ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಯಂತಿ, ಯಶ್, ಹರಿಪ್ರಿಯಾಗೆ ರೋಟರಿ ಪ್ರಶಸ್ತಿ, ಸನ್ಮಾನ (Yash | Haripriya | Rotary awards | Jayanti)
PR
ಹಿರಿಯ ನಟಿ ಜಯಂತಿ, ಸುಂದರಾಂಗ ಯಶ್ ಮತ್ತು ಕನ್ನಡದ ಹುಡುಗಿ ಹರಿಪ್ರಿಯಾರ ಸಾಧನೆಗಳನ್ನು ಮೆಚ್ಚಿ ಶನಿವಾರ ಸಂಜೆ ಬಿಡದಿ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಯನಗರ ರೋಟರಿ ಕ್ಲಬ್ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ.

'ಮೊಗ್ಗಿನ ಮನಸು' ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದ ಯಶ್, ಮೊದಲ ಚಿತ್ರ ಹೊರತುಪಡಿಸಿ ಹಲವು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸಿನಿಂದ ದೂರ ಉಳಿದವರು. ಆದರೆ ಇತ್ತೀಚಿನ 'ಮೊದಲಾ ಸಲ' ಅವರಲ್ಲಿ ಮತ್ತೆ ನಗು ಮೂಡಿಸಿದೆ. ಈ ನಿಟ್ಟಿನಲ್ಲಿ ವರ್ಷದ ಆರಂಭದಲ್ಲಿಯೇ ಯಶ್ ಮುಡಿಗೆ ಪ್ರಶಸ್ತಿಯ ರೂಪದಲ್ಲಿ ಗರಿಯೊಂದು ಏರಿದೆ.

'ಮನಸುಗಳ ಮಾತು ಮಧುರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಹರಿಪ್ರಿಯಾ ಕೂಡ ಪ್ರಶಸ್ತಿಗೆ ಭಾಜನರಾದರು. ಯಶಸ್ಸಿನ ವಿಚಾರಕ್ಕೆ ಬಂದರೆ, ಇದುವರೆಗೂ ಒಂದೇ ಒಂದು ಹಿಟ್ ಚಿತ್ರ ನೀಡಲು ವಿಫಲವಾಗಿರುವ ನಟಿಯೀಕೆ. ಆದರೆ ಪ್ರತಿ ಚಿತ್ರದಲ್ಲೂ ತನ್ನ ಛಾಪನ್ನು ಒತ್ತಿದ ಖ್ಯಾತಿ ಅವರಿಗಿದೆ.

ವಿಶೇಷ ಎಂದರೆ ಅಗ್ನಿ ಶ್ರೀಧರ್ ಅವರ ಸುಮನ್ ಕಿತ್ತೂರು ನಿರ್ದೇಶನದ 'ಕಳ್ಳರ ಸಂತೆ'ಯಲ್ಲಿ ಯಶ್ - ಹರಿಪ್ರಿಯಾ ನಾಯಕ-ನಾಯಕಿಯರಾಗಿದ್ದುದು. ಈ ಚಿತ್ರ ಹಿಟ್ ಆಗದಿದ್ದರೂ ಪ್ರಶಂಸೆಗೆ ಪಾತ್ರವಾಗಿತ್ತು.

ಇವರ ಜತೆ ಹಿರಿಯ ನಟಿ ಜಯಂತಿ ಅವರನ್ನೂ ಸನ್ಮಾನಿಸಲಾಯಿತು.

ನಾಯಕ-ನಾಯಕಿಯರಿಗೆ ನೀಡುವ ಪ್ರಶಸ್ತಿಗಳನ್ನು 2010ರಲ್ಲಿ ರಮ್ಯಾ ಮತ್ತು ಶ್ರೀನಗರ ಕಿಟ್ಟಿ, 2009ರಲ್ಲಿ ಪೂಜಾ ಗಾಂಧಿ ಮತ್ತು ಅಜಯ್ ರಾವ್ ರೋಟರಿ ಕ್ಲಬ್ ಪ್ರಶಸ್ತಿ ಪಡೆದುಕೊಂಡಿದ್ದರು.
ಇವನ್ನೂ ಓದಿ