ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾನಾ ಬಜಾನಾದಿಂದ 'ಪಟಾಕಿ'; ರಾಧಿಕಾ, ತರುಣ್ ಔಟ್ (Pataki | Gana Bajana | Prashanth Raj | Joshwa Sridhar)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗೆ ಬಿಡುಗಡೆಯಾಗಿ ವಿಮರ್ಶಕರಿಂದ ಬೆನ್ನು ತಟ್ಟಿಕೊಂಡು, ಕಾಣದಂತೆ ಮಾಯವಾದ 'ಗಾನಾ ಬಜಾನಾ' ಚಿತ್ರತಂಡವೀಗ 'ಪಟಾಕಿ' ಸಿಡಿಸಲು ಹೊರಟಿದೆ. ಪಟಾಕಿ ಎನ್ನುವುದು ಇವರ ಹೊಸ ಚಿತ್ರದ ಹೆಸರು. ಟೀಮ್ ಬಹುತೇಕ ಡಿಫರೆಂಟ್. ರಾಧಿಕಾ ಪಂಡಿತ್ ಮತ್ತು ತರುಣ್ ಚಂದ್ರ ಇಲ್ಲಿರುವುದಿಲ್ಲ.

ತರುಣ್ ಹಾಗೂ ಪಂಡಿತ್ ಅಭಿನಯದ ಗಾನಾ ಬಜಾನಾ ಗಾಂಧಿನಗರದಲ್ಲಿ ಅಷ್ಟೇನು ಸುದ್ದಿ ಮಾಡದೆ ಹೋದರೂ ನಿರ್ದೇಶಕ ಪ್ರಶಾಂತ್ ರಾಜ್ ತಲೆಕೆಡಿಸಿಕೊಂಡಿಲ್ಲ. ಮತ್ತೊಂದು ಪ್ರೊಜೆಕ್ಟಿಗೆ ಕೈ ಹಾಕಿದ್ದಾರೆ.

ಹಿಂದೆ 'ಲವ್ ಗುರು' ಚಿತ್ರವನ್ನು ಮಾಡಿ ಯುವಜನಾಂಗದ ಮನಸ್ಸಿಗೆ ಕಿಚ್ಚು ಹಚ್ಚಿದ್ದವರು ಪ್ರಶಾಂತ್ ರಾಜ್. ಅದೊಂದು ಹೊಸತನವನ್ನು ಕೊಟ್ಟಿದ್ದ ಚಿತ್ರ. ಅದೇ ಖುಷಿಯಲ್ಲಿ ಗಾನಾ ಬಜಾನ ಮಾಡಿದ್ದರು. ಈಗ 'ಪಟಾಕಿ' ಹಾರಿಸಲು ಹೊರಟಿದ್ದಾರೆ.

ನಿರ್ದೇಶನ ಹೊಣೆ ಪ್ರಶಾಂತ್ ರಾಜ್ ಅವರದಾದರೆ, ನಿರ್ಮಾಣವನ್ನು ಅವರ ಸಹೋದರ ನವೀನ್ ಹೊರುತ್ತಿದ್ದಾರೆ. ಈ ಚಿತ್ರ ಸಹೋದರರ ನಿರ್ಮಾಣದಲ್ಲಿ ಬರುತ್ತಿರುವ ಮೂರನೇ ಚಿತ್ರ.

ಆದರೆ, ಈ ಬಾರಿ ನೂತನ ಚಿತ್ರಕ್ಕೆ ಕಲಾವಿದರ ಬಳಗ ಮಾತ್ರ ಬೇರೆ. ಗಾನಾ ಬಜಾನ ಚಿತ್ರದ ಛಾಯಾಗ್ರಾಹಕ ಶೇಖರ್ ಹಾಗೂ ಸಂಗೀತ ನಿರ್ದೇಶಕ ಜೋಶ್ವ ಶ್ರೀಧರ್ ಇಲ್ಲೂ ಇರುತ್ತಾರೆ.

ನಾಯಕ, ನಾಯಕಿ ಹಾಗೂ ಕಲಾವಿದರ ಆಯ್ಕೆ ಇನ್ನೂ ಕೈಹಾಕಿಲ್ಲ. ಆದರೆ, ಚಿತ್ರಕಥೆ ರೆಡಿ ಮಾಡುವುದರಲ್ಲಿ ಮಗ್ನರಾಗಿದ್ದಾರಂತೆ ನಿರ್ದೇಶಕ ಪ್ರಶಾಂತ್. ಮೊದಲು ಕಥೆ ತಯಾರಾಗಲಿ, ಆಮೇಲೆ ಕಥೆಗೆ ಹೊಂದಿಕೆಯಾಗುವ ಗುಣವುಳ್ಳ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.
ಈ ಕಥೆಯಲ್ಲಿ ಚಿತ್ರದ ನಾಯಕನ ಪಾತ್ರ ಬಹಳ ಶಾರ್ಪ್ ಅಂಡ್ ಇಂಟಲಿಜೆಂಟ್. ಸಂಪೂರ್ಣ ಕಮರ್ಷಿಯಲ್ ಚಿತ್ರ.

40 ದಿನಗಳ ಚಿತ್ರೀಕರಣ ಮಾಡುವ ಯೋಚನೆ ಇದೆ. ಶ್ರೀಲಂಕಾ ಸಮೀಪವಿರುವ ದಟ್ಟ ಅರಣ್ಯದಲ್ಲಿ ಸುಮಾರು 10 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಇದೆ. ಒಂದು ಮಾತ್ರ ನಿಜ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಟಾಕಿ, ಗಾನಾ ಬಜಾನಾ, ಪ್ರಶಾಂತ್ ರಾಜ್, ಜೋಶ್ವ ಶ್ರೀಧರ್