ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಗಂತ್-ಐಂದ್ರಿತಾ ಪ್ರೇಮ ಕಲರವಕ್ಕೆ ರಿಮೇಕ್ ಚಿತ್ರ ವೇದಿಕೆ! (Diganth | Andrita Ray | Boss Engira Bhaskaran | Prabhu Sreenivas)
ಸುದ್ದಿ/ಗಾಸಿಪ್
Bookmark and Share Feedback Print
 
PR
ದಿಗಂತ್ ಮತ್ತು ಐಂದ್ರಿತಾ ರೇ ನಡುವೆ ಏನೇನೋ ನಡೆಯುತ್ತಿದೆ ಎಂಬ ಮಾತುಗಳು ಎಲ್ಲಾ ಪತ್ರಿಕೆಗಳ ಗಾಸಿಪ್ ಕಾಲಂನಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿರುವಂತೆಯೇ ಅತ್ತ ಸ್ಯಾಂಡಲ್‌ವುಡ್ ದೂದ್‌ಪೇಡ ಮತ್ತು ಮಂದಾರ ಕಂಗಳ ಮುದ್ದುಮೊಗದ ನಟಿ ಮತ್ತೆ ಒಂದಾಗುತ್ತಿದೆ. ಮತ್ತಷ್ಟು ಹತ್ತಿರವಾಗುವ ಅವರ ಬಯಕೆ ಈ ಮೂಲಕ ಈಡೇರುತ್ತಿದೆ.

ಈ ಬಾರಿ 'ಮನಸಾರೆ' ಜೋಡಿಯನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿಲ್ಲ. ಬದಲಿಗೆ 'ಜೀವಾ' ಚಿತ್ರದ ನಿರ್ದೇಶಕನಾಗಿ ಬದಲಾದ ನೃತ್ಯ ನಿರ್ದೇಶಕ ಪ್ರಭು ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೀವಾ ಮಕಾಡೆ ಮಲಗಿದ್ದರೂ, ಅದೇ ಚಿತ್ರದ ನಿರ್ಮಾಪಕರು, ಅದೇ ನಿರ್ದೇಶಕರನ್ನು ಹಾಕಿಕೊಂಡು ಹೊಸ ಚಿತ್ರ ಮಾಡಲು ಹೊರಟಿರುವುದು ಮಾತ್ರ ಅಚ್ಚರಿ.

ಪರಮೇಶ್ವರ್ ಈ ಹಿಂದೆ 'ಪಲ್ಲಕ್ಕಿ', 'ಜೀವಾ' ಚಿತ್ರಗಳನ್ನು ಮಾಡಿದವರು. ಅವರಿಗೆ ಈ ಬಾರಿ ಜತೆಯಾಗಿರುವವರು ಪ್ರೇಮ್. ಇಬ್ಬರೂ ಜತೆಗೂಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಹೆಸರು ಇನ್ನಷ್ಟೇ ಇಡಬೇಕಿದೆ. ಆದರೆ ಸ್ವಮೇಕ್ ಅಲ್ಲವೆಂಬುದು ಮಾತ್ರ ಖಾತ್ರಿ.

ಸಂಗೀತ ನಿರ್ದೇಶಕ ಮನೋಮೂರ್ತಿ ಹೊಸ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ತಮಿಳು ಚಿತ್ರ 'ಬಾಸ್ ಎಂಗಿರ ಭಾಸ್ಕರನ್' ರೀಮೇಕ್ ಚಿತ್ರವಿದು. ಆರ್ಯ ಮತ್ತು ನಯನತಾರಾ ಮುಖ್ಯ ಭೂಮಿಕೆಯಲ್ಲಿದ್ದ ಹಾಸ್ಯ ಪ್ರಧಾನ ಪ್ರೇಮ ಕಥೆಯುಳ್ಳ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದನ್ನೇ ಭಟ್ಟಿ ಇಳಿಸುವ ತಂತ್ರಕ್ಕೆ ಶ್ರೀನಿವಾಸ್ ಮುಂದಾಗಿದ್ದಾರೆ.

ಚಿತ್ರದ ಉಳಿದ ತಾರಾಗಣದಲ್ಲಿ ಮುಖ್ಯಮಂತ್ರಿ ಚಂದ್ರು, ಶರಣ್ ಸೇರಿದಂತೆ ಅನೇಕರಿದ್ದಾರೆ. ಶ್ರೀನಿವಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಈ ಜೋಡಿಯ ಆಫ್-ಸ್ಕ್ರೀನ್ ಮಸಲತ್ತುಗಳನ್ನು ಖಂಡಿತಾ ನಿರೀಕ್ಷಿಸಬಹುದು!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಗಂತ್, ಐಂದ್ರಿತಾ ರೇ, ಬಾಸ್ ಎಂಗಿರಾ ಭಾಸ್ಕರನ್, ಪ್ರಭು ಶ್ರೀನಿವಾಸ್