ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಮುನಾ ಅಂತಿಂಥ ಹೆಣ್ಣಲ್ಲ, ಮೊಗೆದಷ್ಟು ಉಕ್ಕುವ ಬಲು ಜಾಣೆ (Bangalore sex racket | Yamuna | Surakshit | Nanda Gopal)
PR
ಮೊನ್ನೆಯಷ್ಟೇ ಸಿಕ್ಕಿ ಬಿದ್ದಿರುವ ಬಹುಭಾಷಾ ನಟಿ ಯಮುನಾ ಗಿರಾಕಿಗಳಿಂದ ಎರಡನೇ ಬಾರಿ ಮುಟ್ಟಿಸಿಕೊಂಡವಳಲ್ಲ ಎಂಬುದು ಸೇರಿದಂತೆ ಹತ್ತು ಹಲವು ಕುತೂಹಲಕಾರಿ ವಿಚಾರಗಳು ಒಂದೊಂದಾಗಿಯೇ ಬಯಲಾಗುತ್ತಿದೆ.

ಅದರಲ್ಲಿ ಮಹತ್ವವಾದುದು ಎಂದರೆ ಆಕೆಯ ಕರ್ನಾಟಕದವಳೇ ಆಗಿದ್ದಾಳೆ ಎನ್ನುವುದು. ಕನ್ನಡತಿಯೇ ಆಗಿರುವ ಈಕೆ ತೆಲುಗಿನಲ್ಲಿ ಹೆಚ್ಚು ಬೇಡಿಕೆಯಿರುವ ಕಾರಣ ಹೈದರಾಬಾದಿಗೆ ಹಾರಿದ್ದಳು. ಆದರೆ ಬೆಂಗಳೂರಿನ ಜತೆಗಿನ ಸಂಪರ್ಕ ಹಾಗೆಯೇ ಉಳಿದಿತ್ತು.

ಪೊಲೀಸ್ ಮೂಲಗಳೇ ಹೇಳುವ ಪ್ರಕಾರ, ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಮುನಾ ಯಾವತ್ತೂ ತನ್ನ ಗಿರಾಕಿಯನ್ನು ಎರಡನೇ ಬಾರಿ ಹತ್ತಿರ ಸೇರಿಸಿಕೊಂಡವಳಲ್ಲ. ಇದು ಎಷ್ಟರ ಮಟ್ಟಿಗಿನ ಲಾಭವಾಗುತ್ತಿತ್ತು ಎಂದರೆ, ಯಾವತ್ತಾದರೂ ಪೊಲೀಸರಿಗೆ ಸಿಕ್ಕಿ ಬಿದ್ದರೂ 'ನಮ್ಮದು ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿರುವ ಲೈಂಗಿಕ ಸಂಪರ್ಕ, ಇದು ವೇಶ್ಯಾವಾಟಿಕೆಯಲ್ಲ' ಎಂದು ತಿಪ್ಪೆ ಸಾರಿಸುವಷ್ಟು!

ಅಲ್ಲದೆ, ಎಷ್ಟೇ ಹಣ ಕೊಟ್ಟರೂ ಎರಡನೇ ಬಾರಿ ಗಿರಾಕಿಯೊಬ್ಬನಿಗೆ ಸುಖ ಕೊಡಲು ಯಮುನಾ ಸುತರಾಂ ಒಪ್ಪುತ್ತಿರಲಿಲ್ಲ. ಹಾಗೆಂದು ಬಲವಂತ ಮಾಡುವವರು ಕೂಡ ಇಲ್ಲಿ ಯಾರೂ ಇಲ್ಲ.

ಯಾಕೆಂದರೆ, ಒಬ್ಬ ಗಿರಾಕಿ ಒಂದು ಬಾರಿಗೆ ಮಾತ್ರ ಎಂಬ ಈ ಸೂತ್ರವನ್ನು ಯಮುನಾ ಮಾತ್ರ ಪಾಲಿಸುತ್ತಿದ್ದುದಲ್ಲ, ಆಕೆಯ ಏಜೆಂಟ್, ಮಂಗಳೂರು ಮೂಲದ ಸುರಕ್ಷಿತ್ ಕೂಡ. ಯಾವತ್ತೂ ತನ್ನ ಹುಡುಗಿಯರನ್ನು ಎರಡನೇ ಬಾರಿ ಯಾವುದೇ ಗ್ರಾಹಕನಿಗೆ ಒಪ್ಪಿಸಿದವನಲ್ಲ. ಅಲ್ಲದೆ, ತನ್ನ ಗ್ರಾಹಕರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸಿಕೊಳ್ಳುತ್ತಾ, ಹಳಬರಿಂದ ಕಳಚಿಕೊಳ್ಳುವುದು ಕೂಡ ಆತನ ಸಂಪ್ರದಾಯ. ಹುಡುಗಿಯರಿಗಂತೂ ಆತನಿಗೆ ಯಾವತ್ತೂ ಕೊರತೆಯಾಗಿದ್ದೇ ಇಲ್ಲ. ಆತನಿಗೆ ಮುಂಬೈ ಮತ್ತು ದೆಹಲಿಯಿಂದಲೂ ಬೇಕಾದಷ್ಟು ಹುಡುಗಿಯರು ಲಭ್ಯರಾಗುತ್ತಿದ್ದರು.

ಇದು ಸಾಕಷ್ಟು ರಿಸ್ಕ್ ವ್ಯವಹಾರ ಎಂಬುದನ್ನು ತಿಳಿದಿದ್ದ ಸುರಕ್ಷಿತ್, ಸಾಕಷ್ಟು ಮುನ್ನೆಚ್ಚೆರಿಕೆ ವಹಿಸುತ್ತಿದ್ದ. ಸಿಕ್ಕಿ ಬಿದ್ದರೂ, ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ವಾರಾಂತ್ಯಗಳಲ್ಲಿ ಮಾತ್ರ ಫೀಲ್ಡಿಗಿಳಿಯುತ್ತಿದ್ದ. ತನ್ನದೇ ಹೆಸರಿನಲ್ಲಿ 3 ಸ್ಟಾರ್ ಅಥವಾ 5 ಸ್ಟಾರ್ ಹೊಟೇಲುಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದ. ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ ಆಗಿದ್ದುದರಿಂದ ಯಾರಿಗೂ ಇದು ಸಂಶಯ ಬರುತ್ತಿರಲಿಲ್ಲ.

ಅದಕ್ಕೆ 2.5 ಲಕ್ಷ, ಇದಕ್ಕೆ 25 ಸಾವಿರ...
ಗಿರಾಕಿಗಳ ಜತೆ ಹೋಗಬೇಕಿದ್ದರೆ ದಿನಕ್ಕೆ 2.5 ಲಕ್ಷ ಕೊಡಲೇ ಬೇಕು. ಅದೂ ವಿಮಾನದ ಖರ್ಚು ಸೇರಿದಂತೆ ಎಲ್ಲಾ ವೆಚ್ಚಗಳನ್ನು ನೋಡಿಕೊಂಡು ಅಷ್ಟು ಯಮುನಾಗೆ ಸಿಗಬೇಕು.

ಸಿನಿಮಾದಲ್ಲಾದರೆ ದಿನಕ್ಕೆ 25,000 ರೂಪಾಯಿಗಳಿಗಿಂತ ಹೆಚ್ಚು ಯಾರೂ ಕೊಟ್ಟವರಲ್ಲ. ಹೆಚ್ಚಾಗಿ ಕಾಣಿಸಿಕೊಳ್ಳುವ ಧಾರಾವಾಹಿಗಳಲ್ಲಿ ಅಷ್ಟಕಷ್ಟೇ. ದಿನವೊಂದಕ್ಕೆ ಅಲ್ಲಿ ಸಿಗುವುದು ಕೇವಲ 10,000 ರೂಪಾಯಿಗಳು ಮಾತ್ರ. ಇವಿಷ್ಟು ಸಾಲದೆಂದು ದೊಡ್ಡ ಮೊತ್ತದ ಹಿಂದೆ ಬಿದ್ದ ಯಮುನಾ, ವೇಶ್ಯಾವಾಟಿಕೆಯನ್ನೇ ಪಾರ್ಟ್ ಟೈಮ್ ಲಾಭದ ನೌಕರಿಯನ್ನಾಗಿ ಮಾಡಿಕೊಂಡಿದ್ದಳು.

ಫೇಸ್‌ಬುಕ್‌ ನೋಡಿ ಮರಳಾದ...
ಯಮುನಾಳ ಫೇಸ್‌ಬುಕ್ ಪ್ರೊಫೈಲ್ ನೋಡಿದ್ದ ಗಿರಾಕಿ ಆಕೆಯೇ ಬೇಕೆಂದು ಬುಕ್ ಮಾಡಿದ್ದ. ಅಲ್ಲಿ ಆಕೆಯ ಭಾವಚಿತ್ರಗಳನ್ನೂ ನೋಡಿದ್ದ. ಆದರೆ ನಿಜವಾಗಿ ಯಮುನಾಳನ್ನು ನೋಡಿದಾಗ ನಿರಾಸೆ ವ್ಯಕ್ತಪಡಿಸಿದ್ದ.

ಇದು ಸಿಕ್ಕಿಬಿದ್ದ ಸಾಫ್ಟ್‌ವೇರ್ ಕಂಪನಿ ಸಿಇಒ ನಂದಗೋಪಾಲ್ ಪಾಡು. ಫೇಸ್‌ಬುಕ್ಕಿನಲ್ಲಿ ಫೇಸ್ ನೋಡಿ ಇಷ್ಟಪಟ್ಟ ಮೇಲೆ, ಈಕೆಗೆ ಜಾಸ್ತಿ ವಯಸ್ಸಾಗಿದೆ ಎಂದು ಆತ ಅಸಮಾಧಾನ ವ್ಯಕ್ತಪಡಿಸಿದ್ದ ಎಂದು ಪೊಲೀಸ್ ಮೂಲಗಳಿಂದ ಬಹಿರಂಗವಾಗಿದೆ.

ನಾನಂತೂ ನಂಬೋದಿಲ್ಲ...
ಹೀಗೆಂದು ಹೇಳಿರುವುದು 'ಕಂಠೀರವ' ವಿಜಯ್. ತನ್ನ ಸಹೋದರಿಯಾಗಿ ಈ ಚಿತ್ರದಲ್ಲಿ ನಟಿಸಿರುವಾಕೆಯ ಬಗ್ಗೆ ಟಿವಿಗಳಲ್ಲಿ ಬಂದಿರುವುದನ್ನು ನಾನಂತೂ ನಂಬುವುದಿಲ್ಲ ಎಂದು ದುನಿಯಾ ವಿಜಿ ಹೇಳಿಕೊಂಡಿದ್ದಾರೆ.

ಅದೇ ಚಿತ್ರದ ನಿರ್ದೇಶಕ ತುಷಾರ್ ರಂಗನಾಥ್ ಆಘಾತ ವ್ಯಕ್ತಪಡಿಸಿದ್ದಾರೆ. ನನಗೆ ಆಘಾತವಾಯಿತು. ಆಕೆಯ ಜತೆ ನನಗೆ ಯಾವುದೇ ಸಂಪರ್ಕವಿರಲಿಲ್ಲ. ಚಿತ್ರದ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿದ್ದವರು ಯಮುನಾಳನ್ನು ಆ ಪಾತ್ರಕ್ಕೆ ಆರಿಸಿದ್ದರು. ಆದರೂ ಆಕೆ ಇಂತಹ ಹುಡುಗಿ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಸೆಟ್‌ನಲ್ಲಿ ಅತ್ಯುತ್ತಮ ನಡತೆ ತೋರುತ್ತಿದ್ದ ಹುಡುಗಿಯಾಕೆ. ಶೂಟಿಂಗ್ ಸಂದರ್ಭದಲ್ಲಿ ಆಕೆಯ ಗಂಡ ಕೂಡ ಸೆಟ್‌ಗೆ ಬರುತ್ತಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರ ಗಿರಾಕಿ ಯಾರು?
ಯಮುನಾ ಜತೆ ಸಿಕ್ಕಿ ಬಿದ್ದವರಲ್ಲಿ ಆಂಧ್ರಪ್ರದೇಶದ ಜನಪ್ರಿಯ ರಾಜಕಾರಣಿಯೊಬ್ಬರ ಪುತ್ರ ಕೂಡ ಇದ್ದ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ. ಅವರು ಯಾರೆಂಬುದರ ಕುರಿತು ಎಷ್ಟೇ ಪ್ರಶ್ನಿಸಿದರೂ, ಪೊಲೀಸರಂತೂ ಬಾಯಿ ಬಿಡುತ್ತಿಲ್ಲ.

ಮೂಲಗಳ ಪ್ರಕಾರ ಆ ಯುವಕನ ತಂದೆ ಆಂಧ್ರ ರಾಜಕಾರಣದಲ್ಲಿ ಹಲವು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿದ್ದವರು. ಆತನ ಕುಟುಂಬಕ್ಕೆ ಚಿತ್ರರಂಗದ ಭಾರೀ ನಂಟೂ ಇದೆ. ಯುವಕ ಈಗ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವಾತ. ಇದಕ್ಕಿಂತ ಹೆಚ್ಚು ಹೈದರಾಬಾದ್ ಪೊಲೀಸ್ ಆಯುಕ್ತ ಎ.ಕೆ. ಖಾನ್ ಏನೂ ಹೇಳುತ್ತಿಲ್ಲ!