ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರ 'ಪರಮಾತ್ಮ'ದಲ್ಲಿ ಪುನೀತ್‌ಗೆ ಮೂವರು ನಾಯಕಿಯರು (Paramathma | Puneet Rajkumar | Yogaraj Bhat | Deepa)
PR
ಸದ್ಯಕ್ಕೆ 'ಹುಡುಗ್ರು' ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್‌ಗಾಗಿ ಮೂವರು ಹುಡುಗಿಯರನ್ನು ಸರದಿಯಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದಾರಂತೆ ಯೋಗರಾಜ ಭಟ್ಟರು.

ಇದು ಅವರ ನಿರ್ದೇಶನದ 'ಪರಮಾತ್ಮ'ನಿಗಾಗಿ. ಹೌದು, ಪರಮಾತ್ಮ ಎಂದೊಡನೆ ಇದು ದೇವರ ಚಿತ್ರ ಅಂದುಕೊಳ್ಳುವಷ್ಟು ಹಳೆಯ ಜನರಲ್ಲ ನಾವು. ಆದರೂ, ಒಬ್ಬ ಪರಮಾತ್ಮನಿಗೆ ಮೂವರು ನಾಯಕಿಯರನ್ನು ಥಳುಕು ಹಾಕಿಕೊಂಡು ಹೇಗೆ ಚಿತ್ರ ನಿರ್ಮಿಸುತ್ತಾರೆ ಎಂಬುದೇ ಕುತೂಹಲದ ಸಂಗತಿ.

ಏನೇ ಇರಲಿ, ಚಿತ್ರದ ನಾಯಕಿಯರ ವಿಷಯಕ್ಕೆ ಬರೋಣ. ಒಬ್ಬರು ನಾಯಕಿ ದೀಪಾ, ದರ್ಶನ್‌ ನಾಯಕತ್ವದ 'ಸಾರಥಿ' ಚಿತ್ರದಲ್ಲಿ ನಾಯಕಿಯಾಗಿರುವವರು. ಇನ್ನಿಬ್ಬರು ನಾಯಕಿಯರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಐಂದ್ರಿತಾ ರೇ ಅಥವಾ ನಿಧಿ ಸುಬ್ಬಯ್ಯ ಇಬ್ಬರಲ್ಲಿ ಒಬ್ಬರನ್ನು ಎರಡು ನಾಯಕಿಯರಲ್ಲಿ ಒಬ್ಬರ ಜಾಗಕ್ಕೆ ಭಟ್ಟರು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಆದರೆ ಮೂರನೇ ಆಯ್ಕೆಯೂ ಕನ್ನಡದವರೇ ಆದ್ರೆ, ಪರಮಾತ್ಮನಿಗೆ ಇಷ್ಟ ಆಗೋದಿಲ್ಲ ಅನ್ನೋದು ಭಟ್ರ ಲೆಕ್ಕಾಚಾರ ಇದ್ದಂತಿದೆ. ಅದೇ ಕಾರಣಕ್ಕೆ ಭಟ್ರು ಮುಂಬೈ ಕಡೆ ದೃಷ್ಟಿ ಹಾಯಿಸಿದ್ದಾರೆ. ಹೀಗೆಲ್ಲ ಸುದ್ದಿಯಾಗಿರುವುದು ಹೌದಾದದರೂ, ಇವೆಲ್ಲ ಇನ್ನಷ್ಟೇ ಖಚಿತವಾಗಬೇಕಿದೆ.

ಫೆಬ್ರವರಿ ಆರಂಭದ ಹೊತ್ತಿಗೆ 'ನಾಡೋಡಿಗಳ್' ರಿಮೇಕ್ 'ಹುಡುಗ್ರು' ಎಂದು ಹೇಳಲಾಗುತ್ತಿರುವ ಪುನೀತ್‌ಗೆ ರಾಧಿಕಾ ಪಂಡಿತ್ ನಾಯಕಿಯಾಗಿರುವ ಚಿತ್ರದ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಬಳಿಕ, ಅಂದರೆ ಫೆಬ್ರವರಿಯಲ್ಲಿ 'ಪರಮಾತ್ಮ' ಶೂಟಿಂಗ್‌ಗೆ ಸಿದ್ಧವಾಗಲಿದ್ದಾನೆ.

ಜಯಣ್ಣ ಮತ್ತು ಯೋಗರಾಜ್ ಭಟ್ಟರು ಜತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂತೋಷ್ ಕುಮಾರ್ ಪಾತಾಜೆ ಛಾಯಾಗ್ರಾಹಣ ಮಾಡಲಿದ್ದರೆ, ಮತ್ತೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ. ದೀಪು ಕುಮಾರ್ ಸಂಕಲನ ಮಾಡುತ್ತಾರೆ.

ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯೂ ಅಂತಿಮಗೊಂಡಿದೆ.
ಸಂಬಂಧಿತ ಲೇಖನಗಳು