ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್, ಶಿವಣ್ಣ, ಕಿಚ್ಚ, ಉಪ್ಪಿ ಸಂಭಾವನೆ ಎಷ್ಟು ಗೊತ್ತಾ? (Puneet Rajkumar | Shivaraj Kumar | Sudeep | Remuneration of kannada stars)
PR

ಶಿವಣ್ಣನೂ ಕಡಿಮೆಯಲ್ಲ...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಗ್ಗೆ ಕೊಂಕೆತ್ತುವವರು ಯಾರೂ ಇಲ್ಲ. ಆದರೆ ಹಿಟ್ ವಿಚಾರಕ್ಕೆ ಬಂದಾಗ ಇದನ್ನೇ ಹೇಳುವಂತಿಲ್ಲ. ಇತ್ತೀಚಿನದ್ದನ್ನೇ ಪರಿಗಣಿಸುವುದಾದರೆ, ಕಳೆದ ಮೂರು ವರ್ಷಗಳಿಂದ ಅವರು ಕಂಡ ಏಕೈಕ ಭರ್ಜರಿ ಹಿಟ್ ಚಿತ್ರ 'ಮೈಲಾರಿ'. ಅದೂ ಕಳಪೆ ಎಂದು ಟೀಕೆಗಳನ್ನು ಎದುರಿಸಿದ ಸಿನಿಮಾ.

ಕಾದಂಬರಿ ಆಧರಿತ ಚಿತ್ರಗಳು, ವಿನೂತನ ಪ್ರಯೋಗಗಳು, ಲಾಂಗ್-ಮಚ್ಚಿನ ಚಿತ್ರಗಳು ಹೀಗೆ ಎಲ್ಲವನ್ನೂ ಸಮಾನವಾಗಿ ಪರಿಗಣಿಸಿ, ಸ್ವಮೇಕ್ ಚಿತ್ರಗಳಲ್ಲಿ ಮಾತ್ರ ನಟಿಸುವ ಸಭ್ಯ ಸೆಂಚುರಿ ಸ್ಟಾರ್ ಶಿವಣ್ಣ ಪ್ರಸಕ್ತ ಪಡೆಯುತ್ತಿರುವ ಸಂಭಾವನೆ 1.20 ಕೋಟಿ ರೂಪಾಯಿಗಳಂತೆ. ಯಾವತ್ತೂ ಬೇಡಿಕೆ ಕಳೆದುಕೊಳ್ಳದ ನಟನಾಗಿರುವುದರಿಂದ ಸಂಭಾವನೆ ಇಳಿಮುಖವಾಗುವ ಪ್ರಶ್ನೆಯೇ ಇರುವುದಿಲ್ಲ.