ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೆ ಮತ್ತೆ ಬರ್ತಿದಾರೆ ಮೆಗಾಸ್ಟಾರ್ ಚಿರಂಜೀವಿ, ದಾರಿ ಬಿಡಿ! (Swayam Krushi | Megha Star Chiranjeevi | Veerendra babu | Mumaith Khan)
PR
ಮೆಗಾ ಸ್ಟಾರ್ ಚಿರಂಜೀವಿ 'ಸ್ವಯಂಕೃಷಿ' ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮುಮೈತ್ ಖಾನ್ ಡ್ಯಾನ್ಸ್, ಅಂಬರೀಷ್ ಅವರ ಮುಖ್ಯಮಂತ್ರಿ ಪಾತ್ರದಿಂದ ಸಾಕಷ್ಟು ಸುದ್ಧಿ ಮಾಡಿರುವ 'ಸ್ವಯಂಕೃಷಿ'ಗೆ ಈಗ ಮತ್ತೊಂದು ಗರಿ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಸಿಪಾಯಿ' (ಗೆಳೆಯನ ಪಾತ್ರ) ಮತ್ತು 'ಶ್ರೀ ಮಂಜುನಾಥ' (ಶಿವನ ಪಾತ್ರ) ಚಿತ್ರಗಳಲ್ಲಿ ಚಿರಂಜೀವಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆ ನಂತರ ಯಾವುದೇ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅವರಿಗೆ ಮೂರನೇ ಚಿತ್ರ.

ಒಬ್ಬ ನಿರ್ಗತಿಕ ಯುವಕ ಮನಸ್ಸು ಮಾಡಿದರೆ ಜೀವನವನ್ನು ಯಾವ ರೀತಿಯಲ್ಲಿ ಧನಾತ್ಮಕವಾಗಿ ರೂಪಿಸಿಕೊಳ್ಳಬಹುದು ಎಂಬುದೇ ಚಿತ್ರದ ತಿರುಳು. ಈ ವಿಚಾರವನ್ನು ಮೆಗಾ ಸ್ಟಾರ್‌ಗೆ ತಿಳಿಹೇಳಿ, ಮನವೊಲಿಸಿ ಅವರನ್ನು ಕನ್ನಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ 'ಸ್ವಯಂಕೃಷಿ'ಯ ನಾಯಕ, ನಿರ್ದೇಶಕ, ನಿರ್ಮಾಪಕ ಶಿಡ್ಲಘಟ್ಟ ವೀರೇಂದ್ರ ಬಾಬು.

ಈ ಮೊದಲು ಚಿರಂಜೀವಿ 'ಸ್ವಯಂಕೃಷಿ' ಎಂಬ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದರು. 1987ರಲ್ಲಿ ಬಿಡುಗಡೆಗೊಂಡ ಈ ಚಿತ್ರದ ಉತ್ತಮ ನಟನೆಗಾಗಿ ಚಿರಂಜೀವಿಗೆ ಪ್ರಸಿದ್ಧ 'ನಂದಿ ಪ್ರಶಸ್ತಿ' ಲಭಿಸಿತ್ತು ಹಾಗೂ ಈ ಚಿತ್ರ ರಷ್ಯಾದ ಚಲನ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತ್ತು.

ಆದರೆ ತೆಲುಗು 'ಸ್ವಯಂಕೃಷಿ'ಗೂ ಕನ್ನಡ 'ಸ್ವಯಂಕೃಷಿ'ಗೂ ಯಾವುದೇ ಸಂಬಂಧವಿಲ್ಲ.

ಕೆಲವೊಂದು ಮೂಲಗಳ ಪ್ರಕಾರ 'ಸ್ವಯಂಕೃಷಿ' ಚಿತ್ರ ನಾಯಕ ನಟ, ನಿರ್ದೇಶಕ ವೀರೇಂದ್ರ ಬಾಬು ಅವರ ಯಶೋಗಾಥೆಯಂತೆ. ಬಡತನದಲ್ಲಿದ್ದ ಅವರು ಬಹಳ ಶ್ರಮಪಟ್ಟು ಎಸ್‌ಕೆ ಫುಡ್ಸ್, ಎಸ್‌ಕೆ ಶರ್ಟ್ಸ್ ಸೇರಿದಂತೆ ಸ್ವಯಂಕೃಷಿ ಎಂಬ ಟಿವಿ ಚಾನೆಲ್‌ವೊಂದನ್ನು ಹೊಂದಿದ್ದಾರೆ. ಈಗ ತನ್ನದೇ ಕಥೆಗೆ ಜೀವ ತುಂಬಲು ಹೊರಟಿದ್ದಾರೆ ವೀರೇಂದ್ರಬಾಬು.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ರೆಬಲ್‌ಸ್ಟಾರ್ ಅಂಬರೀಷ್ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿರುವುದು. ಹಾಗೂ ತಮನ್ನಾ ಮುಮೈತ್ ಖಾನ್ ಅವರ ಐಟಂ ಡ್ಯಾನ್ಸ್. ಇನ್ನುಳಿದಂತೆ ತಾರಾಗಣದಲ್ಲಿ ಉಮಾಶ್ರೀ, ಸುಮನ್, ಬಿಯಾಂಕಾ ದೇಸಾಯಿ ಮುಂತಾದವರಿದ್ದಾರೆ. ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ.
ಇವನ್ನೂ ಓದಿ