಪಿ ಹಸ್ಬೆಂಡ್' ಅವರ ಮುಂದಿನ ಕನ್ನಡ ಚಿತ್ರಗಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮೇಶ್ ಅರವಿಂದ್, ಹಾರರ್, ಪೂಜಾ ಗಾಂಧಿ, ಕನ್ನಡ ಚಿತ್ರ