ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತನ್ನ ಮಗನನ್ನೇ 'ದುಷ್ಟ' ನಾಗಿಸಿದ ಎಸ್. ನಾರಾಯಣ್ (S.Narayan | Dushta | Pankaj | Surabhi | Kannada Film)
PR
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಎಸ್. ನಾರಾಯಣ್ ಅವರಿಗೆ ವಿಶೇಷ ಸ್ಥಾನವಿದೆ. ಅವರ ಗರಡಿಯಲ್ಲಿ ತಯಾರಾಗಿ ಬಂದ ಕಲಾವಿದರು ಸ್ಯಾಂಡಲ್‌ವುಡ್‌ನಲ್ಲಿ ಬೆಳಗುತ್ತಲೇ ಇದ್ದಾರೆ. ಗೀತೆ ರಚನೆ ಮತ್ತು ಚಿತ್ರ ನಿರ್ದೇಶನ ಎರಡು ವಿಭಾಗಗಳಲ್ಲೂ ಸೈ ಎನಿಸಿಕೊಂಡಿರುವ ಎಸ್. ನಾರಾಯಣ್ 'ದುಷ್ಟ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಮತ್ತೊಮ್ಮೆ ಹೊಸ ಕೊಡುಗೆ ನೀಡಲು ಸಜ್ಜಾಗಿದ್ದಾರೆ.

ತಮ್ಮ ವೃತ್ತಿ ಬದುಕಿನಲ್ಲಿ ಕೆಲವಾರು ಏಳು ಬೀಳುಗಳನ್ನು ಕಂಡಿರುವ ನಾರಾಯಣ್ 'ದುಷ್ಟ' ಚಿತ್ರದಲ್ಲಿ ತಮ್ಮ ಪುತ್ರ ಪಂಕಜ್ ಅವರನ್ನು ಹೀರೋ ಮಾಡಿ ಹೊಸ ಸವಾಲೊಂದನ್ನು ಪ್ರಯೋಗಾತ್ಮಕವಾಗಿ ಸ್ವೀಕರಿಸುತ್ತಿದ್ದಾರೆ.

'ದುಷ್ಟ'ನ ಬಗ್ಗೆ ವಿಶೇಷ ಆಸ್ಥೆ ವಹಿಸಿರುವ ನಾರಾಯಣ್ 'ಈ ಚಿತ್ರವನ್ನು ನೋಡಿ ಚಿತ್ರ ಮಂದಿರದಿಂದ ಹೊರ ಬರುವ ಪ್ರೇಕ್ಷಕರು ಆ ಕೂಡಲೇ ದುಷ್ಟನ ಗುಂಗಿನಿಂದ ಹೊರ ಬರುವುದು ಕಷ್ಟ' ಎಂದಿದ್ದಾರೆ.

'ದುಷ್ಟ' ಚಿತ್ರದ ಚಿತ್ರೀಕರಣ ಅವರ ಹುಟ್ಟೂರಾದ ಭದ್ರಾವತಿಯ ಸುತ್ತಮುತ್ತ ನಡೆಸಲಾಗಿದೆ. ಪಂಕಜ್ ನಾಯಕರಾಗಿರುವ ಈ ಚಿತ್ರಕ್ಕೆ ಸುರಭಿ ನಾಯಕಿ. ಈ ಸೊಬಗಿನ ಜೋಡಿಯ ಕಥೆ ಕಾಲ್ಪನಿಕವಲ್ಲ. ಇದು ನಾರಾಯಣ್ ಅವರ ಸ್ನೇಹಿತನೊಬ್ಬನ ಸ್ವಯಂ ಅನುಭವದ ಕಥೆ. ನಾರಾಯಣ್ ಭದ್ರಾವತಿಯಲ್ಲಿದ್ದಾಗ ಆ ಸ್ನೇಹಿತ ತನ್ನ ಬದುಕಿನಲ್ಲಾದ ಘಟನೆಗಳನ್ನು ದಿನಾ ಬಂದು ಹೇಳುತ್ತಿದ್ದನಂತೆ. ಕಥೆ ತುಂಬಾ ವಿಚಿತ್ರವಿದ್ದು ಅದನ್ನು ನೆನಪಲ್ಲಿಟ್ಟುಕೊಂಡೇ ನಾರಾಯಣ್ ಚಿತ್ರ ತಯಾರಿಸಿದ್ದಾರೆ.

'ಮೇಲ್ನೋಟಕ್ಕೆ ದುಷ್ಟನಂತೆ ಕಾಣುವ ನಾಯಕನ ಮನಸ್ಸಿನಲ್ಲಿ ಅಂತರ್ಗತವಾಗಿ ಏನಿದೆ ಎಂಬುದನ್ನು ಚಿತ್ರಕಥೆ ಹೇಳುತ್ತದೆ. ಚಿತ್ರದ ಹಾಡುಗಳೂ ಭಿನ್ನವಾಗಿವೆ. ಚಿತ್ರದಲ್ಲಿ ದುಷ್ಟನಾಗಿರುವ ಪಂಕಜ್‌ನಲ್ಲಿ ನನ್ನ ಗೆಳೆಯನನ್ನೇ ಕಾಣುತ್ತಿದ್ದೇನೆ. ಕಥೆ ಕೇಳಿದ ಬಳಿಕ ಪಂಕಜ್ ತನ್ನ ಮ್ಯಾನರಿಸಂ ಬದಲಿಸಿಕೊಂಡು ನನ್ನ ಸ್ನೇಹಿತ ಯಾವ ರೀತಿ ನಡೆಯುತ್ತಿದ್ದ, ಮಾತನಾಡುತ್ತಿದ್ದ ಅದೇ ರೀತಿ ಚಿತ್ರಕ್ಕಾಗಿ ಅನುಕರಿಸಿದ್ದು ವಿಶೇಷ' ಎಂದಿದ್ದಾರೆ ನಾರಾಯಣ್.

ಪಂಕಜ್‌ನಲ್ಲಿ ತನ್ನ ಗೆಳೆಯನನ್ನೇ ಕಾಣುತ್ತಿದ್ದಾರಂತೆ ನಾರಾಯಣ್. ಹಾಗಾಗಿ ಚಿತ್ರ ನೋಡಿದ ಪ್ರೇಕ್ಷಕ 'ದುಷ್ಟ'ನ ಗುಂಗಿನಿಂದ ಹೊರಬರಲು ಒದ್ದಾಡಬೇಕಾದ್ದು ಖಾತ್ರಿಯೇನೋ.
ಇವನ್ನೂ ಓದಿ