ಸೆಕ್ಸ್ ಬಾಂಬ್ ಶಕೀಲಾ ಈಗ ಕನ್ನಡಿಗರ ಮತ್ತೇರಿಸಲು '90' ಚಿತ್ರದ ಮೂಲಕ ಮತ್ತೆ ಎಂಟ್ರಿ ತೆಗೆದುಕೊಂಡಿದ್ದಾರೆ. ಇವರಿಂದ ಪಡ್ಡೆ ಹುಡುಗರಿಗೆ 90 ಕಿಕ್ ಕೊಡಿಸಲು ಎಳೆದು ತರುತ್ತಿರುವರು ಸಾಧು ಕೋಕಿಲ.
WD
ಶಕೀಲಾರಂತೆ ಕಿಕ್ ಕೊಡುವವರು ಕನ್ನಡದಲ್ಲಿ ಯಾರೂ ಇಲ್ಲ ಎಂಬುದು ಸಾಧು ಯೋಚನೆ ಇರಬೇಕೋ ಏನೋ. ಹಾಗಾಗಿ ಪರಭಾಷಾ ನಟಿಯರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ. ಶಕೀಲಾ ಇದ್ದಾರೆ ಎಂದ ಮೇಲೆ ಇದೊಂದು ಡಬಲ್ ಧಮಾಕಾ ಕಾಮಿಡಿ ಚಿತ್ರ ಎನ್ನುವುದರಲ್ಲಿ ಸಂಶಯ ಬೇಕಿಲ್ಲ ಅಂತಾರೆ ಅವರು.
ಈ ಹಿಂದೆ ಕಾಮಿಸ್ವಾಮಿ ನಿತ್ಯಾನಂದನ ಕಥೆಯಾಧರಿಸಿ ಚಿತ್ರ ನಿರ್ಮಿಸಬೇಕೆಂದುಕೊಂಡಿದ್ದ ಸಾಧು ಕೋಕಿಲ, ಆ ಪ್ರಾಜೆಕ್ಟ್ ಕೈಬಿಟ್ಟು ಶಕೀಲಾ ಕೈಹಿಡಿದಿದ್ದಾರೆ. ಇಷ್ಟೆಲ್ಲಾ ವಿಶೇಷಗಳಿದ್ದರೂ, ಈ ಚಿತ್ರವನ್ನು ಸಾಧು ಕೋಕಿಲ ನಿರ್ದೇಶಿಸುತ್ತಿಲ್ಲ. ಅದರ ಹೊಣೆಯನ್ನು ತನ್ನ ಶಿಷ್ಯ ಲಕ್ಕಿ ಶಂಕರ್ಗೆ ನೀಡಿದ್ದಾರೆ. ನಿರ್ಮಾಣದ ಹೊಣೆ ಮಾತ್ರ ಸಾಧು ಮಹಾರಾಜ್ ಅವರಲ್ಲಿದೆ.
ತಾರಾಗಣದಲ್ಲಿ ರಂಗಾಯಣ ರಘು, ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ತಬಲ ನಾಣಿ, ಬಿರಾದಾರ್, ದೊಡ್ಡಣ್ಣ, ವಿ. ಮನೋಹರ್ ಸೇರಿದಂತೆ ಅತಿರಥ ಮಹಾರಥ ಹಾಸ್ಯ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರರಂಗದ ಎಲ್ಲ ಹಾಸ್ಯ ಕಲಾವಿದರನ್ನು ಒಂದು ಕಡೆ ಸೇರಿಸಬೇಕೆಂಬುದು ಸಾಧು ಕೋಕಿಲ ಅವರ ಬಹುದಿನಗಳ ಆಸೆಯಂತೆ. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ ಎನ್ನಬಹುದು. ಚಿತ್ರಕ್ಕೆ ಸಂಗೀತವನ್ನು ಅವರೇ ನೀಡುತ್ತಿದ್ದಾರೆ. ಛಾಯಾಗ್ರಹಣ ಕೃಷ್ಣಕುಮಾರ್ ಅವರದ್ದು.