ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಜಕ್ಕೂ 'ಬಾಸ್' ಆದ ದರ್ಶನ್; ಅಭಿಮಾನಿಗಳಿಗೆ ಥ್ಯಾಂಕ್ಸ್ (Boss | Darshan | Navya Nair | R Raghuraj)
ಸುದ್ದಿ/ಗಾಸಿಪ್
Bookmark and Share Feedback Print
 
PR
'ಬಾಸ್' ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಬಾಸ್ ಆಗಿದ್ದಾನೆ. ನಿರ್ಮಾಪಕರ ಜೇಬು ತುಂಬಿಸುತ್ತಿದ್ದಾನೆ. ಸತತ ಸೋಲುಗಳನ್ನು ಕಂಡು ಕಂಗೆಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೂ ಈ ಸುದ್ದಿಯಿಂದ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಇದಕ್ಕೆ ಕಾರಣರಾದ ಅಭಿಮಾನಿಗಳಿಗೆ ದೂರದ ಜೈಪುರದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.

ರಮೇಶ್ ಯಾದವ್ ನಿರ್ಮಿಸಿದ್ದ, ಆರ್. ರಘುರಾಜ್ ನಿರ್ದೇಶಿಸಿದ್ದ 'ಬಾಸ್' ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿತ್ತು. ದರ್ಶನ್ ಪ್ರಮುಖ ವಲಯಗಳು ಎಂದು ಗುರುತಿಸಿಕೊಂಡಿರುವ 'ಬಿ' ಸೆಂಟರುಗಳು ಸೇರಿದಂತೆ ಬೆಂಗಳೂರಲ್ಲೂ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿತ್ರದ ಗಳಿಕೆ ಅತ್ಯುತ್ತಮವಾಗಿದೆ ಎಂದು ನಿರ್ಮಾಪಕರಿಂದ ತಿಳಿದುಕೊಂಡಿದ್ದೇನೆ. ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವುದು ನಿಜಕ್ಕೂ ನನ್ನನ್ನು ನಿರುತ್ತರನನ್ನಾಗಿ ಮಾಡಿದೆ. ಹೆಚ್ಚೇನೂ ಪ್ರಚಾರವಿಲ್ಲದೆ ಏಕಕಾಲದಲ್ಲಿ 135ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದು ನನಗೆ ಹೆದರಿಕೆ ಹುಟ್ಟಿಸಿತ್ತು. ಆದರೆ ಈಗ ನಿರಾಳನಾಗಿದ್ದೇನೆ ಎಂದು ರಾಜಸ್ತಾನದಲ್ಲಿ 'ಸಂಗೊಳ್ಳಿ ರಾಯಣ್ಣ' ಚಿತ್ರೀಕರಣದಲ್ಲಿರುವ ದರ್ಶನ್ ಹೇಳಿದ್ದಾರೆ.

ಅದೇ ಹೊತ್ತಿಗೆ ಚಿತ್ರದ ಬಗ್ಗೆ ಬಂದಿರುವ ಕೆಲವು ಟೀಕೆಗಳನ್ನು ಒಪ್ಪಿಕೊಳ್ಳಲು ದರ್ಶನ್ ಸಿದ್ಧರಿಲ್ಲ. ಅನಗತ್ಯ ಹೆಚ್ಚುವರಿ ತಿರುವುಗಳನ್ನು ಚಿತ್ರಕ್ಕೆ ನೀಡಲಾಗಿದೆ ಎಂಬುದನ್ನು ಅವರು ನಿರಾಕರಿಸಿದ್ದಾರೆ.

ಚಿತ್ರದ ಕಥೆಯ ಪ್ರಕಾರ ದ್ವಿತೀಯಾರ್ಧದಲ್ಲಿ ಇಂತಹ ತಿರುವುಗಳು ಬೇಕಾಗಿದ್ದವು. ಇದರಿಂದ ಕುತೂಹಲವೂ ಹೆಚ್ಚುತ್ತದೆ. ಸಿನಿಮಾವನ್ನು ನಾನು ನೋಡಿದ್ದು, ರಘುರಾಜ್ ನಿರೂಪನೆ ಬಗ್ಗೆ ಮೆಚ್ಚುಗೆಯಿದೆ. ಅವರು ಹಿಂದೆ ಹೇಳಿದಂತೆಯೇ ನಡೆದುಕೊಂಡಿದ್ದಾರೆ ಎಂದರು.

135ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗಿದ್ದರೂ, ಇದು ಕೇವಲ ಒಂದು ವಾರದ ಮಟ್ಟಿಗಿನ ವ್ಯವಸ್ಥೆ ಮಾತ್ರವಂತೆ. ನಂತರ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದು ಮಾಡಲಾಗುತ್ತದೆ. ಮಾಸಾಂತ್ಯದವರೆಗೆ ಚಿತ್ರ ಸರಾಗವಾಗಿ ಪ್ರದರ್ಶನವಾಗಬೇಕು ಎಂಬ ಹಿನ್ನೆಲೆಯಲ್ಲಿ ಇಂತಹ ನಿರ್ಧಾರಕ್ಕೆ ನಿರ್ಮಾಪಕರು ಬರಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ