ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರ ರೇಟು ಜಾಸ್ತಿಯಾಗಿದೆ | ಇಲ್ಲಿದೆ 'ಎಕ್ಕ ರಾಜ ರಾಣಿ' (Jackie | Punith Rajkumar | Yogaraj Bhat | Pancharangi)
ಸುದ್ದಿ/ಗಾಸಿಪ್
Bookmark and Share Feedback Print
 
ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ' ಚಿತ್ರದ ಹಾಡುಗಳು ಈ ಹಿಂದಿನ ದಾಖಲೆಗಳನ್ನು ಮುರಿದು ಮುಕ್ಕುತ್ತಿವೆ. ಇದೇ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡ. ಈ ನಡುವೆ ಮೊದಲೇ ಹೇಳಿರುವಂತೆ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಗೀತರಚನೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಆರಂಭದಲ್ಲಿ ಅಷ್ಟಿಷ್ಟೋ ಸಾವಿರ ರೂಪಾಯಿಗಳನ್ನಷ್ಟೇ ಪಡೆದುಕೊಳ್ಳುತ್ತಿದ್ದ ಭಟ್ಟರು, 'ಹಳೆ ಪಾತ್ರೆ ಹಳೆ ಕಬ್ಬಿಣ..'ಕ್ಕೆ 40 ಸಾವಿರ ರೂಪಾಯಿ ಪಡೆದಿದ್ದರಂತೆ. ನಂತರದ ದಿನಗಳಲ್ಲಿ ಇದು ಏರಿಕೆಯಾಗುತ್ತಾ 70-75 ಸಾವಿರಕ್ಕೆ ತಲುಪಿತ್ತು. ಇದು ಸ್ನೇಹಿತ ದುನಿಯಾ ಸೂರಿಯ 'ಜಾಕಿ'ಗೂ ಅನ್ವಯವಾಗಿತ್ತು.
MOKSHA

ಭಟ್ಟರು ಬರೆಯುವ ಹಾಡುಗಳ ರೇಟು ಜಾಸ್ತಿಯಾಗಿದೆ ಎಂದು ಗೆಳೆಯ ಸೂರಿ ಬಹಿರಂಗವಾಗಿಯೇ ಕಾರ್ಯಕ್ರಮವೊಂದರಲ್ಲಿ ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡಿದ್ದಾಗ ಪ್ರತಿಕ್ರಿಯಿಸಿದ್ದ ಭಟ್ಟರು, 'ಹಿಂದಿನ ಬಾಕಿಯನ್ನೇ ಕೊಟ್ಟಿಲ್ಲ ನೀನು' ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಈ ಹೊತ್ತಿನಲ್ಲಿ ಮಾತನಾಡಿದ್ದ ಸೂರಿ, 'ಭಟ್ಟರು ಈಗಲೇ ಹಾಡೊಂದಕ್ಕೆ 75 ಸಾವಿರ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಒಂದೂವರೆ ಲಕ್ಷ ತಲುಪಿದರೂ ಅಚ್ಚರಿಯಿಲ್ಲ' ಎಂದಿದ್ದರು.

ಅದೀಗ ನಿಜವಾಗಿದೆ. ಭಟ್ಟರು ಬರೆದ ಹಾಡುಗಳು ಸಾಲು ಸಾಲಾಗಿ ಹಿಟ್ಟಾಗುತ್ತಿರುವುದರಿಂದ ಅವರು ರೇಟು ಜಾಸ್ತಿ ಮಾಡಿಕೊಂಡಿದ್ದಾರೆ ಎಂದು ಗಾಂಧಿನಗರದ ಮೂಲಗಳು ಹೇಳಿವೆ.

ಅವರ ಗೀತರಚನೆ ಬಗ್ಗೆ ಎರಡು ಮಾತಿಲ್ಲ. ಜಯಂತ್ ಕಾಯ್ಕಿಣಿಯವರು ಬರಿ ಪ್ರೇಮವನ್ನೇ ತಿರುಗಿ-ಮುರುಗಿ ಸುತ್ತುತ್ತಿದ್ದರೆ, ಭಟ್ಟರು ದಿನಾ ಎದುರಾಗುವ ಸಮಸ್ಯೆಗಳು-ಜಂಝಡಗಳನ್ನು ಹಾಡುಗಳಿಗೆ ಇಳಿಸುತ್ತಾರೆ. ಅವರ ಜೀವಂತಿಕೆ ಇರುವ ಸಾಹಿತ್ಯದಿಂದಾಗಿಯೇ ಬಹುತೇಕ ಹಾಡುಗಳು ಹಿಟ್ಟಾಗುತ್ತಿವೆ.

ಇತ್ತೀಚಿನ ಜಾಕಿಯನ್ನು ತೆಗೆದುಕೊಂಡರೆ, ಅಲ್ಲಿನ ಬಹುತೇಕ ಹಾಡುಗಳಿಗೆ ಸಾಹಿತ್ಯ ಬರೆದದ್ದು ಭಟ್ಟರು. ಎಲ್ಲಾ ಹಾಡುಗಳೂ ಸೂಪರ್ ಹಿಟ್. ಒಂದನ್ನು ಮತ್ತೊಂದು ಮೀರಿಸುವಂತಿವೆ. ಎಲ್ಲಿ ನೋಡಿದರಲ್ಲಿ ಜಾಕಿಯೇ ಮಿಂಚುತ್ತಿದ್ದಾನೆ. ಹಾಗಾಗಿ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

'ಜಾಕಿ'ಯ ಒಂದು ಸೂಪರ್ ಹಿಟ್ ಹಾಡಿನ ಸಾಹಿತ್ಯ 'ವೆಬ್‌ದುನಿಯಾ' ಓದುಗರಿಗಾಗಿ --

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಒಳ್ಳೆ ಕಾರ್ಡು ಬಿತ್ತು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ತು ಅಂದ್ರೆ, ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ ಕಳ್ನನನ್ಮಗಂದು
ನಾವಾಡಬೇಕು ದೇವರನ್ನೇ ನೆಚ್ಚಿಕೊಂಡು

ಒಂದೇ ಆಟ ಒಂದೇ ಆಟ ಎಂದುಕೊಂಡು ಎಂಡಿನಲ್ಲಿ
ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು

ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ಸಾಯಬೇಡ ಅಷ್ಟು ಬೇಗ
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ ನೈಂಟಿ ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಯಾವ್ದು ಇಲ್ಲಿ ಅಂದರ್ ಆಯ್ತು
ಯಾವ್ದು ಇಲ್ಲಿ ಬಾಹರ್ ಆಯ್ತು
ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವು ಗ್ಯಾಪು ಕೊಡದೆ ಆಡಬೇಕು ಮುಚ್ಚಿಕೊಂಡು

ಸಿಂಪಲ್ ಮಂದಿ ನಾವ್ ಶೋಕಿಗಂತ ಆಡುತೀವಿ
ಹೆದ್ರೋಲ್ಲ ಮನೆ-ಮಠ ಮಾರಿಕೊಂಡ್ರು
ಪಾಪ ಪಾಂಡವರೇ ಹೆಂಡ್ತೀನ ಕಳಕೊಂಡ್ರು

ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
ಸಾಲ, ಜಾಸ್ತಿ ಆದ್ರೆ ಆಗ್ಲಿ ಬಿಡಿ
ದೇವರವ್ನೆ ಮನೆ ಮಾರಿ ಬಿಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕಿ, ಪುನೀತ್ ರಾಜ್ಕುಮಾರ್, ಯೋಗರಾಜ್ ಭಟ್, ಪಂಚರಂಗಿ