ಐಟಂ ರಾಣಿ ಮುಮೈತ್ ಖಾನ್ ಹೊಸ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಬಿಸಿ-ಬಿಸಿಯಾಗಿ ಕಾಣಿಸಿಕೊಂಡಿರುವ ಮುಮೈತ್, ಚಿತ್ರರಸಿಕರಿಗೆ ಮತ್ತೊಂದು ಮುಖ ತೋರಿಸಲಿದ್ದಾರೆ. ಅದು ಕನ್ನಡ ಚಿತ್ರದಲ್ಲಿ ಎನ್ನುವುದು ವಿಶೇಷ. ಯಾವ ಚಿತ್ರದಲ್ಲಿ ಅನ್ನೋದು ಸದ್ಯಕ್ಕೆ ಸೀಕ್ರೆಟ್.
ಪ್ರತಿಯೊಬ್ಬರ ಹಾವ-ಭಾವದಲ್ಲಿ ಒಂದೊಂದು ರೀತಿಯ ಗುಣಲಕ್ಷಣಗಳು ಇರುವಂತೆ, ಮುಮೈತ್‌ಗೂ ತನ್ನದೇ ಆದ ಮುಖಚರ್ಯೆ ಇದೆ. ಹಾಗೆಯೇ ಆಕೆಯ ಕಣ್ಣು, ದೇಹಸೌಂದರ್ಯದಲ್ಲಿ ಆವೇಶ, ರೋಷ ಅಡಗಿದೆ. ಲೇಡಿ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಈ ಮೊದಲು ಹಲವು ನಿರ್ದೇಶಕರು ಆಹ್ವಾನಿಸಿದ್ದರೂ, ಮುಮೈತ್ ಒಪ್ಪಲಿಲ್ಲ. ಆದರೆ ಈಗ ಸೈ ಎಂದಿದ್ದಾರೆ.
ಚಿತ್ರ ರಸಿಕರಿಗೆ ಸರದಿಯಾಗಿ ಯಾವುದನ್ನು ಎಷ್ಟೆಷ್ಷು ತೋರಿಸಬೇಕೆಂಬ ಕಲೆಯನ್ನು ಕರಗತ ಮಾಡಿಕೊಂಡಿರುವ ಮುಮೈತ್ ಇನ್ಮುಂದೆ ರಸಿಕರನ್ನು ಬೆಚ್ಚಿಬೀಳಿಸಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸಿಟಿಜನ್, ಒರಟ, ರಾಜ್, ಸ್ವಯಂಕೃಷಿ, ಶೌರ್ಯ ಮುಂತಾದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ತಣಿಸಿದ್ದಾರೆ.
ಮತ್ತೊಂದೆಡೆ 'ಪೋಕಿರಿ' ನಂತರ ಮುಮೈತ್‌ಗೆ ಬ್ರೇಕ್ ನೀಡಿದ್ದ ನಿರ್ದೇಶಕ ಪೂರಿ ಜಗನ್ನಾಥ್, ಮಾರ್ಚ್‌ನಲ್ಲಿ ಬಿಡುಗಡೆಗೆ ಕಾದಿರುವ ತನ್ನ ಮುಂದಿನ ಚಿತ್ರ 'ನೇನು ನಾ ರಾಕ್ಷಸಿ'ಯಲ್ಲಿ ಮುಖ್ಯ ಪಾತ್ರ ನೀಡಿದ್ದಾರೆ.