ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ ಮತ್ತು ನಾನು ಫ್ರೆಂಡ್ಸ್ ಅಷ್ಟೆ, ಮದ್ವೆಯಾಗಿಲ್ಲ: ನಿಖಿತಾ (Nikita Thukral | Darshan | Sangolli Rayanna | Prince)
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಆಪ್ತ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದ್ದ ಬಹುಭಾಷಾ ನಟಿ ನಿಖಿತಾ, ತನ್ನ ಮೇಲಿನ ಆರೋಪಗಳೆಲ್ಲವನ್ನೂ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ನನಗೆ ಅವರ ಜತೆ ಯಾವುದೇ ಸಂಬಂಧವಿಲ್ಲ, ಮದುವೆ ಕೂಡ ಆಗಿಲ್ಲ ಎಂದು ಕೋಪದಿಂದಲೇ ಸ್ಪಷ್ಟನೆ ನೀಡಿದ್ದಾರೆ.

ಹೀಗೆ ಸುದ್ದಿ ಮಾಡುತ್ತಿರುವವರು ಯಾರು ಎಂದು ಗೊತ್ತಾದರೆ, ಅವರ ಮುಖಕ್ಕೆ ಗುದ್ದಿ ಬಿಡುತ್ತೇನೆ. ಸೆಟ್‌ನಲ್ಲಿ ಎಲ್ಲರ ಜತೆ ಕ್ಲೋಸಾಗಿದ್ದರೆ, ಅದನ್ನೇ ಏನೇನೋ ಅಂದುಕೊಳ್ಳುತ್ತಾರೆ. ಇದು ತುಂಬಾ ನೋವು ತಂದಿದೆ. ಇತ್ತೀಚೆಗಷ್ಟೇ ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ಅದರ ಬೆನ್ನಿಗೆ ಈ ರೀತಿಯ ರೂಮರುಗಳು ಹುಟ್ಟಿಕೊಂಡಿರುವುದು ನಿಜಕ್ಕೂ ತುಂಬಾ ಬೇಸರವಾಗಿದೆ ಎಂದಿದ್ದಾರೆ.

ಇದೇ ವರ್ಷ ಮದುವೆಯಾಗುತ್ತಿರುವ ಶುಭ ಸುದ್ದಿಯನ್ನೂ ಇದೇ ಸಂದರ್ಭದಲ್ಲಿ ನಿಖಿತಾ ನೀಡಿದ್ದಾರೆ. ಆದರೆ ಹುಡುಗ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಯಾರೆಂದು ನನಗೇ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ನನಗಂತೂ ಯಾವುದೇ ಬಾಯ್ ಫ್ರೆಂಡ್ಸ್ ಇಲ್ಲ. ಭಾರತೀಯ ಸಂಪ್ರದಾಯದಂತೆ ನನ್ನ ಮದುವೆಯೂ ನಡೆಯುತ್ತದೆ. ಖಂಡಿತಾ ಹುಡುಗ ಭಾರತೀಯನೇ ಆಗಿರುತ್ತಾನೆ ಎಂದಷ್ಟೇ ತಿಳಿಸಿದ್ದಾರೆ.

ದರ್ಶನ್ ಜತೆ ಬೆನ್ನು ಬೆನ್ನಿಗೆ ಹಲವು ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಿಖಿತಾ, 'ಪ್ರಿನ್ಸ್' ಚಿತ್ರೀಕರಣ ಸಂದರ್ಭದಲ್ಲಿ ಇಂತಹ ಗಾಸಿಪ್ಪುಗಳಿಗೆ ತುತ್ತಾಗಿದ್ದರು. ಆದರೆ ಅವರ ಪ್ರಕಾರ, ಚಿತ್ರೀಕರಣದಲ್ಲಿನ ಮದುವೆಯನ್ನೇ ನಿಜವೆಂದು ಕೆಲವರು ತಪ್ಪು ತಿಳಿದುಕೊಂಡಿದ್ದಾರೆ.

ನಿಖಿತಾ ಜತೆಗಿನ ಮದುವೆ ಬಗ್ಗೆ ದರ್ಶನ್ ಮತ್ತು ಅವರ ಸಹೋದರ ದಿನಕರ್ ತೂಗುದೀಪ್ ಕೂಡ ಸ್ಪಷ್ಟನೆ ನೀಡಿದ್ದರು. ನಿಖಿತಾ ಜತೆ ಮದುವೆಯಾಗಿರುವ ಸುದ್ದಿ ನಿಜವಲ್ಲ. ಈಗಾಗಲೇ ಮದುವೆಯಾಗಿ ಒಂದು ಮಗುವನ್ನು ಹೊಂದಿರುವ ಈ ಹೊತ್ತಿನಲ್ಲಿ ಅಂತಹ ಯಾವುದೇ ಪ್ರಸಂಗ ಉದ್ಭವಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದರು.