ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಕನ್ನಡ ಚಿತ್ರರಂಗದ ಸಹ ನಿರ್ದೇಶಕರೊಬ್ಬರ ಮೇಲೆ ವರದಕ್ಷಿಣೆ ಕಿರುಕುಳ ಕೇಸು ದಾಖಲಿಸಲಾಗಿದೆ.
ಪೊರ್ಕಿ ಮತ್ತು ಕೃಷ್ಣ ಮುಂತಾದ ಚಿತ್ರಗಳ ಸಹ ನಿರ್ದೇಶನ ಕಾರ್ಯ ನಿರ್ವಹಿಸಿದ್ದ ಶಶಿಕಾಂತ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಮದುವೆಯ ದಿನ ಪಾದಪೂಜೆ ಮಾಡಲಿಲ್ಲ ಎಂಬ ಕಾರಣಕ್ಕೆ ಅವರು ಕುಪಿತಗೊಂಡಿದ್ದರು. ಮತ್ತು ಹೆಚ್ಚುವರಿ ವರದಕ್ಷಿಣೆ ತರುವಂತೆಯೂ ಪತ್ನಿಗೆ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.