ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆರು ಕಥೆಗಳನ್ನು ಒಳಗೊಂಡ ಚಿತ್ರ 'ಪಂಚಾಮೃತ' (Panchamrutha | T.N.Nagesh | Shreenagara kitty | Pooja Gandhi)
PR
ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯೋಗಗಳನ್ನು ಆಗಿಂದಾಗ್ಗೆ ಮಾಡಲಾಗುತ್ತಿದೆ. 'ಪಂಚಾಮೃತ' ಶೀರ್ಷಿಕೆಯ ಚಿತ್ರದ ವಿಶೇಷವೇನೆಂದರೆ ಆರು ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕ ಟಿ.ಎನ್.ನಾಗೇಶ್ ಅವರು ಚಿತ್ರ ತಯಾರಿಸುತ್ತಿರುವುದು.

ಈ ಹಿಂದೆ ಪುಟ್ಟಣ್ಣ ಕಣಗಾಲ್ ಮೂರು ಕಥೆಗಳನ್ನು ಆಧರಿಸಿ 'ಕಥಾಸಂಗಮ' ಎಂಬ ಚಿತ್ರವನ್ನು 1975ರಲ್ಲಿ ತಯಾರಿಸಿದ್ದರು. ಇದೀಗ ಆರು ಕಥೆಗಳುಳ್ಳ 'ಪಂಚಾಮೃತ' ಹದಿನಾರು ದಿನಗಳ ಚಿತ್ರೀಕರಣವನ್ನು ಮುಗಿಸಿ ಶೇಕಡಾ 80 ರಷ್ಟು ಸಂಭಾಷಣೆಯ ಭಾಗವನ್ನು ಚಿತ್ರೀಕರಿಸಿದೆ.

ಅಂತಿಮ ಹಂತದ ಚಿತ್ರೀಕರಣ ಮಾರ್ಚ್‌‌ನಲ್ಲಿ ಸಾಗುವುದೆಂದು ನಿರ್ದೇಶಕರು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಪ್ರತಿಯೊಂದು ಕಥೆಯೂ 20 ರಿಂದ 22 ನಿಮಿಷಗಳ ಅವಧಿಯದ್ದಾಗಿದ್ದು ಅವೆಲ್ಲದರಲ್ಲೂ ದೀಪಾವಳಿ ಹಬ್ಬದ ಮೆರುಗು ಕಂಡುಬರುತ್ತದಂತೆ.

ಚಿತ್ರದ ತಾರಾಗಣದಲ್ಲಿ ರಘು ಮುಖರ್ಜಿ, ಶ್ರೀನಗರ ಕಿಟ್ಟಿ, ರವಿಶಂಕರ್, ದಿಲೀಪ್‌ರಾಜ್, ಪೂಜಾ ಗಾಂಧಿ, ರಾಧಿಕಾ ಗಾಂಧಿ, ಸುಪ್ರೀತ, ತಾರಾ, ಯಜ್ಞಾ ಶೆಟ್ಟಿ, ನಿತುದೇವ್ ರಾಜ್ ಮತ್ತಿತರರು ಇದ್ದಾರೆ. ಗವಿಪುರ ಮರಿಸ್ವಾಮಿ 'ಪಂಚಾಮೃತ'ದ ನಿರ್ಮಾಪಕರು.

ಛಾಯಾಗ್ರಹಣ ಎ.ಸಿ.ಮಹೇಂದರ್, ಸಂಗೀತ ಅಶ್ಲೇ ಅಭಿಲಾಶ್, ಸಂಕಲನ ನರಹಳ್ಳಿ ಜ್ಞಾನೇಶ್, ಸಾಹಸ ಥ್ರಿಲ್ಲರ್ ಮಂಜು, ಸಂಭಾಷಣೆ ಕ್ರಿಷ್ ಜೋಶಿ, ಸಾಹಿತ್ಯ ಡಾ. ನಾಗೇಂದ್ರ ಪ್ರಸಾದ್ , ಕವಿರಾಜ್ ಎ.ಪಿ.ಅರ್ಜುನ್ ಮತ್ತು ಬಚ್ಚಿ, ನೃತ್ಯ ಸಂಯೋಜನೆ ಸದಾ, ರೆಡ್ಡಿ ಮಾಸ್ಟರ್ ಮತ್ತು ವಸಂತ್ ಅವರದು.
ಇವನ್ನೂ ಓದಿ