ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂದಿನಿ ಹಾಲು-ಚಾಕೊಲೇಟ್ ತಗೋಳಿ: ರಾಗಣಿ, ಐಂದ್ರಿತಾ (Raagini Dwivedi | Aindrita Ray | Punit Rajkumar | Nandini products)
PR
ಹೌದು, ಸುಂದರ ಕಂಗಳ ಹುಡುಗಿ ರಾಗಿಣಿ ದ್ವಿವೇದಿಯವರು ನಂದಿನಿ ಹಾಲನ್ನೇ ತಗೋಳಿ ಎನ್ನಲಿದ್ದಾರೆ. ಇನ್ನೊಬ್ಬ ನಟಿ ಅಪರೂಪಕ್ಕೆ ಕನ್ನಡ ಮಾತನಾಡುವ ಕನ್ನಡತಿ, ಐಂದ್ರಿತಾ ರೇ ನಂದಿನಿ ಚಾಕೋಲೇಟ್ ಚಪ್ಪರಿಸಿ ಎಂದು ಪ್ರಚಾರ ಮಾಡಲಿದ್ದಾರೆ ಅರ್ಥಾತ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆರೋಗ್ಯ ಹಾಲನ್ನೇ ಬಳಸಿ ಎಂದು ಕೆಲ ವರ್ಷಗಳ ಹಿಂದೆ ಕೊಡಗಿನ ಬೆಡಗಿ ಪ್ರೇಮಾ ಹೇಳಿದ ನಂತರ ಬಹುಶಃ ಕನ್ನಡದ ನಟಿಯರು ಕ್ಷೀರೋತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆ ಕೊರತೆಯನ್ನು ಕನ್ನಡದ ಇಬ್ಬರು ನಟಿಯರು ನೀಗಿಸಲಿದ್ದಾರೆ.

ಹಾಗೆ ನೋಡಿದರೆ ಸರಕಾರಿ ಸ್ವಾಮ್ಯದ ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿ ಎಂಬ ಸಂಸ್ಕೃತಿಯ ಹುಟ್ಟಿಗೆ ಕಾರಣರಾಗಿದ್ದು ವರನಟ ಡಾ. ರಾಜ್‌ಕುಮಾರ್. ಬಳಿಕ ಕೆಲ ವರ್ಷಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ನಂದಿನಿ ಪರ ಪ್ರಚಾರ ಮಾಡಿದ್ದರು. ಒಂದು ಕಡೆಯಿಂದ ಆಲ್ಕೋಹಾಲ್, ಇನ್ನೊಂದು ಕಡೆಯಿಂದ ಹಾಲು ಎಂಬ ನೀತಿಗಾಗಿ ಅವರು ಟೀಕೆಗೂ ಒಳಗಾಗಿದ್ದರು.

ಈ ಸರದಿಯ ಇತ್ತೀಚಿನ ಹೆಸರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕಳೆದ ಒಂದು ವರ್ಷದಿಂದ ಅವರು ನಂದಿನಿ ಉತ್ಪನ್ನಗಳ ರಾಯಭಾರಿ.

ಕೇವಲ ನಾಯಕರನ್ನಷ್ಟೇ ಸೆಳೆಯುತ್ತಿದ್ದ ಕರ್ನಾಟಕ ಹಾಲು ಒಕ್ಕೂಟವು ಈ ಬಾರಿ ನಾಯಕಿಯರಿಗೂ ಬಲೆ ಹಾಕಿದೆ. ಕರ್ನಾಟಕದಲ್ಲೇ ನೆಲೆಯೂರಿರುವ ಮೂಲತಃ ಹೊರರಾಜ್ಯದವರಾದ ಇಬ್ಬರು ಹುಡುಗಿಯರಾದ ರಾಗಿಣಿ ಮತ್ತು ಐಂದ್ರಿತಾ ಜತೆ ಒಪ್ಪಂದ ಮಾಡಿಕೊಂಡಿದೆ.

ಕೆಎಂಎಫ್ ಆಡಳಿತ ನಿರ್ದೇಶಕ ಪ್ರೇಮನಾಥ್ ಅವರ ಪ್ರಕಾರ ರಾಗಿಣಿ ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿ. ಐಂದ್ರಿತಾ ಅವರು ನಂದಿನಿ ಚಾಕೋಲೇಟುಗಳ ರಾಯಭಾರಿ. ಶೀಘ್ರದಲ್ಲಿಯೇ ಇವರ ಭಾವಚಿತ್ರಗಳುಳ್ಳ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಇಲ್ಲಿ ಕುತೂಹಲಕಾರಿ ವಿಚಾರವೆಂದರೆ, ರಾಜ್‌ಕುಮಾರ್, ಉಪೇಂದ್ರ ಮತ್ತು ಪುನೀತ್ ಉಚಿತವಾಗಿ ನಟಿಸಿದ್ದ ನಂದಿನಿ ಜಾಹೀರಾತುಗಳಲ್ಲಿ ನಟೀಮಣಿಯರು ಹಣ ಪಡೆಯಲಿದ್ದಾರೆಯೇ ಅಥವಾ ಹಿರಿಯರ ಹಾದಿಯಲ್ಲಿ ಸಾಗಲಿದ್ದಾರೆಯೇ ಎನ್ನುವುದು.
ಇವನ್ನೂ ಓದಿ