ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶರ್ಮಿಳಾ ಮಾಂಡ್ರೆಗೆ ಎಲ್ಲಾ ಭಾಷೇಲೂ ನಟಿಸುವ ಆಸೆಯಂತೆ (Sharmila Mandre | Kannada actress | Karnataka | Tamil)
PR
ಹೋಮ್ ಪ್ರೊಡಕ್ಷನ್ 'ಸಜನಿ' ಮೂಲಕ ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಾಲ್ಕು ವರ್ಷಗಳೇ ಸಂದಿವೆ. ಆದರೆ ಅವರದ್ದು ಮಾತ್ರ ಆರಕ್ಕೇರದ-ಮೂರಕ್ಕಿಳಿಯದ ಪರಿಸ್ಥಿತಿ. ಈ ನಡುವೆ ಮಾತಿಗೆ ಸಿಕ್ಕಿರುವ ಕನ್ನಡತಿ, ತನಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸುವ ಆಸೆಯಿದೆ. ಇದೇ ವರ್ಷ ಅದು ಈಡೇರುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ನನ್ನ ತವರು. ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ಮಂಗಳೂರು ಮೂಲದ ವಿನಯ್ ರೈ ನಾಯಕರಾಗಿರುವ 'ತಿಲು ಮುಲು' ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಉಳಿದಿರುವುದು ತೆಲುಗು ಮತ್ತು ಮಲಯಾಳಂ. ಅವೆರಡರಲ್ಲೂ ನಟಿಸುವುದು ನನ್ನ ಬಯಕೆ. ಆ ಮೂಲಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ ಹೆಮ್ಮೆ ನನ್ನದಾಗಬೇಕು.

ತೆಲುಗಿನಿಂದ ಈಗಾಗಲೇ ಕೆಲವು ಆಫರುಗಳು ಬಂದಿವೆ. ಆದರೆ ಯಾವ ಚಿತ್ರಕ್ಕೂ ಅಂತಿಮಗೊಂಡಿಲ್ಲ. ಇನ್ನು ಕೆಲವೇ ವಾರಗಳಲ್ಲಿ ನಾನು ಟಾಲಿವುಡ್ ಎಂಟ್ರಿ ಬಗ್ಗೆ ಸ್ಪಷ್ಟವಾಗಿ ಹೇಳಿ ಬಿಡುತ್ತೇನೆ. ಅಂತೂ ಈ ವರ್ಷ ಮುಗಿಯುವುದರೊಳಗೆ ಎಲ್ಲಾ ನಾಲ್ಕು ಭಾಷೆಗಳಲ್ಲಿ ತಲಾ ಒಂದೊಂದರಂತೆ ಅಭಿನಯಿಸುವ ನಿರೀಕ್ಷೆಯಲ್ಲಿದ್ದೇನೆ ಎಂದು ಆಸೆ ಕಂಗಳಿಂದ ಹೇಳಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿಂದ ತಮಿಳು ಚಿತ್ರರಂಗದ ಸಂಪರ್ಕದಲ್ಲಿದ್ದೀರಿ, ಭಾಷೆಯನ್ನು ಕರಗತ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ಅವರ ಉತ್ತರ 'ಇಲ್ಲ' ಎನ್ನುವುದು. ವಾಕ್ಯಗಳ ಎಡೆಯಲ್ಲಿ ಒಂದೊಂದು ತಮಿಳು ಶಬ್ಧ ಬಳಕೆ ಮಾಡುವುದಷ್ಟೇ ಸಾಧ್ಯವಾಗಿದೆಯಂತೆ.

ತಮಿಳು ಹೊರತುಪಡಿಸಿ ಶರ್ಮಿಳಾ ಕೈಯಲ್ಲಿರುವ ಚಿತ್ರ, ಪಾರ್ವತಿ ಮೆನನ್ ಕೈ ಬಿಟ್ಟ ಪ್ರೇಮ್ ನಾಯಕರಾಗಿರುವ ಕನ್ನಡದ 'ಧನ್ ಧನಾ ಧನ್'.

ಅವೆರಡಕ್ಕೂ ದಿನಾಂಕಗಳನ್ನು ಹೊಂದಾಣಿಕೆ ಮಾಡಲು ಯತ್ನಿಸುತ್ತಿದ್ದೇನೆ. ಶೀಘ್ರದಲ್ಲೇ ಎರಡೂ ಚಿತ್ರಗಳು ಮುಗಿಯಲಿವೆ. ಸಿಕ್ಕಾಪಟ್ಟೆ ಖುಷಿಯಲ್ಲಿದ್ದೇನೆ ಎಂದಿರುವ ಶರ್ಮಿಳಾಗೆ, ವಿನಯ್ ನಾಯಕನಾಗಿರುವ ಚಿತ್ರದಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಬರುವ ಬಬ್ಲಿ ಪಾತ್ರವಂತೆ.

ಪುರುಸೊತ್ತಿಲ್ಲದೆ ಚಿತ್ರೀಕರಣಗಳಲ್ಲಿ ಭಾಗವಹಿಸುತ್ತಿರುವ ಕನ್ನಡತಿ ಇನ್ನಷ್ಟು ಆಫರುಗಳು ಬರುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಕಾಲ ಕೂಡಿ ಬರಬೇಕಾದರೆ, ಬಹುಶಃ ಆಕೆ ಈಗ ನಟಿಸುತ್ತಿರುವ ಚಿತ್ರಗಳು ಬಿಡುಗಡೆಯಾಗಬೇಕು. ಅದಕ್ಕಾಗಿ ಕಾಯಬೇಕಾದ ದಿನಗಳಿನ್ನು ಬಹಳ ದೂರದಲ್ಲಿಲ್ಲ.
ಇವನ್ನೂ ಓದಿ