ಶಿವರಾಜ್ ಕುಮಾರ್ ಅಭಿನಯದ 99ನೇ ಚಿತ್ರ 'ಮೈಲಾರಿ'. ಇದರ ಆಡಿಯೋ ಕ್ಯಾಸೆಟ್ ಹಾಗೂ ಸಿಡಿ ಬಿಡುಗಡೆ ಕಳೆದ ವಾರ ನಡೆಯಿತು. ಚಿತ್ರದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋದ ಮಾಲಿಕ ಮೋಹನ್ ಛಾಬ್ರಿಯಾ ಪಡೆದಿದ್ದಾರೆ ಎಂದು ಸುದ್ದಿ ಪ್ರಕಟವಾಗಿತ್ತು. ಅವರ ಚಿತ್ರ ಸಂಗೀತ ಹಾಗೂ ಗೀತೆ ರಚನೆಯನ್ನು ಕೇಳಿ ಬಹಳ ಸಂತಸಪಟ್ಟಿದ್ದಲ್ಲದೆ, ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂದೆಲ್ಲ ಹೇಳಿದ್ದನ್ನು ಓದಿದ್ದೇವೆ.
ಆದರೆ, ಚಿತ್ರದ ಹಾಡುಗಳ ಬಿಡುಗಡೆಯಾಗಿ ಗೋಡೆಗಳ ಮೇಲೆ ಬಿದ್ದಿರುವ ಪೋಸ್ಟರುಗಳು ಮಾತ್ರ ಗೊಂದಲ ಹುಟ್ಟಿಸುತ್ತಿವೆ. ಕೆಲವು ಪೋಸ್ಟರುಗಳ ಮೇಲೆ 'ಆನಂದ್ ಆಡಿಯೋ' ಎಂದು ಮುದ್ರಿಸಿದ್ದರೆ, ಮತ್ತೆ ಕೆಲವು ಕಡೆ ಅಶ್ವಿನಿ ರಾಮ್ ಪ್ರಸಾದ್ ಮಾಲಿಕತ್ವದ 'ಅಶ್ವಿನಿ ಆಡಿಯೋ' ಎಂದು ಮುದ್ರಿಸಲಾಗಿದೆ. ಇದರಲ್ಲಿ ಯಾವುದು ಸರಿ ಎನ್ನುವುದು ಶಿವಣ್ಣ ಅಭಿಮಾನಿಗಳ ಪ್ರಶ್ನೆಯಾಗಿತ್ತು.
ಅದಕ್ಕೆ ಉತ್ತರವೂ ಸಿಕ್ಕಿದೆ. 'ಅಶ್ವಿನಿ ಆಡಿಯೋ' ಶಿವರಾಜ್ ಕುಮಾರ್ ಅವರ ಸಂಬಂಧಿಕನಾದ್ದರಿಂದ 'ಮೈಲಾರಿ' ಆಡಿಯೋ ಹಕ್ಕು ಅಶ್ವಿನಿ ಆಡಿಯೋಗೆ ದಕ್ಕುತ್ತದೆ ಎಂದು ನಂಬಿದ್ದರಿಂದ ಪೋಸ್ಟರುಗಳನ್ನು ಅಶ್ವಿನಿ ಆಡಿಯೋದವರು ಮುಂಚಿತವಾಗಿ ಮುದ್ರಿಸಿ ಅಂಟಿಸಿಕೊಂಡಿದ್ದರು.
ಆದರೆ, ಮೈಲಾರಿ ಚಿತ್ರ ನಿರ್ದೇಶಕ ಆರ್. ಚಂದ್ರು ಹಾಗೂ ನಿರ್ಮಾಪಕ ಶ್ರೀನಿವಾಸ್ ಅವರ ತೀರ್ಮಾನದಂತೆ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋಸ್ ನೀಡಲಾಗಿದೆ. ಹಾಗಾಗಿ ಒಂದೇ ಚಿತ್ರದ ಎರಡೆರಡು ಭಿನ್ನ ಪೋಸ್ಟರುಗಳು ಕಾಣಿಸಿಕೊಂಡಿವೆ ಎಂದು ವರದಿಗಳು ಹೇಳಿವೆ.