ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ 'ಪ್ರಿನ್ಸ್' ಆಯ್ತು, ಈಗ ಭೀಮ; ಇದು ಓಂ ಮಹಾತ್ಮೆ (Bheema | Darshan | Om Prakash Rao | Ramu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಬಿಗ್ ಬಜೆಟ್ ನಿರ್ಮಾಪಕನೆಂದೇ ಖ್ಯಾತಿಯುಳ್ಳ ರಾಮು, ಈಗ ಅದಕ್ಕೆ ಹೊಂದಾಣಿಕೆಯಾಗುವ ಮತ್ತೊಂದು ದುಬಾರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅದೇ 'ಭೀಮ'. ಈಗಾಗಲೇ ಸಾಕಷ್ಟು ಏಳು-ಬೀಳುಗಳನ್ನು ಅನುಭವಿಸಿರುವ ರಾಮು ಮತ್ತೆ ಬಿಗ್ ಬಜೆಟ್ ಎಲ್ಲಿಂದ ತರುತ್ತಾರೋ ಗೊತ್ತಿಲ್ಲ.

ಆದರೂ ಕನ್ನಡಿಗರಿಗೆ 'ಭೀಮ' ದರ್ಶನ ಮಾಡಿಸುವುದಂತೆ ನಿಜವಂತೆ. ಈ ಚಿತ್ರದಲ್ಲಿ ದೈತ್ಯನ 'ದರ್ಶನ' ಮಾಡಿಸಲಿದ್ದಾರೆ. ತಪ್ಪಾಗಿ ತಿಳಿಯಬೇಡಿ, ನಟ ದರ್ಶನ್ ಈ ಚಿತ್ರ ನಾಯಕ. ರಾಮು ನಿರ್ಮಾಣದ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶಕರಂತೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ.

ಸದ್ಯಕ್ಕೆ ಭೀಮನಿಗೆ ಜೋಡಿ ಹಾಗೂ ಇನ್ನಿತರ ತಾರಾಬಳಗದ ಆಯ್ಕೆ ಆಗಬೇಕಿದೆ. ಭೀಮ ಎಂದಾಕ್ಷಣ ಮಹಾಭಾರತ ಕಣ್ಮುಂದೆ ಸುಳಿದು ಹೋಗುತ್ತದೆ. ಆದರೆ ಅಂತಹ ಚಿತ್ರ ಇದಾಗಿರದು. ಮಸಾಲೆ ಭೀಮನ ಸಿನಿಮಾ ಇದಾಗಿರಬಹುದು.

ಈಗಷ್ಟೇ ದರ್ಶನ್‌ರ 'ಪ್ರಿನ್ಸ್' ನಿರ್ದೇಶಿಸಿರುವ ಓಂಪ್ರಕಾಶ್, ಪ್ರಸಕ್ತ 'ಬೆಳಗಾಂ'ನಲ್ಲಿ ಬ್ಯುಸಿ. ಅದು ಮುಗಿಯುತ್ತಿದ್ದಂತೆ ಮತ್ತೆ ದರ್ಶನ್‌ರತ್ತ ಬರಲಿರುವ ಓಂ, ಭೀಮನನ್ನು ಸೆಟ್ಟೇರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೀಮ, ದರ್ಶನ್, ಓಂ ಪ್ರಕಾಶ್ ರಾವ್, ರಾಮು