ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕರ ಪಟ್ಟಿಗೆ ಸಂಗೀತ ನಿರ್ದೇಶಕ ರೇಣು ಸೇರ್ಪಡೆ! (Renu | Girish Karnad | Shruti | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
ಸಿನಿಮಾರಂಗವೇ ಒಂದು ವಿಚಿತ್ರ. ಅದು ಅಷ್ಟು ಬೇಗ ಯಾರಿಗೂ ಅರ್ಥವಾಗುವುದಿಲ್ಲ. ಹತ್ತಾರು ವರ್ಷ ಗಾಂಧಿನಗರದಲ್ಲಿ ಮೂಟೆ ಹೊತ್ತರೂ ನಿರ್ದೇಶಕನ ಕ್ಯಾಪು ಭಾರವೆನಿಸುತ್ತದೆ. ಆದರೂ ದಿನಕ್ಕೊಬ್ಬರಂತೆ ನಿರ್ದೇಶಕರು, ಸಂಗೀತ ನಿರ್ದೇಶಕರು, ಕಲಾವಿದರು ಹುಟ್ಟಿಕೊಂಡು ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಾರೆ. ಕೆಲವೇ ಕೆಲವರು ಗೆಲ್ಲುತ್ತಾರೆ, ಉಳಿದವರು ಮಲಗುತ್ತಾರೆ!

ಅದರಲ್ಲೂ ಕೆಲವೊಂದು ಮಂದಿಯದ್ದು ಭಿನ್ನ ಪ್ರವೃತ್ತಿ. ಅವರು ತಾವು ಹತ್ತಿದ ಏಣಿಯನ್ನು ಬೇರೆ ಬೇರೆ ಛಾವಣಿಗಳಿಗೆ ಇಟ್ಟು ಯಶಸ್ಸನ್ನು ಹುಡುಕುತ್ತಾರೆ. ಇಂದು ಛಾಯಾಗ್ರಾಹಕನಾಗಿದ್ದವನು ನಾಳೆ ನಿರ್ದೇಶಕ, ನಾಡಿದ್ದು ನಿರ್ಮಾಪಕನಾಗುತ್ತಾನೆ. ಗೀತರಚನೆ ಮಾಡುತ್ತಿದ್ದವರು ಸಂಗೀತ ನಿರ್ದೇಶಕರಾಗುತ್ತಾರೆ.

ಆ ಸಾಲಿಗೆ ಈಗ ಹೊಸತೊಂದು ಸೇರ್ಪಡೆಯಾಗಿರುವುದು ಸಂಗೀತ ನಿರ್ದೇಶಕ ರೇಣು. ಅವರೀಗ ನಿರ್ದೇಶಕರಾಗಿ ಹೊಸ ಅವತಾರ ಎತ್ತಿದ್ದಾರೆ.

ರೇಣು ಸಂಗೀತ ನೀಡಿರುವ ವಿನೋದ್ ಪ್ರಭಾಕರ್ ಅವರ 'ಹೋರಿ' ಮತ್ತು ತುಳು ಚಿತ್ರ 'ಕಂಚಿಲ್ದ ಬಾಲೆ' ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅದಕ್ಕೂ ಮೊದಲು ಅವರು ನಿರ್ದೇಶಕನ ಟೋಪಿಗೆ ತಲೆ ತೂರಿಸುತ್ತಿದ್ದಾರೆ.

ರೇಣು ನಿರ್ದೇಶಿಸುತ್ತಿರುವುದು ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಹಾಗೂ ಶ್ರುತಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ 'ಶಬ್ದಮಣಿ' ಚಿತ್ರಕ್ಕೆ. ಇವರಿಲ್ಲಿ ನಾಯಕ-ನಾಯಕಿಯರಲ್ಲ, ಪ್ರಮುಖ ಪಾತ್ರಧಾರಿಗಳು. ಚಿತ್ರದ ನಾಯಕ, ನಾಯಕಿ ಹಾಗೂ ಇತರ ಕಲಾವಿದರ ಹುಡುಕಾಟ ನಡೆಯುತ್ತಿದೆ.

ದೇಶ ಕಾಯುವ ಸೈನಿಕರ ಕುರಿತು ಹೆಣೆದ ಕಥೆಯಿದು. ಪಕ್ಕಾ ಕಮರ್ಷಿಯಲ್ ಚಿತ್ರ. ಗ್ರಾಮೀಣ ಭಾಗದ ಯುವಕರು ಹತ್ತನೆ ತರಗತಿ ಮುಗಿಯುತ್ತಿದ್ದಂತೆ ಸೇನೆಗೆ ಭರ್ತಿಯಗಲು ಮುನ್ನುಗ್ಗುತ್ತಾರೆ. ಇದು ಕೇವಲ ಜೀವನ ಸಾಗಿಸಲು ದಾರಿ ಎಂದುಕೊಳ್ಳದೆ, ದೇಶಭಕ್ತಿ ಇಟ್ಟುಕೊಂಡು ಸೇನೆ ಸೇರಿ ದೇಶ ಕಾಯಬೇಕು ಎನ್ನುವ ಸಂದೇಶವುಳ್ಳ ಚಿತ್ರಕಥೆಯನ್ನು ರೇಣು ಸಿದ್ಧಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೇಣು, ಗಿರೀಶ್ ಕಾರ್ನಾಡ್, ಶ್ರುತಿ, ಕನ್ನಡ ಸಿನಿಮಾ