ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕೆಂಪೇಗೌಡ' ಮುಗಿಸಿದ ಸುದೀಪ್ ಚಿತ್ತ ತೆಲುಗಿನ 'ಈಗ'ದತ್ತ (SS Rajamouli | Eega | Sudeep | Kempe Gowda)
A scene from Kempe Gowda
PR
ಮಹತ್ವಾಕಾಂಕ್ಷೆಯ 'ಕೆಂಪೇಗೌಡ' ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಚಿತ್ತವೀಗ 'ಮಗಧೀರ' ಖ್ಯಾತಿಯ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಈಗ'ದತ್ತ ಹರಿದಿದೆ. ಫೆಬ್ರವರಿ 21ರಿಂದಲೇ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದನ್ನು ಸ್ವತಃ ಸುದೀಪ್ ಖಚಿತಪಡಿಸಿದ್ದಾರೆ.

'ಅಸ್ತ ಚೆಮ್ಮಾ' ಖ್ಯಾತಿಯ ನಾಣಿ ನಾಯಕನಾಗಿರುವ, ಸೆನ್ಸೇಷನಲ್ ಸಮಂತಾ ಋತು ಪ್ರಭು ನಾಯಕಿಯಾಗಿರುವ ಚಿತ್ರದಲ್ಲಿ ಸುದೀಪ್ ಅವರದ್ದು ಖಳ ನಾಯಕನ ಪಾತ್ರ. ಚಿತ್ರದಲ್ಲಿ ಹೆಚ್ಚು ಮಹತ್ವ ಹೊಂದಿರುವ ಪಾತ್ರವಿದು ಎಂದು ಹೇಳಲಾಗಿದೆ.

ನೊಣವನ್ನು ಆಧರಿಸಿದ 'ಈಗ' ಆನಿಮೇಷನ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಒಳಗೊಂಡ ಆಕ್ಷನ್ ಚಿತ್ರ. ಕೋರಪಾಟಿ ಸಾಯಿ ಎಂಬವರು 'ವರಾಹಿ ಚಲನಾ ಚಿತ್ರಂ' ಬ್ಯಾನರಿನಡಿಯಲ್ಲಿ ಇದನ್ನು ನಿರ್ಮಿಸುತ್ತಿದ್ದಾರೆ. ಸಂಗೀತ ಎಂ.ಎಂ. ಕೀರವಾಣಿಯವರದ್ದು. ಜೇಮ್ಸ್ ಫ್ಲೋಡ್ಸ್ ಛಾಯಾಗ್ರಾಹಕರು, ಕೊಟಗಿರಿ ವೆಂಕಟೇಶ್ವರ ರಾವ್ ಅವರು ಸಂಕಲನ ಕಾರ್ಯ ನಿರ್ವಹಿಸಲಿದ್ದಾರೆ.

ಕೇವಲ ಅತಿಥಿ ನಟ ಅಥವಾ ಮಾಮೂಲಿ ಖಳನಟನ ಪಾತ್ರ ಇದು ಅಲ್ಲದೇ ಇರುವುದರಿಂದ ಮತ್ತು ಸಿನಿಮಾದಲ್ಲಿ ಪಾತ್ರವು ಹೆಚ್ಚು ಮಹತ್ವವನ್ನು ಹೊಂದಿರುವುದರಿಂದ ತಾನು 'ಈಗ'ದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಎಂದು ಸುದೀಪ್ ಈ ಹಿಂದೆಯೇ ಹೇಳಿಕೊಂಡಿರುವುದನ್ನು ಇದೀಗ ಸ್ಮರಿಸಬಹುದಾಗಿದೆ.

ಮಾರ್ಚ್ ಮೊದಲ ವಾರದಲ್ಲಿ ಕೆಂಪೇಗೌಡ...
ತಮಿಳಿನ 'ಸಿಂಗಂ' ರಿಮೇಕ್ 'ಕೆಂಪೇಗೌಡ' ಮಾರ್ಚ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ. ಪ್ರಸಕ್ತ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದೆ. ಇನ್ನುಳಿದ ಕೆಲಸಗಳು ಭರದಿಂದ ಸಾಗುತ್ತಿದೆ.

ಈ ಬಗ್ಗೆ ಮಾತಿಗೆ ಸಿಕ್ಕಿರುವ ಸುದೀಪ್, ಡಿಜಿಟಲ್ ಕೆಲಸ ಕಾರ್ಯ ನಡೆಯುತ್ತಿದೆ. ಚಿತ್ರಕ್ಕಾಗಿ ನಾವು ಹಗಲು ರಾತ್ರಿ ಶ್ರಮಿಸುತ್ತಿದ್ದೇವೆ. ನನ್ನ ಸಹಾಯಕರಂತೂ ಕಳೆದೊಂದು ವಾರದಿಂದ ನಿದ್ದೆಯೇ ಮಾಡಿಲ್ಲ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ. ಫೆಬ್ರವರಿ 20 ಅಥವಾ 21ರ ಹೊತ್ತಿಗೆ 'ಕೆಂಪೇಗೌಡ'ದ ಮೊದಲ ಪ್ರತಿ ಸಿದ್ಧವಾಗಲಿದೆ ಎಂದಿದ್ದಾರೆ.

ಶಂಕರೇಗೌಡರು ನಿರ್ಮಿಸುತ್ತಿರುವ, ಗ್ಲಾಮರ್ ಐಕಾನ್ ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಈ ಚಿತ್ರ ಐತಿಹಾಸಿಕವೇನಲ್ಲ. ಪೊಲೀಸ್ ಅಧಿಕಾರಿಯ ಸಾಹಸ ಕಥೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಇವನ್ನೂ ಓದಿ