ಶಿವಣ್ಣನಿಗೆ ಮರುಜನ್ಮ... ಮರ ಸುತ್ತುವ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ಶಿವರಾಜ್ ಕುಮಾರ್‌ಗೆ ಬಿಗ್ ಬ್ರೇಕ್ ನೀಡಿದ್ದು 'ಓಂ'. ಉಪೇಂದ್ರ ನಿರ್ದೇಶನದ ಮೂರನೇ ಚಿತ್ರವಿದು. ನೈಜ ರೌಡಿಗಳನ್ನೇ ಹಾಕಿಕೊಂಡು ಮಾಡಲಾಗಿದ್ದ ಈ ಚಿತ್ರ (1994) ಐದು ವರ್ಷಗಳ ಕಾಲ ನಿರಂತರ ಪ್ರದರ್ಶನ ಕಂಡಿತ್ತು. ಈಗಲೂ ಇದರ ಸ್ಯಾಟಲೈಟ್ ಹಕ್ಕುಗಳನ್ನು ವಜ್ರೇಶ್ವರಿ ಕಂಬೈನ್ಸ್ ಮಾರಾಟ ಮಾಡಿಲ್ಲ.
ಬೆಂಗಳೂರು ಭೂಗತ ಜಗತ್ತಿನ ಬಗ್ಗೆ ಬೆಳಕು ಚೆಲ್ಲಿದ ಮೊದಲ ಚಿತ್ರ ಎಂಬ ಖ್ಯಾತಿಯೂ 'ಓಂ' ಚಿತ್ರದ್ದು. ಇದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡು ನಂತರ ಡಜನ್‌ಗಟ್ಟಲೆ ಚಿತ್ರಗಳು ಬಂದು ಹೋಗಿರುವುದು ಕೂಡ ಮಹತ್ವದ ಅಂಶ. ಪ್ರೇಮಾ ನಾಯಕಿಯಾಗಿದ್ದ ಈ ಚಿತ್ರಕ್ಕೆ ಹಿಟ್ ಸಂಗೀತ ನೀಡಿದ್ದು ಹಂಸಲೇಖ.
ಈ ಚಿತ್ರ ಹಿಂದಿಗೆ 'ಅರ್ಜುನ್ ಪಂಡಿತ್', ತೆಲುಗಿಗೆ 'ಓಂಕಾರಂ' ಹೆಸರಿನಲ್ಲಿ ರೀಮೇಕ್ ಆಗಿತ್ತು. ನಂತರ ಬಂದ ಬಾಲಿವುಡ್‌ನ 'ಸತ್ಯ' ಚಿತ್ರದಲ್ಲೂ ಓಂ ಚಿತ್ರದ ಛಾಯೆಯಿತ್ತು.