ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಶ್‌ನ ಮತ್ತೊಂದು ಮುಖದೊಂದಿಗೆ 'ರಾಜಧಾನಿ' ತೆರೆಗೆ ಸಿದ್ಧ (Yash | Rajadhani | Sheena shehabadi | Prakash Rai)
PR
ಯಶಸ್ವೀ ಚಿತ್ರ 'ಮೊದಲಾ ಸಲ'ದ ಸ್ಪುರದ್ರೂಪಿ ನಾಯಕ ನಟ ಯಶ್ ಅಭಿನಯದ ಮತ್ತೊಂದು ಚಿತ್ರ 'ರಾಜಧಾನಿ' ಇದೀಗ ತೆರೆ ಕಾಣಲು ಸಿದ್ಧವಾಗಿದೆ. ತಮ್ಮ ಸಿನಿಮಾ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಯಶ್ ಹರ್ಷ ವ್ಯಕ್ತ ಪಡಿಸಿದ್ದಾರೆ.

'ಮೊದಲಾ ಸಲ' ಚಿತ್ರದ ಪಾತ್ರಕ್ಕೆ ಹೋಲಿಸಿದರೆ 'ರಾಜಧಾನಿ' ಸಂಪೂರ್ಣ ತದ್ವಿರುದ್ಧ ಚಿತ್ರವಂತೆ. 'ಮೊದಲಾ ಸಲ'ದ ಈ ಲವರ್ ಬಾಯ್ ಈ ಚಿತ್ರದಲ್ಲಿ ಒಂಥರಾ ಪೊರ್ಕಿಯಾಗಿ ಕಾಣಿಸಿಕೊಂಡಿದ್ದಾರೆ.

ಕೋಪಿಷ್ಟ ಬೇರೆ. ಶಾರ್ಟ ಟೆಂಪರ್ ಆತನ ಸಾಮಾನ್ಯ ಗುಣ. ಆತನ ಜತೆ ಮೂವರು ಗೆಳೆಯರು. ಉಂಡಾಡಿ ಗುಂಡರಂತೆ ಓಡಾಡಿಕೊಂಡು, ಹೊಡೆದಾಟಗಳಲ್ಲಿ ಭಾಗಿಯಾಗಿ ಕಾಲ ಕಳೆಯುವವರು ಒಂದೆಡೆಯಾದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾದ ಪಾಲಕ-ಪೋಷಕರು ಇನ್ನೊಂದೆಡೆ.

ಈ ಸಂಕಷ್ಟ ಪರಿಸ್ಥಿತಿ ನಡುವೆ ತಂದೆ, ತಾಯಿ, ಮಕ್ಕಳು, ಸಮಾಜ ಈ ಎಲ್ಲರ ಜವಾಬ್ದಾರಿಗಳನ್ನು ಅರುಹುತ್ತಾ ಹೋಗುವುದು 'ರಾಜಧಾನಿ'ಯ ವಿಶೇಷ.

ಸೌಮ್ಯ ಸತ್ಯನ್ ನಿರ್ಮಾಣದ ಈ ಚಿತ್ರವನ್ನು ರಘುಜಯ ನಿರ್ದೇಶಿಸಿದ್ದಾರೆ. ಖ್ಯಾತ ನಿರ್ದೇಶಕ ಹಾಗೂ ಸಂಭಾಷಣೆಕಾರ ಕೆ.ವಿ.ರಾಜು ಇವರಿಗೆ ಸಾಥ್ ನೀಡಿದ್ದಾರೆ. ಮುಂಬಯಿ ಬೆಡಗಿ ಶೀನಾ ಶೆಹಬಾದಿ 'ರಾಜಧಾನಿ'ಯ ನಾಯಕಿ. ಈಕೆ ಗಲ್ಲಿ ಹುಡುಗನ ಮನದರಸಿ.

ಒಂದು ಐಟಂ ಹಾಡಿನಲ್ಲಿ ಮುಮೈತ್ ಖಾನ್ ಮತ್ತು ಹತ್ತು ಮಂದಿ ರಷ್ಯನ್ ಡ್ಯಾನ್ಸರ್ಸ್ ಕುಣಿದಿದ್ದಾರೆ. ಚಿತ್ರಕ್ಕೆ ಅರ್ಜುನ್ ಸಂಗೀತ ನೀಡಿದ್ದು ಐದು ಹಾಡುಗಳಿವೆ. ಡಿವಿಜಿಯವರ 'ಮಂಕುತಿಮ್ಮನ ಕಗ್ಗ'ದ ಒಂದು ಹಾಡನ್ನೂ ಬಳಸಿಕೊಳ್ಳಲಾಗಿದೆ.

ಚಿತ್ರದ ಎಲ್ಲಾ ಹಾಡುಗಳಿಗೆ ನ್ಯೂಯಾರ್ಕ್ ಸ್ಟುಡಿಯೋದಲ್ಲಿ ಮಾಸ್ಟರಿಂಗ್ ನಡೆಸಲಾಗಿರುವುದು ವಿಶೇಷ. ಸಂದೀಪ್ ನೀನಾಸಂ, ಚೇತನ್ ಚಂದ್ರ, ರವಿತೇಜ, ಪ್ರಕಾಶ್ ರೈ, ಉಮಾಶ್ರೀ, ಅಚ್ಯುತ್ ಕುಮಾರ್, ಕಾರಂತ್ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.

ಅಂದಹಾಗೆ ಚಿತ್ರದ ನಾಯಕ ನಟ ಯಶ್ ಹೇಳಿರುವಂತೆ ಪ್ರಕಾಶ್ ರೈ ಅವರ ಪೊಲೀಸ್ ಅಧಿಕಾರಿ ಪಾತ್ರ ಚಿತ್ರದ ಹೈಲೈಟ್.
ಇವನ್ನೂ ಓದಿ