ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯ್ 'ಜಾನಿ'ಯಲ್ಲಿ ನಟಿಸ್ತೇನೆ; ಪ್ಲೇಟ್ ಬದಲಿಸಿದ ರಮ್ಯಾ (Ramya | Johny mera naam preeti mera kaam | Dunia Vijay | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
'ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದ ರಮ್ಯಾ ಮಾತು ಬದಲಾಯಿಸಿದ್ದಾರೆ. ತಾನು ಚಿತ್ರಕ್ಕೆ ಸಹಿ ಮಾಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ರಮ್ಯಾ ತಿಳಿಸಿದ್ದಾರೆ.

ನಾನು ಜಾನಿ ಚಿತ್ರದಲ್ಲಿ ನಟಿಸುತ್ತಿಲ್ಲ. ನನ್ನ ವೃತ್ತಿಪರ ನೀತಿಗಳಿಗೆ ಚಿತ್ರ ವಿರುದ್ಧವಾಗಿದೆ. ಅವರ ಕೈಯಲ್ಲಿ ಚೌಕಾಶಿ ಸರಕಾಗಲು ನಾನು ಬಯಸುವುದಿಲ್ಲ, ಚಿತ್ರ ತಂಡಕ್ಕೆ ಶುಭವಾಗಲಿ ಎಂದು ನಿನ್ನೆಯಷ್ಟೇ ರಮ್ಯಾ ತಿಳಿಸಿದ್ದರು.

ಇದನ್ನೂ ಓದಿ: ವಿಜಯ್ 'ಜಾನಿ' ನನಗೆ ಹೇಳಿದ ಚಿತ್ರವಲ್ಲ, ನಟಿಸಲ್ಲ: ರಮ್ಯಾ

ಈಗಷ್ಟೇ ನಾನು ದುನಿಯಾ ವಿಜಿ ನಾಯಕರಾಗಿರುವ 'ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್' ಚಿತ್ರಕ್ಕೆ ಸಹಿ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಲಿದೆ. ಈ ಚಿತ್ರದ ನಿರ್ದೇಶಕರು ಪ್ರೀತಂ ಗುಬ್ಬಿ. ನಕ್ಕುನಗಿಸುವ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ. ಚಿತ್ರೀಕರಣದಲ್ಲೂ ಮಜಾ ಸಿಗಬಹುದೆಂಬುದು ನನ್ನ ನಂಬಿಕೆ ಎಂದು ಈಗ ರಮ್ಯಾ ತನ್ನ ಟ್ವಿಟ್ಟರ್-ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ ರಮ್ಯಾ ಚಿತ್ರವನ್ನು ಆರಂಭದಲ್ಲಿ ಒಪ್ಪಿಕೊಂಡು, ನಂತರ ಸಂಭಾವನೆ ವಿಚಾರದಲ್ಲಿ ಜಗ್ಗದೆ ನಿರಾಕರಿಸಿದ್ದರು. ಅವರು 22 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ ಇದಕ್ಕೆ ನಿರ್ಮಾಪಕ-ನಿರ್ದೇಶಕರು ಒಪ್ಪಿಕೊಂಡಿರಲಿಲ್ಲ.

ಇದನ್ನೇ ಪರೋಕ್ಷವಾಗಿ ಹೇಳಿದ್ದ ರಮ್ಯಾ, ತಾನು ಚೌಕಾಶಿ ಸರಕಲ್ಲ. ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದರು.

ಈಗ ಎಲ್ಲವೂ ಬದಲಾಗಿದೆ. ಬದಲಾಗಿರುವುದು ನಿರ್ಮಾಪಕ-ನಿರ್ದೇಶಕರೋ ಅಥವಾ ರಮ್ಯಾರೋ ಎಂಬುದು ಖಚಿತವಾಗಿಲ್ಲ. ಆದರೂ 22 ಲಕ್ಷ ರೂಪಾಯಿಗಿಂತ ಕಡಿಮೆಗೆ ರಮ್ಯಾ ಒಪ್ಪಿರಲಾರರು ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಮತ್ತೊಂದು ವಿವಾದವು ಹೊತ್ತಿಕೊಂಡಷ್ಟೇ ವೇಗದಲ್ಲಿ ಆರಿ ಹೋಗಿದೆ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ 'ಕರಿ ಚಿರತೆ' ವಿಜಯ್ - 'ಜಂಭದ ಕೋಳಿ' ರಮ್ಯಾ ಜೋಡಿ ತೆರೆಗೆ ಬರುವಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ದುನಿಯಾ ವಿಜಯ್