ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಾದಂಬರಿ ಆಧರಿತ ಕಲಾತ್ಮಕ ಚಿತ್ರ 'ಮಾಗಿಯ ಕಾಲ' ಸಿದ್ಧ (Magiya Kala | Shivarudraih | Ondu Soorina Kelage | Eshwara Chandra)
ಈಶ್ವರಚಂದ್ರ ಅವರ ಕಾದಂಬರಿ 'ಒಂದು ಸೂರಿನ ಕೆಳಗೆ' ಆಧರಿತ ಚಿತ್ರ 'ಮಾಗಿಯ ಕಾಲ'. ಈ ಚಿತ್ರವನ್ನು ಶಿವರುದ್ರಯ್ಯ ನಿರ್ದೇಶಿಸಿದ್ದಾರೆ. ಹಿಂದೆ ಹಂಸಲೇಖಾ ಅವರ ಸ್ವದೇಸಿ ಸಂಸ್ಥೆಗೆ 'ಭಗವತಿ ಕಾಡು' ಚಿತ್ರವನ್ನು ಶಿವರುದ್ರಯ್ಯ ಮಾಡಿಕೊಟ್ಟಿದ್ದರು. ಆದರೆ, 'ಭಗವತಿ ಕಾಡು' ಬಿಡುಗಡೆಗೆ ಮುನ್ನವೇ ಈ 'ಮಾಗಿಯ ಕಾಲ' ಸಿದ್ಧವಾಗಿದೆ.

ಈ ಚಿತ್ರವನ್ನು ಸದ್ದಿಲ್ಲದೇ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಪ್ರಥಮ ಕಾಪಿ ಹೊರಬಂದಿದ್ದು, ಸೆನ್ಸಾರ್ ಸಹ ಆಗಿದೆಯಂತೆ. ನವೆಂಬರ್ ಅಂತ್ಯದಲ್ಲಿ ಚಿತ್ರ ಆರಂಭಗೊಂಡಿತ್ತು. ಡಿಸೆಂಬರ್ 28ಕ್ಕೆ ಮೊದಲ ಪ್ರತಿ ಕೈಗೆ ಬಂದು, 31ಕ್ಕೆ ಸೆರ್ನಾರ್ ಸರ್ಟಿಫಿಕೇಟ್ ಪಡೆದಿದೆ. ಕಳೆದ ವರ್ಷದ ಸಾಲಿಗೆ 'ಮಾಗಿಯ ಕಾಲ' ಸೇರಿದೆ.

ಇಷ್ಟು ಆತುರದಲ್ಲಿ ಚಿತ್ರವನ್ನು ಪೂರೈಸಿದ ಶಿವರುದ್ರಯ್ಯ 2010 ಸಾಲಿನ ಪ್ರಶಸ್ತಿ ಚಿತ್ರಗಳ ಸಾಲಿಗೆ ಸೇರಿಸಲು ಕಳುಹಿಸಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಚಿತ್ರ ಪೂರ್ತಿಗೊಳಿಸಲು ನಿರ್ಮಾಪಕರಾದ ಭಾಗ್ಯ ಚಿನ್ನಸ್ವಾಮಿ ಚೆನ್ನಾಗೇ ಸಾಥ್ ನೀಡಿದ್ದರಂತೆ.

ಯಾಂತ್ರಿಕ ಬದುಕು, ವೇಗದ ಜೀವನ ಕ್ರಮ ಹಾಗೂ ಮೆಟಿರಿಯಲಿಸ್ಟಿಕ್ ಪ್ರವೃತ್ತಿಗಳಿಂದ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಗಳು ಸಡಿಲವಾಗುತ್ತಿರುವ ಬಗ್ಗೆ, ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಹಿರಿಯ ಜೀವಗಳು ಬದುಕಿನ ಕೊನೆ ದಿನಗಳಲ್ಲಿ ತಮ್ಮ ಮಕ್ಕಳಿಂದಲೇ ತಿರಸ್ಕ್ಕತರಾಗುವ ದಾರುಣ ಕಥೆಯೇ ಹಂದರ ಎಂದಿದ್ದಾರೆ ನಿರ್ದೇಶಕ ಶಿವರುದ್ರಯ್ಯ.

ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗದಲ್ಲಿ ನಿನಾಸಂ ನಿಶಾಂತ್ ನಾಯಕ. ಕಿರುತೆರೆಯ ಬಿಂದುಶ್ರೀ ನಾಯಕಿ. ಛಾಯಾಗ್ರಹಣ ಸಿನಿಟೆಕ್ ಸೂರಿ, ಸಂಗೀತ ಎಸ್.ಪಿ. ವೆಂಕಟೇಶ್ ಇತರರು ಇದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಂಭವವಿದೆ.