ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವರ್ಷಗಟ್ಟಲೆ ಅಜ್ಞಾತವಾಸದಿಂದ ಮರಳಿದ ಸರಿಗಮ ವಿಜಿ (Sarigama Viji | Huli | Malashree | Kannada actor)
ಸುದ್ದಿ/ಗಾಸಿಪ್
Bookmark and Share Feedback Print
 
ಕಿರುತೆರೆ ಎಂದರೆ ಸರಿಗಮ ವಿಜಿ ಎನ್ನುವ ಕಾಲವೊಂದಿತ್ತು. ಆದರೆ ದುರಂತವೊಂದರ ಕಾರಣದಿಂದ ಕೆಲಕಾಲದಿಂದ ಅವರನ್ನು ಕಾಣಲು ಸಾಧ್ಯವಾಗಿರದೇ ಇದ್ದರೂ, ಅವರನ್ನು ಕನ್ನಡಿಗರು ಮರೆತಿರಲಾರರು. ಅಂತರ ಸರಿಗಮ ವಿಜಿ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ.
PR

ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿದ್ದ ವಿಜಿ ಅಜ್ಞಾತವಾಸಕ್ಕೆ ಕಾರಣ ಅಪಘಾತ. ಮಾಲಾಶ್ರೀ ಅಭಿನಯದ 'ಕಿರಣ್ ಬೇಡಿ' ಚಿತ್ರೀಕರಣ ಸಂದರ್ಭದಲ್ಲಿ ಸಮಯದಲ್ಲಿ ಕಾರೊಂದು ಅವರ ಮೇಲೆ ಹರಿದು ತೀವ್ರ ಗಾಯವಾಗಿತ್ತು. ವರ್ಷಗಟ್ಟಲೆ ಮನೆಯಲ್ಲೇ ಉಳಿಯಬೇಕಾದ ವಿಜಿಯೀಗ ಚೇತರಿಸಿಕೊಂಡು ಮತ್ತೆ ಚಿತ್ರರಂಗದತ್ತ ಬರುತ್ತಿದ್ದಾರೆ.

ಆದರೆ ಈ ಬಾರಿ ಪ್ರೇಕ್ಷಕರನ್ನು ಎದುರಾಬದುರು ನಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತೆರೆಯ ಹಿಂದಿನ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಅಪಘಾತದಲ್ಲಿ ಕಾಲಿಗೆ ಏಟು ಬಿದ್ದು, ನಡೆಯಲು ಕಷ್ಟವಾಗುತ್ತಿರುವುದರಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಈಗಾಗಲೇ ಓಂಪ್ರಕಾಶ್ ಅವರ 'ಹುಲಿ' ಚಿತ್ರದಲ್ಲಿ ಅವರು ತನ್ನನ್ನು ತಾನು ತೊಡಗಿಸಿಕೊಂಡು ಆತ್ಮವಿಶ್ವಾಸ ಪಡೆದುಕೊಂಡಿದ್ದಾರೆ. ಅದೇ ನಿಟ್ಟಿನಲ್ಲಿ ಓಂ ತನ್ನ ಮುಂದಿನ ಚಿತ್ರ 'ಬೆಳಗಾಂ'ನಲ್ಲೂ ಅವಕಾಶ ನೀಡಿದ್ದಾರೆ.

ಬೆಸ್ಟ್ ಆಫ್ ಲಕ್ ವಿಜಿ ಎಂದು ಹೇಳಿ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸರಿಗಮ ವಿಜಿ, ಹುಲಿ, ಮಾಲಾಶ್ರೀ, ಕನ್ನಡ ನಟಿ, ಕರ್ನಾಟಕ