ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಖಾಕಿ ಡ್ರೆಸ್‌ಗೆ ಬಡ್ತಿ ಪಡೆದ ಪ್ರೇಮ್ (Prem | G.K | M.D.Prakash | Kannada Film)
PR
ಪ್ರೇಮ್ ಅಭಿನಯದ 'ಐ ಯಾಮ್ ಸಾರಿ - ಮತ್ತೆ ಬನ್ನಿ ಪ್ರೀತ್ಸೋಣ' ಹಾಗೂ 'ಧನ್ ಧನಾ ಧನ್' ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿರುವ ನಡುವೆಯೇ ಅವರ ಅಭಿನಯದ ಮತ್ತೊಂದು ಹೊಸ ಚಿತ್ರ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಇದೇ ಮೊದಲ ಸಲ ಪ್ರೇಮ್ ಖಾಕಿ ಸಮವಸ್ತ್ರ ಧರಿಸುತ್ತಿರುವುದು ವಿಶೇಷ. ಇದುವರೆಗೆ ಲವ್ಲಿ ಸ್ಟಾರ್ ಪಾತ್ರಗಳಲ್ಲಿ ನಟಿಸಿದ್ದ ಪ್ರೇಮ್ ಈ ಹೊಸ ಚಿತ್ರದಲ್ಲಿ ಎಸಿಪಿ ಪಾತ್ರಕ್ಕೆ ಮುಂಬಡ್ತಿ ಹೊಂದಿದ್ದಾರೆ.

'ಖಾಕಿ ಸಮವಸ್ತ್ರ ಧರಿಸಿ ನಟಿಸಬೇಕೆಂಬುದು ನನ್ನ ಕನಸಾಗಿತ್ತು. ಈ ತನಕದ ಚಿತ್ರಗಳಲ್ಲಿ ಒಂದೊಂದು ರೀತಿಯಲ್ಲಿ ಕಾಣಿಸಿಕೊಂಡಿದ್ದೆ. ಈ ಚಿತ್ರದಲ್ಲಿ ಎಸಿಪಿ ಆಗಿ ಕಾಣಿಸಿಕೊಳ್ಳುತ್ತಿರುವುದು ಖುಷಿ ತಂದಿದೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ. ಇದರಲ್ಲಿ ನನಗೆ ಸಿಕ್ಕಿರುವ ಹೀರೋ ಪಾತ್ರ ತುಂಬಾ ಚೆನ್ನಾಗಿದೆ. ಹಾಗಾಗಿ ಅಭಿನಯಿಸಲು ಒಪ್ಪಿಕೊಂಡಿದ್ದೇನೆ' ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಪ್ರೇಮ್.

ರವಿಚಂದ್ರನ್ ಜೊತೆಗೆ ಕೆಲಸ ಮಾಡಿದ ಅನುಭವ ಇರುವ ಜೆ.ಕೆ. ಅವರ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಎಂ.ಡಿ.ಪ್ರಕಾಶ್ ಚಿತ್ರದ ನಿರ್ಮಾಪಕರು. ಚಿತ್ರದ ನಾಯಕಿ, ಇನ್ನಿತರ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ.
ಇವನ್ನೂ ಓದಿ