ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು, ಕಿಟ್ಟಿ, ಯೋಗಿ ಹೀರೋಗಳಲ್ಲ, ಗೆಳೆಯರು: ಪುನೀತ್ (Hudugru | Puneet Rajkumar | Nadodigal | Madesha)
MOKSHA
ನನ್ನ ಮುಂದಿನ ಚಿತ್ರ 'ಹುಡುಗ್ರು' ಅಲ್ಲ -- ಹೀಗೆಂದು ಹೇಳಿರುವುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ತಾನು ಮತ್ತು ರಾಧಿಕಾ ಪಂಡಿತ್ ಮೊದಲ ಬಾರಿಗೆ ತೆರೆಯಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮಿಳಿನ ಸೂಪರ್ ಹಿಟ್ 'ನಾಡೋಡಿಗಳ್' ರಿಮೇಕ್ ಆಗಿರುವ ಈ ಚಿತ್ರದ ಚಿತ್ರೀಕರಣದಲ್ಲಿ ಇತ್ತೀಚೆಗಷ್ಟೇ ಪಾಲ್ಗೊಂಡಿದ್ದ ಪುನೀತ್ ಪತ್ರಕರ್ತರ ಜತೆ ಮಾತನಾಡುತ್ತಾ, ಹುಡುಗ್ರು ಎನ್ನುವುದು ನನ್ನ ಚಿತ್ರದ ಶೀರ್ಷಿಕೆ ಅಲ್ಲ. ನಾವು ಇನ್ನಷ್ಟೇ ಆ ಚಿತ್ರಕ್ಕೆ ಹೆಸರಿಡಬೇಕಿದೆ. ಹುಟ್ಟಿಕೊಂಡಿರುವ ಸುದ್ದಿಗಳು ಆಧಾರ ರಹಿತವಾದದ್ದು ಎಂದರು.

ಆದರೆ ಈ ಹೆಸರನ್ನು ಇಡಲು ಚಿಂತನೆ ನಡೆಸಿದ್ದು ಹೌದಂತೆ. ಆದರೆ ಅದು ಹೊರಗೆ ಬಂದದ್ದು ಹೇಗೆ ಎನ್ನುವುದೇ ಅವರಲ್ಲಿರುವ ಅಚ್ಚರಿ.

ನಾವು 'ಹುಡುಗ್ರು' ಶೀರ್ಷಿಕೆಯನ್ನು ಈ ಚಿತ್ರಕ್ಕೆ ಇಟ್ಟರೆ ಹೇಗಿರುತ್ತದೆ ಎಂದು ಸುಮ್ಮನೆ ಮಾತನಾಡಿದ್ದೆವು. ಅದು ಖಚಿತವಾಗಿರಲಿಲ್ಲ. ಆದರೆ ಅದಕ್ಕೂ ಮೊದಲು ಈ ಸುದ್ದಿ ಹೇಗೆ ಬಹಿರಂಗವಾಯಿತು ಎನ್ನುವುದು ನನಗೂ ಅಚ್ಚರಿ ಹುಟ್ಟಿಸಿದೆ ಎಂದು ಹೇಳಿರುವ ಪುನೀತ್, ಚಿತ್ರ ಈಗಾಗಲೇ ಶೇ.65ರಷ್ಟು ಚಿತ್ರೀಕರಣ ಮುಗಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರು, ಮೇಲ್ಕೋಟೆಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡ ತನ್ನ ಸಹನಟರ ಬಗ್ಗೆ ಇದೇ ಸಂದರ್ಭದಲ್ಲಿ ಪುನೀತ್ ಮಾತಿಗಿಳಿದರು.

ನಾನು ಶ್ರೀನಗರ ಕಿಟ್ಟಿ ಮತ್ತು ಯೋಗೀಶ್ ಅವರನ್ನು ಅಮೃತ ಮಹೋತ್ಸವ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಈಗ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದೇವೆ. ನಾವು ಸೆಟ್‌ನಲ್ಲಿದ್ದಾಗ ಹೀರೋಗಳು ಎಂಬ ಭಾವನೆಯೇ ಬರುವುದಿಲ್ಲ. ಗೆಳೆಯರಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ 'ಇಗೊ' ಸಂಘರ್ಷಗಳೂ ಇಲ್ಲ. ಒಂದೇ ಹೊಟೇಲಿನಲ್ಲಿ ಉಳಿದುಕೊಳ್ಳುತ್ತಿದ್ದೇವೆ. ಜತೆಗೆ ಉಣ್ಣುತ್ತೇವೆ, ಚಿತ್ರೀಕರಣವನ್ನು ಖುಷಿಯಿಂದಲೇ ಮುಗಿಸುತ್ತೇವೆ. ಇಲ್ಲಿ ಯಾರೂ ಹೀರೋಗಳಲ್ಲ ಎಂದೆಲ್ಲಾ ಹೇಳಿಕೊಂಡ ಪುನೀತ್, ತಾನು ಯೋಗ ಕಲಿಯುತ್ತಿರುವುದು ಹೌದೆಂದೂ ಒಪ್ಪಿಕೊಂಡರು.

ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಕಸಿನ್ ಮೂಲಕ ಶಶಿ ಎಂಬ ಯೋಗ ಶಿಕ್ಷಕರ ಪರಿಚಯವಾಯಿತು. ಅವರೀಗ ನನಗೆ ಯೋಗ ಕಲಿಸುತ್ತಿದ್ದಾರೆ. ನನ್ನ ತಂದೆ ಯೋಗದಲ್ಲಿ ಪರಿಣತರಾಗಿದ್ದರು. ಅವರಂತೆ ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಉದ್ದೇಶ ಯೋಗ ಮಾಡಬೇಕು, ಅಷ್ಟೇ. ಆ ನಿಟ್ಟಿನಲ್ಲಿ ಖುಷಿಯಿಂದಲೇ ಮುಂದುವರಿಯುತ್ತಿದ್ದೇನೆ ಎಂದರು.

ಬಹುತಾರಾಗಣವನ್ನು ಒಳಗೊಂಡಿರುವ 'ಹುಡುಗ್ರು' ಎಂದು ಹೇಳಲಾಗಿರುವ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸುತ್ತಿರುವುದು ಮಾದೇಶ. ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಚಿತ್ರವಿದು.