ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಂದಾಸ್ ಹುಡುಗಿ ಪ್ರಿಯಾ ಈಗ ರೆಬೆಲ್, ಗಂಡುಬೀರಿ (Priyahasan | Bindas Hudugi | Rebel | Gandubeeri Hennu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗೆ ಬಿಡುಗಡೆಯಾದ ಪ್ರಿಯಾಹಾಸನ್ ಅಭಿನಯದ 'ಬಿಂದಾಸ್ ಹುಡುಗಿ' ಗಾಂಧಿನಗರದ ಗಲ್ಲಾಪೆಟ್ಟಿಗೆಯನ್ನು ಅಲ್ಲಾಡಿಸದಿದ್ದರೂ, ಈಕೆ ಈಗ ಗಂಡುಬೀರಿ ಹೆಣ್ಣಾಗಿ ಗಾಂಧಿನಗರದ ಮಂದಿಯನ್ನೇ ಶೇಕ್ ಮಾಡಲು 'ರೆಬೆಲ್' ಆಗಿ ಹೊಸ ಅವತಾರ ಎತ್ತಿದ್ದಾರೆ.

ಪ್ರಿಯಾಹಾಸನ್ ಈಗ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಂದು 'ರೆಬೆಲ್' - ಪಕ್ಕಾ ಆಕ್ಷನ್ ಚಿತ್ರ. ಈ ಚಿತ್ರವನ್ನು ಎ. ಗಣೇಶ್ ನಿರ್ಮಾಣ ಮಾಡುತ್ತಿದ್ದು, ಚಿತ್ರದ ಸಾಹಸ ಸಂಯೋಜನೆ ಹಾಗೂ ನಿರ್ದೇಶನದ ಹೊಣೆಗಾರಿಕೆಯನ್ನು ಥ್ರಿಲ್ಲರ್ ಮಂಜು ವಹಿಸಿಕೊಂಡಿದ್ದಾರೆ. ತೆಲುಗು ನಟ ಜೆ.ಡಿ. ಚಕ್ರವರ್ತಿ ಈ ಚಿತ್ರದ ನಾಯಕ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದವರ ಆಯ್ಕೆ ಇನ್ನೂ ಆಗಿಲ್ಲ.

ಈ ಚಿತ್ರದಲ್ಲೂ ಪ್ರಿಯಾಹಾಸನ್ ಪೊಲೀಸ್ ಅಧಿಕಾರಿ. ಈ ಚಿತ್ರವನ್ನು ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ತಯಾರಿಸಲಾಗುವುದು ಎಂದು ನಿರ್ದೇಶಕ ಮಂಜು ಹೇಳಿದ್ದಾರೆ. ಪ್ರಿಯಾಹಾಸನ್ ಅಭಿನಯದ ಮತ್ತೊಂದು ಚಿತ್ರ 'ಗಂಡುಬೀರಿ ಹೆಣ್ಣು'. ಈ ಚಿತ್ರ ಚಾಮುಂಡೇಶ್ವರಿ ಸ್ಟುಡಿಯೋ ಮಾಲಿಕರಾದ ರಾಜಲಕ್ಷ್ಮಿ ನಿರ್ಮಿಸುತ್ತಿದ್ದಾರೆ.

ಇದು ಫ್ಯಾಮಿಲಿ ಎಂಟರ್ಟೈನ್ಮೆಂಟ್. ಆದರೆ, ನಾಯಕಿಯ ಕ್ಯಾರೆಕ್ಟರ್ ಮಾತ್ರ ರಫ್ ಅಂಡ್ ಟಫ್. ಸ್ವಂತ ಬ್ಯಾನರ್ನಲ್ಲಿ ಮಾತ್ರ ಅಭಿನಯಿಸುತ್ತೇನೆ ಎಂದು ಹೇಳಿಕೊಂಡಿದ್ದ ಪ್ರಿಯಾ, ಈ ಎರಡು ಚಿತ್ರಗಳನ್ನು ಒಪ್ಪಿಕೊಂಡು ತಮ್ಮ ಮಾತನ್ನು ತಾವೇ ಮುರಿದಿದ್ದಾರೆ ಎನಿಸುತ್ತದೆ.

ಆದರೆ, ಈ ಚಿತ್ರಗಳನ್ನು ಪೂರ್ತಿಗೊಳಿಸಿದ ನಂತರ ಮತ್ತೊಂದು ಸ್ವಂತ ಬ್ಯಾನರ್ ಚಿತ್ರ ಮಾಡುತ್ತಾರಂತೆ. ಈ ಮಧ್ಯೆ ಆಕೆಯ 'ಬಿಂದಾಸ್ ಹುಡುಗಿ' 50 ದಿನಗಳನ್ನು ಪೂರೈಸಿದ ಸುದ್ದಿಯೂ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಯಾಹಾಸನ್, ಬಿಂದಾಸ್ ಹುಡುಗಿ, ರೆಬೆಲ್, ಗಂಡುಬೀರಿ ಹೆಣ್ಣು