ಗುಳಿಕೆನ್ನೆ ನಟ ದಿಗಂತ್ ಅವರ ಚಿತ್ರರಂಗದ ಗಾಡ್‌ಫಾದರ್ ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ ಎಂಬುದು ಸ್ಯಾಂಡಲ್‌ವುಡ್ ಹೊಸ ಸುದ್ದಿ.
ಈ ಚಿತ್ರದ ವಿಶೇಷವೆನೆಂದರೆ ಮತ್ತೊಬ್ಬ ಯುವ ನಟ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಪಂಚರಂಗಿಯಲ್ಲಿ ...ಲೈಫು ಇಷ್ಟೇನೆ ಎಂದು ಕುಣಿದು ಕುಪ್ಪಳಿಸಿದ್ದ ದಿಗಂತ್‌ಗೆ ಕೂಡ್ಲು ಅವರ ಜೊತೆಯಲ್ಲಿ ಕೆಲಸ ಮಾಡುವುದೆಂದರೆ ಎಲ್ಲಿಲ್ಲದ ಸಂತೋಷ ಎಂದಿದ್ದಾರೆ.
ಈಗ ಕೂಡ್ಲು ಅವರು ಪಕ್ಕಾ ಕಮರ್ಷಿಯಲ್ ಚಿತ್ರವನ್ನು ನಿರ್ದೇಶಿಸಲು ಹೊರಟಿರುವುದು ಗಾಂಧಿನಗರದ ಮಂದಿಗೆ ಆಶ್ಚರ್ಯಮೂಡಿಸಿದೆ. `ಮತ್ತೆ ಮುಂಗಾರು' ನಿದೇಶಿಸಿದ ದ್ವಾರ್ಕಿ ಅವರ ಕಥೆ ಹಾಗು ಸಂಭಾಷಣೆ ಈ ಚಿತ್ರಕ್ಕಿರುವುದು ಒಬ್ಬಳೇ ನಾಯಕಿ. ಮುಂಬೈ ಆಮದು ಮಾಡಿಕೊಂಡ ಬೆಡಗಿ ಶೀತಲ್. ಇದೊಂದು ತ್ರಿಕೋನ ಪ್ರೇಮ ಕಥೆ ಎನ್ನುವುದರಲ್ಲಿ ಸಂಶಯವಿಲ್ಲ.
ಪ್ರಜ್ವಲ್ ತಂದೆ ಹಿರಿಯ ನಟ ಡೈನಾಮಿಕ್ ದೇವರಾಜ್ ಅವರು ಪ್ರಜ್ವಲ್ ತಂದೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಬಹುದೇ ಎಂಬುದನ್ನು ಕಾದು ನೋಡಬೇಕು.