ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಜರಾಸಂಧ' ಬರೀ ಆಕ್ಷನ್ ಚಿತ್ರವಲ್ಲ, ಮಹಾಭಾರತ: ಶಶಾಂಕ್ (Jarasandha | Shashank | Vijay | Kannada film)
ನಾಯಕಿಯರ ಬದಲಾವಣೆಯಿಂದಾಗಿ ವಿವಾದಕ್ಕೊಳಗಾಗಿದ್ದ 'ಜರಾಸಂಧ' ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆಕ್ಷನ್ ಹೀರೋ ದುನಿಯಾ ವಿಜಯ್ ನಟಿಸ್ತಾರೆ ಅಂದ್ರೆ
PR
ಅದರಲ್ಲಿ ಫೈಟ್‌ಗೇನು ಕಡಿಮೆ ಇಲ್ಲ ಎಂದು ಭಾವಿಸುವವರಿಗೆ ನಿರ್ದೇಶಕ ಶಶಾಂಕ್ ಬೇರೆಯದೇ ರೀತಿಯಲ್ಲಿ ಉತ್ತರಿಸಿದ್ದಾರೆ. 'ಜರಾಸಂಧ' ಕೇವಲ ನಾಲ್ಕು ಫೈಟು, ಸ್ಪಲ್ಪ ಮನರಂಜನೆ ಕೊಡುವ ಚಿತ್ರವಲ್ಲ. ಅದು ಪೌರಾಣಿಕ ಮಹಾಭಾರತ ಕಥೆಯ ಪಾತ್ರವನ್ನಾಧರಿಸಿದ್ದು ಎಂದಿದ್ದಾರೆ.


ಅಂದರೆ ಮಹಾಭಾರತದಲ್ಲಿ ಬರುವ ಜರಾಸಂಧನಂತೆ ಪೋಷಾಕು ಧರಿಸಿದ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆಯೇ ಎಂದು ಧಿಗ್ಭ್ರಾಂತರಾಗಬೇಕಿಲ್ಲ. ಏಕೆಂದರೆ 'ಜರಾಸಂಧ'ನನ್ನು ಯಥಾರೂಪದಲ್ಲಿ ತೋರಿಸದೆ, ಅವನ ಪ್ರಾಬಲ್ಯ, ಎಷ್ಟು ಬಾರಿ ಕೊಲ್ಲಲು ಪ್ರಯತ್ನಿಸಿದರೂ ಹೋಗದ ಕಠಿಣ ಜೀವ ಮುಂತಾದ ಪ್ರಮುಖ ಅಂಶಗಳನ್ನು ಸೇರಿಸಿ ಸುಂದರ ಕಥೆ ತಯಾರಿಸಲಾಗಿದೆ. ಒಟ್ಟಾರೆ ಇದು ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ.

ಚಿತ್ರವನ್ನು ತಕ್ಷಣಕ್ಕೆ ಒಪ್ಪಿಕೊಂಡಿದ್ದ ವಿಜಯ್, ಶಶಾಂಕ್ ಮಾತಿನಂತೆ ಸ್ಪಂದಿಸುತ್ತಿದ್ದಾರಂತೆ. ನೈಜತೆ ಮತ್ತು ಕಥೆಗೆ ಹೆಚ್ಚು ಒತ್ತು ಕೊಡಲಾಗಿದೆ. ಈ ಚಿತ್ರದಲ್ಲೂ ರಂಗಾಯಣ ರಘು ಜತೆ ನಟಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ ನಾಯಕ ವಿಜಯ್.

ಪ್ರೇಕ್ಷಕರ ಮನದಲ್ಲಿ ಬಹುಕಾಲದವರೆಗೆ ಉಳಿಯುವಂತ ವಿಶಿಷ್ಟ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಳ್ಳಲಿದ್ದಾರೆ. ಐಂದ್ರಿತಾ ರೇ ಬದಲಿಗೆ ನಾಯಕಿಯಾಗಿ ಪ್ರಣೀತಾ ಕರಿಚಿರತೆ ವಿಜಯ್‌ಗೆ ಜತೆಯಾಗಲಿದ್ದಾರೆ.

ಅರ್ಜುನ್ ಸಂಗೀತ ಸಂಯೋಜಿಸಿರುವ ಎರಡು ಗೀತೆಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದಿದ್ದಾರೆ ಹ್ಯಾಟ್ರಿಕ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಶಶಾಂಕ್.
ಇವನ್ನೂ ಓದಿ