ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ಯಾನ್ಸರ್ ರೋಗಿಯಾಗಿ ತಮಿಳರ ಮನಗೆದ್ದ ರಮೇಶ್ (Manmadhan Ambu | KS Ravikumar | Kamal Haasan | Ramesh Arvind)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಸ್ಯಾಂಡಲ್‌ವುಡ್‌ನ ಮಾಜಿ 'ತ್ಯಾಗರಾಜ' ರಮೇಶ್ ಅರವಿಂದ್‌ಗೆ ಕ್ಯಾನ್ಸರ್ ಎಂದು ಯಾರೂ ಗಾಬರಿಯಾಗಬೇಕಾಗಿಲ್ಲ. ಅವರು ಆ ಪಾತ್ರದಲ್ಲಿ ನಟಿಸಿದ್ದಾರೆ, ಅಷ್ಟೇ. ಅದ್ಭುತ ನಟನೆ ನೀಡಿದ್ದಾರೆ ಎಂದು ತಮಿಳು ಮಂದಿ ಕೊಂಡಾಡಿರುವುದು ಮಾತ್ರ ವಿಶೇಷ.

ಇದು ಮೇರು ನಟ ಕಮಲಹಾಸನ್ ನಾಯಕನಾಗಿರುವ 'ಮನ್ಮದನ್ ಅಂಬು' ಚಿತ್ರದ ಸುದ್ದಿ. ಗುರುವಾರವಷ್ಟೇ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದಿದೆ. ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳೂ ಕಾಣಿಸಿಕೊಂಡಿವೆ. ಅದರಲ್ಲಿ ಕನ್ನಡಿಗನದ್ದೂ ಒಂದು ಗರಿಯಿರುವುದು ಹೆಮ್ಮೆಯ ವಿಚಾರ.

ರಿಯಲ್ ಲೈಫ್‌ನಲ್ಲಿ ಸುರದ್ರೂಪಿ ನಟನಾಗಿರುವ ರಮೇಶ್‌ಗೆ ಇಲ್ಲಿ ಕೆ.ಎಸ್. ರವಿಕುಮಾರ್ ನೀಡಿರುವುದು ಕ್ಯಾನ್ಸರ್ ರೋಗಿಯ ಪಾತ್ರ. ನಿಜ ಜೀವನದಲ್ಲೂ ಕಮಲಹಾಸನ್ ಆಪ್ತ ಗೆಳೆಯನಾಗಿರುವ ರಮೇಶ್‌ಗೆ ಚಿತ್ರದಲ್ಲೂ ಅದೇ ಪಾತ್ರ. ರಮೇಶ್‌ಗೆ ಜೋಡಿಯಾಗಿ ಊರ್ವಶಿ ನಟಿಸಿದ್ದಾರೆ.

ಕೆಲವೇ ಹೊತ್ತು ತೆರೆಯಲ್ಲಿರುವ ಪಾತ್ರವಾಗಿರುವ ಹೊರತಾಗಿಯೂ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಮೇಶ್, ಇದು ಕೇವಲ ಅತಿಥಿ ಪಾತ್ರ. ಆದರೆ ಎಲ್ಲರಿಗೂ ಇಷ್ಟವಾಗೋ ಪಾತ್ರ. ಈ ಹಿಂದಿನ ಎಲ್ಲ ಚಿತ್ರಗಳಿಗೆ ಹೋಲಿಸಿದಲ್ಲಿ ಇದೊಂದು ವಿಶೇಷ ಗೆಟಪ್. ನನ್ನ ಪಾಲಿಗೆ ಕೇವಲ ಎರಡು ಅಥವಾ ಮೂರು ಸೀನುಗಳು ಮಾತ್ರ ಇವೆ. ಆದರೂ ತುಂಬಾ ಪ್ರಭಾವ ಬೀರುವಂತ ಸನ್ನಿವೇಶ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನ್ಮದನ್ ಅಂಬು, ಕಮಲಹಾಸನ್, ರಮೇಶ್ ಅರವಿಂದ್, ಊರ್ವಶಿ