ವ್ಯಕ್ತಿಯ ಜೀವನವನ್ನು ಪಂಚ ದಿಕ್ಕುಗಳಲ್ಲಿ ಚಿತ್ರಿಸಿ ತೋರಿಸಿದ ನಿರ್ದೇಶಕ ಯೋಗರಾಜ್ ಭಟ್ ಲೈಫು ಇಷ್ಟೇನೇ... ಎಂದಿದ್ದರೂ ದಿಗಂತ್ ಲೈಫ್ಗೆ ಮಾತ್ರ ಲಕ್ ಹೊಡೆದಿದೆ.
ಮುಂಬರುವ ದಿನಗಳಲ್ಲಿ ಅವರು ತಲೆ ಮೇಲೆ ಒಂದರಮೇಲೆ ಒಂದರಂತೆ ಚಿತ್ರಗಳನ್ನು ಪೂರ್ತಿಗೊಳಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ. ಇದೊಂದು ರೀತಿ ಗುಳಿಕೆನ್ನೆ ದಿಗಂತ್ಗೆ ಚಾಲೆಂಜ್ ಆಗಿದೆ. ಅವರ ಇ-ಪ್ರೀತಿ, ಜಾಲಿ ಬಾಯ್, ತುಂಬಾ ಇಷ್ಟ ಸ್ವಲ್ಪ ಕಷ್ಟ, ಮತ್ತೆ ಮಸ್ತ್ ಮಜಾ ಮಾಡಿ, ಕ್ಯಾಲೆಂಡರ್, ಪಾನಿಪೂರಿ, ಸ್ವಾಮೀಜಿ, ಸಿಹಿ ಕನಸು, ಕದ್ದು ಮುಚ್ಚಿ ಹಾಗೂ ಪುತ್ರ ಈಗೆ ದೊಡ್ಡ ಸಾಲೇ ಕಟ್ಟಿಕೊಂಡು ಕನ್ನಡ ಸ್ಯಾಂಡಲ್ವುಡ್ ಡಿಮ್ಯಾಂಡ್ ನಟನಾಗಿ ಹೊರಹೊಮ್ಮಿದ್ದಾರೆ.
ಡಿಸೆಂಬರ್ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ಇ-ಪ್ರೀತಿ'ಯಲ್ಲಿ ಏನೋ ಒಂಥರಾ ಚಿತ್ರದಲ್ಲಿ ನಟಿ ತೇಜಸ್ವಿನಿ ಪ್ರಥಮ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ. ಪ್ರಿಯಾಭಾರತಿ ಅವರ ನಿರ್ದೇಶನ, ಸುಚಿತ್ರಾ ಲತಾ ಅವರ ಸಂಗೀತ ಈ ಚಿತ್ರಕ್ಕಿದೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎನ್ನಬಹುದು.