ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸಂಗೊಳ್ಳಿ ರಾಯಣ್ಣ'ನ ಹೋರಾಟಕ್ಕೆ ಆನೆ, ಕುದುರೆಗಳ ಸೃಷ್ಟಿ (Sangolli Rayanna | Darshan | Jayaprada | Naganna)
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಚಾಲೆಂಜ್ ಆಗಿ ಪರಿಗಣಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಭಾರೀ ಬಜೆಟಿನ ಐತಿಹಾಸಿಕ ಚಿತ್ರಕ್ಕೆ ಅವರು ನಡೆಸಿರುವ ಸಿದ್ಧತೆ, ಮಾಡುತ್ತಿರುವ ತ್ಯಾಗ ಅಷ್ಟಿಷ್ಟಲ್ಲ. ಇಷ್ಟದಿಂದ ಕಷ್ಟಪಷ್ಟು ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಯುದ್ಧವೇ ಪ್ರಮುಖ. ಅಂತಹ ಯುದ್ಧಕ್ಕೆ ಸಾವಿರಾರು ಆನೆ-ಕುದುರೆಗಳ ಅಗತ್ಯವಿದೆ. ಅಷ್ಟನ್ನು ನೈಜವಾಗಿಯೇ ಮಾಡುವುದು ಅಸಾಧ್ಯ. ಬಜೆಟ್ ದೃಷ್ಟಿಯಿಂದ ಮಾತ್ರವಲ್ಲ, ಇತರ ಕಾರಣಗಳಿಂದಲೂ ನಿಜವಾದ ಪ್ರಾಣಿಗಳನ್ನು ಪೂರ್ತಿಯಾಗಿ ಬಳಸಿಕೊಳ್ಳಲಾಗದು.

ಹಾಗಾಗಿ ಹಲವು ಆನೆ, ಕುದುರೆಗಳನ್ನು ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ಕಲಾವಿದರ ಪ್ರತಿಕೃತಿಗಳೂ ಕೃತಕವಾಗಿ ಸಿದ್ಧವಾಗುತ್ತಿವೆ. ಇವುಗಳನ್ನು ನಿರ್ಮಿಸಿರುವುದು ರಾಜಸ್ತಾನದ ಕಲಾವಿದರು. ಶೀಘ್ರದಲ್ಲೇ ಇದನ್ನು ಜೈಪುರಕ್ಕೆ ಕಳುಹಿಸಿಕೊಡಲಾಗುತ್ತದೆಯಂತೆ.

ಇವುಗಳನ್ನು ಬಳಸುವುದು ಯುದ್ಧದ ಸಂದರ್ಭದಲ್ಲಿ. ಸಾಮಾನ್ಯವಾಗಿ ಇಂತಹ ದೃಶ್ಯಗಳಿಗೆ ಬಳಕೆ ಮಾಡುವುದು ಗ್ರಾಫಿಕ್ಸ್. ಆದರೆ ಇಲ್ಲಿ ಕೃತಕ ಸೈನ್ಯ ಬಳಸಲಾಗುತ್ತದೆ. ಪ್ರಾಣಿಗಳು ಅಥವಾ ಸೈನಿಕರು ಸಾವನ್ನಪ್ಪುವ ದೃಶ್ಯಗಳು, ತಲೆ-ಕೈ-ಕಾಲುಗಳನ್ನು ಕಳೆದುಕೊಂಡ ಸಂದರ್ಭಗಳಿಗೆ ಹೀಗೆ ಸೃಷ್ಟಿ ಮಾಡಲಾಗಿರುವ ಪ್ರತಿಕೃತಿಗಳನ್ನು ಉಪಯೋಗಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಾಗೆಂದು ಕೇವಲ ಕೃತಕ ಸೈನಿಕರು ಮತ್ತು ಪ್ರಾಣಿಗಳನ್ನೇ ಬಳಸಲಾಗುತ್ತಿದೆ ಎಂದುಕೊಳ್ಳಬೇಕಾಗಿಲ್ಲ. ಅವುಗಳು ಕೂಡ ಸಾಥ್ ನೀಡಲಿವೆ, ಅಷ್ಟೆ. ಜೀವಂತ ಆನೆ, ಕುದುರೆ ಮತ್ತು ಸೈನಿಕರ ಸಂಖ್ಯೆ ಎಷ್ಟೇ ಕಡಿಮೆಯೆಂದರೂ ಸಾವಿರಗಳ ಸಂಖ್ಯೆಯಲ್ಲಿರುತ್ತದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಜಯಪ್ರದಾ ಅವರು ಕಿತ್ತೂರ ರಾಣಿ ಚೆನ್ನಮ್ಮಳಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಾಗಣ್ಣ. ಇದರ ಮೂಲಕ ದರ್ಶನ್ ನಟನೆಯಲ್ಲಿ ಹೊಸ ಮಗ್ಗುಲನ್ನು ಕಂಡುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.