ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೆಲುಗು ನಿರ್ದೇಶಕ-ನಿರ್ಮಾಪಕರಿಂದ 'ನಿನ್ನ ಜೊತೆಯಲಿ' (Ninna Jotheyali | Srinivas Gun Reddy | M Srinivasulu | Santosh)
ಸುದ್ದಿ/ಗಾಸಿಪ್
Bookmark and Share Feedback Print
 
ತೆಲುಗು ನಿರ್ದೇಶಕ ಶ್ರೀನಿವಾಸ್ ಗುನ್ ರೆಡ್ಡಿ ವರ್ಷಾಂತ್ಯದಲ್ಲಿ 'ನಿನ್ನ ಜೊತೆಯಲಿ' ಎಂಬ ಕನ್ನಡ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಡಿಸೆಂಬರ್ 16ರಂದು ಗುರುವಾರ ಈ ಚಿತ್ರದ ಮುಹೂರ್ತವೂ ನಡೆದಿದೆ.

ಈಗಾಗಲೇ 'ಅಭಿರಾಮ್' ಎಂಬ ಅವರ ನಿರ್ದೇಶನದ ಚಿತ್ರ ತೆರೆ ಕಂಡು ಗಾಂಧಿನಗರದ ಮೂಲೆ ಸೇರಿದ ನಂತರ, ಹಿಂದಿಯಲ್ಲಿ 'ಕಲ್ ಕ ನವಾಬ್' ಮಾಡಿ ಕೈ ಸುಟ್ಟುಕೊಂಡಿದ್ದರು. ಈಗ ಮತ್ತೆ ಕನ್ನಡದತ್ತ ಬಂದಿದ್ದಾರೆ. ಇದು ಇವರ ಮೂರನೇ ಚಿತ್ರ. ಈ ಬಾರಿ ಗೆಲುವು ಕಾಣುವ ಸಂಪೂರ್ಣ ಭರವಸೆ ಇಟ್ಟುಕೊಂಡಿದ್ದಾರೆ.

'ನಿನ್ನ ಜೊತೆಯಲಿ' ಚಿತ್ರ ನಿರ್ಮಿಸುತ್ತಿರುವ ಎಂ. ಶ್ರೀನಿವಾಸುಲು ಇದುವರೆಗೆ ಗಾಂಧಿನಗರವನ್ನೇ ಕಂಡವರಲ್ಲ. ಇದೇ ಪ್ರಥಮ ಬಾರಿಗೆ ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತು ಹಣ ಸುರಿಯಲು ಮುಂದಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸದಭಿರುಚಿಯ ಚಿತ್ರ ಕೊಡುವುದರ ಮೂಲಕ ತನ್ನ ಛಾಪು ಮೂಡಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ಸಂತೋಷ್ ನಾಯಕ. ಕಾಕತಾಳೀಯವೆಂಬಂತೆ ಸಂತೋಷ್‌ಗೂ ಇದು ಮೂರನೇ ಚಿತ್ರ. ಅವರ ಮತ್ತೊಂದು ಚಿತ್ರ 'ಇಷ್ಟ' ಇನ್ನಷ್ಟೇ ತೆರೆಕಾಣಬೇಕಿದೆ. ಇವರೊಂದಿಗೆ ಪ್ರದೀಪ್ ಎಂಬ ಹೊಸ ಹುಡುಗ ಕೂಡ ಅಭಿನಯಿಸುತ್ತಿದ್ದಾನಂತೆ. ಇವರಿಲ್ಲಿ ಎರಡನೆ ನಾಯಕ.

ಈ ಇಬ್ಬರಿಗೂ ಒಬ್ಬಳೇ ನಾಯಕಿ. ನಾಯಕಿಯಾಗಿ ನಟಿಸುತ್ತಿರುವ ನವ್ಯಾಗೆ ಇದು ಮೊದಲ ಚಿತ್ರ. ಇದೊಂದು ತ್ರಿಕೋನ ಪ್ರೇಮಕಥೆಯುಳ್ಳ ಚಿತ್ರ. ಕಾಮಿಡಿ, ಸೆಂಟಿಮೆಂಟ್, ಮುಗ್ದ ಹುಡುಗನ ಸುತ್ತ ಹೆಣೆದ ಕಥೆ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್ ಗುನ್ ರೆಡ್ಡಿ.

ಮೈಸೂರು, ಮಡಿಕೇರಿ, ಸಕಲೇಶಪುರ ಹಾಗೂ ಬೆಂಗಳೂರಿನ ಸುತ್ತಮುತ್ತಲಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದ್ದು, ಚಿತ್ರಕ್ಕೆ ಬಷೀರ್ ಸಂಗೀತ ಹಾಗೂ ಕಣ್ಣಚಿಂತಂ ಛಾಯಾಗ್ರಹಣವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿನ್ನ ಜೊತೆಯಲಿ, ಶ್ರೀನಿವಾಸ್ ಗುನ್ ರೆಡ್ಡಿ, ಸಂತೋಷ್, ಪ್ರದೀಪ್, ನವ್ಯಾ