ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದಾಗೆ ಮದುವೆ ಆಗ್ಬೇಕಂತೆ, ಯಾರಾದ್ರೂ ಹುಡುಗ ಗೊತ್ತಾ? (Sada | Mylari | Sadha Mohammed Syed | Kannada actress)
ಸುದ್ದಿ/ಗಾಸಿಪ್
Bookmark and Share Feedback Print
 
ಇದು ಸಿನಿಮೀಯ ಸುದ್ದಿ ಅಲ್ಲ. ನಿಜ ಜೀವನದ ಸುದ್ದಿ. 'ಮೊನಾಲಿಸಾ' ಹುಡುಗಿ ಸದಾ ಆಲಿಯಾಸ್ ಸದಾ ಮೊಹಮ್ಮದ್ ಸಯ್ಯದ್‌ಗೆ ನಿಜಕ್ಕೂ ಹುಡುಗ ಬೇಕಂತೆ. ಸಿನಿಮಾ ನಟರೇ ಬೇಕು ಎಂದು ನಟಿ ಬೇಲಿಗಳನ್ನು ಹಾಕಿಲ್ಲವಾದ್ದರಿಂದ, ಯಾರು ಬೇಕಾದರೂ ಟ್ರೈ ಮಾಡಬಹುದು!
WD

ಆದರೆ ನೆನಪಿಡಿ, ಎಲ್ಲಾ ಹುಡುಗಿಯರಂತೆ ಸದಾಗೂ ತನ್ನ ನಲ್ಲನಾಗುವವ ಸುಂದರನಾಗಿರಬೇಕು, ಎಲ್ಲಾ ರೀತಿಯಲ್ಲೂ ನನ್ನ ಬೇಕು ಬೇಡಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿರಬೇಕು ಎಂಬೆಲ್ಲ ಸಾಕಷ್ಟು ಆಸೆಗಳಿವೆ.

ಹುಡುಗ ಥೇಟ್ ಹೃತಿಕ್ ರೋಷನ್ ರೀತಿಯೇ ಬೇಕಂತೆ. ಅಂದರೆ ಸ್ಫುರದ್ರೂಪಿ, ಸುದೃಢ ಮೈಕಟ್ಟು, ಸುಂದರ ಕಂಗಳನ್ನು ಹೊಂದಿರುವುದು ಕಡ್ಡಾಯ. ಜತೆಗೆ ಯುವರಾಜನಂತೆ ಮಿಂಚುವವನಾಗಿರಬೇಕು. ಅಪಾರವಾಗಿ ಪ್ರೀತಿಸುವುದಂತೂ ಕಡ್ಡಾಯ. ತಾಳ್ಮೆಯ ಸಾಕಾರ ಮೂರ್ತಿಯಾಗಿರಬೇಕು. ತುಟಿ ಬಿಚ್ಚಿದರೆ ಹಾಸ್ಯ, ಸುಲಲಿತ ಮಾತುಗಳು ಆತನದಾಗಿರಬೇಕು. ಕೌಟುಂಬಿಕ ವಾತಾವರಣಕ್ಕೆ ಹೊಂದಿಕೊಳ್ಳದೇ ಇದ್ದರೆ ಕಷ್ಟ. ಇಷ್ಟೆಲ್ಲ ಗುಣಗಳು ಯಾರಲ್ಲೇ ಇದ್ದರೂ ಸಂಪರ್ಕಿಸಬಹುದು!

ಇದು ಸದಾ ಹುಡುಗನ ಪಟ್ಟಿಯಲ್ಲಿರುವ ಕೆಲವು ಪ್ರಮುಖ ಅಂಶಗಳು. ಅಂತವನು ನಿಜಕ್ಕೂ ನಿಮಗೆ ಸಿಗ್ತಾನಾ ಅಂದ್ರೆ, ಸಿಗದೇ ಎಲ್ಲಿ ಹೋಗ್ತಾನೆ? ಆ ಬಗ್ಗೆ ನನಗೆ ಸಂಪೂರ್ಣ ಭರವಸೆಯಿದೆ. ನನ್ನ ಕನಸಿನ ಹುಡುಗ ಹೇಗಿರಬೇಕು ಎಂಬುದನ್ನು ಈಗಲೇ ನಿರ್ಧರಿಸಿಯಾಗಿದೆ ಎಂದು ನಗೆ ಚೆಲ್ಲುತ್ತಾರೆ ಜಗದೇಕ ಸುಂದರಿ.

ಹೃತಿಕ್ ರೋಷನ್‌ನಂತೆ ನನ್ನ ಗಂಡ ಇರಬೇಕು ಎಂದು ಮೇಲೆ ಹೇಳಿದಷ್ಟು ಹೋಲಿಕೆ ನಡೆಸಿದ ಮೇಲೆ ಆಕೆಗೆ ಶಾರೂಖ್ ಖಾನ್ ಕೂಡ ನೆನಪಾಗಿದ್ದಾನೆ. ಆತನ ಚಾರ್ಮ್ ಬೇಕು, ಟಾಮ್ ಕ್ರೂಸ್ ಡೆಡ್ಲಿ ಲುಕ್ ಬೇಕು, ಅದು ಬೇಕು, ಇದು ಬೇಕು ಎಂದೆಲ್ಲ ಪಟ್ಟಿಯನ್ನು ಉದ್ದುದ್ದ ಮಾಡಿದ್ದಾರೆ.

ನಿಜಕ್ಕೂ ಆಕೆಯ ಕನಸು ನನಸಾಗುತ್ತಾ? ಅಂತಹ ಹುಡುಗ 'ಅನ್ನಿಯನ್' ಚಿಗರೆ ಸದಾ ಕೈ ಹಿಡಿಯುತ್ತಾನಾ?

ಚತುರ್ಭಾಷಾ ನಟಿ ಸದಾ ಇಷ್ಟೆಲ್ಲ ಮಾತಿಗೆ ಇಳಿದದ್ದು, 'ಮದುವೆ ಯೋಚನೆ ಏನಾದರೂ ಇದೆಯೇ?' ಎಂದು ಪ್ರಶ್ನೆ ಕೇಳಿದ್ದಕ್ಕೆ. ಉತ್ತರ ಕೇಳಿದ ಪತ್ರಕರ್ತರು ಸುಸ್ತೋ ಸುಸ್ತು!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸದಾ, ಮೈಲಾರಿ, ಸದಾ ಮೊಹಮ್ಮದ್ ಸಯ್ಯದ್, ಕನ್ನಡ ನಟಿ