ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ದಂಡಂ ದಶಗುಣಂ' ಗಣೇಶ್‌ಗೇ ಗಡುವು ನೀಡಿದ ರಮ್ಯಾ..‍! (Dandam dashagunam, Ramya, A. Ganesh, Rajendra Singh Babu, KFCC)
WD
ದಿನೇ ದಿನೇ ರಮ್ಯಾ ವಿವಾದ ತಾರಕಕ್ಕೇರುತ್ತಿದೆ. 'ದಂಡಂ ದಶಗುಣಂ' ಚಿತ್ರದ ಪ್ರಚಾರಕ್ಕೆ ಬರುತ್ತೇನೆಂದು ರಮ್ಯಾ ಅವರು ಬಹಿರಂಗವಾಗಿ ಹೇಳಬೇಕೆಂದು ನಿರ್ಮಾಪಕರ ಸಂಘದ ಒಮ್ಮತದೊಂದಿಗೆ ಎ.ಗಣೇಶ್ ಅವರು 48 ಗಂಟೆಗಳ ಗಡುವು ನೀಡಿದ್ದರೆ, ಇತ್ತ ನಿರ್ಮಾಪಕ ಗಣೇಶ್ ಅವರ ವಿರುದ್ಧ ಸೆಟೆದು ನಿಂತಿರುವ ಲೊ ಬೀಪಿ ನಟಿ ರಮ್ಯಾ ಅದೇ ಗಡುವನ್ನು ಅವರಿಗೇ ತಿರುಗಿಸಿ ಎಸೆದಿದ್ದಾರೆ.

ನನಗೆ ಕೊಡಬೇಕಿರುವ ಹಣ 48 ಗಂಟೆಗಳಲ್ಲಿ ಬರಬೇಕೆಂಬುದು ಒಟ್ಟಾರೆ ಸಾರಾಂಶ.

ಈ ಪ್ರತಿ ವಾದಗಳು ನಡೆದಿರುವುದು ಟ್ವಿಟ್ಟರ್‌ನಲ್ಲಿ. ಅವರ ಒಂದೊಂದು ಮುನಿಸಿನ ತುಣುಕುಗಳು ಇಲ್ಲಿವೆ.

* ಗಣೇಶ್ ಅವರೇ, ನನ್ನಿಂದ ಸಾಲ ಪಡೆದು ಆರು ತಿಂಗಳು ನನ್ನ ಕರೆಗಳನ್ನು ಸ್ವೀಕರಿಸದೆ ಸತಾಯಿಸಿದ್ದೀರ. ಆ ಹಣ ಎಲ್ಲಿ..?. ಬರೇ ಒಂದು ತಿಂಗಳಲ್ಲಿ ತೀರಿಸುತ್ತೇನೆಂದು ಹೇಳಿ ನೀವು ಸಹಿ ಮಾಡಿ ಕೊಟ್ಟ ಆ ಎಲ್ಲಾ ದಾಖಲೆ ಪತ್ರಗಳು ಇಂದಿಗೂ ನನ್ನ ಬಳಿ ಇದೆ.

* 'ಯಾವುದೇ ಸಂಭಾವನೆ ಅಥವಾ ಸಂಬಳ ಕೇಳದೆ ನಲವತ್ತು ದಿನ ಕೆಲಸ ಮಾಡಿ, ಅದರಲ್ಲೂ ನಿಮ್ಮ ಯಜಮಾನ (ನಿರ್ಮಾಪಕ) ನಿಮ್ಮಿಂದಲೇ ಸಾಲ ಪಡೆದು ಹಿಂತಿರುಗಿಸುವುದಿಲ್ಲ. ಅದೂ ಅಲ್ಲದೆ ಆರು ತಿಂಗಳು ನೀವು ಕರೆ ಮಾಡಿದರೂ ಆತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀವು ಆತನ ಕಾನೂನನ್ನು (ವಚನ) ಪಾಲಿಸುತ್ತೀರಾ...?' ಎಂದು ಪ್ರಶ್ನಿಸಿದ್ದಾರೆ.

* ನನಗೆ ಕೊಡಬೇಕಾದ ಸಾಲದ ಹಣವನ್ನು ಮರುಪಾವತಿಸಲು ನಿರ್ಮಾಪಕ ಎ.ಗಣೇಶ್ ಅವರಿಗೆ 48 ಗಂಟೆಗಳ ಗಡುವು ನೀಡುತ್ತಿದ್ದೇನೆ. ನನ್ನಿಂದ ಸಾಲ ಪಡೆಯುವಾಗ ಗಣೇಶ್ ಅವರು ತಾವೇ ಸಹಿ ಮಾಡಿ ಕೊಟ್ಟ ದಾಖಲೆ ಮತ್ತು ಖಾಲಿ ಚೆಕ್‌ನ ಪ್ರತಿಗಳನ್ನು, ಈ ಹಿಂದೆ ನಾಲ್ಕು ಬಾರಿ ಚಲನ ಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ದೂರು ಸಲ್ಲಿಸಿದಾಗಲೂ ಲಗತ್ತಿಸಿದ್ದೆ.

ಮೊದಲ ಪತ್ರ ಬರೆದದ್ದು ಜನವರಿಯಲ್ಲಿ. ನಾಲ್ಕು ಬಾರಿ ದೂರು ಸಲ್ಲಿಸಿದರೂ ಕೆಎಫ್‌ಸಿಸಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆಗಲೇ ನನಗರಿವಾದದ್ದು ಎ.ಗಣೇಶ್ (ನಿರ್ಮಾಪಕ) ಅವರೇ ಕೆಎಫ್‌ಸಿಸಿ ಕಾರ್ಯದರ್ಶಿಯಾಗಿರುವಾಗ ನ್ಯಾಯ ಎಲ್ಲಿ ಸಿಗುತ್ತೆ.....

* ನಾನು 'ದಂಡಂ ದಶಗುಣಂ' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಬರದಿದ್ದದಕ್ಕೆ ನಿರ್ಮಾಪಕ ಗಣೇಶ್ ಅವರೇ ನನಗೆ ಧನ್ಯವಾದ ಸಲ್ಲಿಸಬೇಕು. ನನ್ನ ಗೈರು ಹಾಜರಿಯಿಂದ ಚಿತ್ರಕ್ಕೆ ಎಷ್ಟೊಂದು ಪ್ರಚಾರ ಸಿಕ್ಕಿದೆ. ಅದೇ ನಾನು ಅವರು ಹೇಳಿದಂತೆ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಟಿವಿಗಳಲ್ಲಿ ಅಷ್ಟು ಹೊತ್ತು ಕಾರ್ಯಕ್ರಮ ಪ್ರಸಾರ ಮಾಡಲು ಎಷ್ಟೊಂದು ಹಣ ಪಾವತಿಸಬೇಕಿತ್ತು. ಅದೆಲ್ಲ ಈಗ ಉಚಿತವಾಗಿ ಆಗಿಲ್ವಾ...?

ಅವರಿಗಾದ ಲಾಭಕ್ಕಾದರೂ ನಿರ್ಮಾಪಕರು ನನಗೆ ಅಭಾರಿಯಾಗಬೇಕಿತ್ತು, 'ಮತ್ತೆ ಇನ್ಮುಂದೆ ಯಾರು ಚಿತ್ರ ತೆಗೆಯುವುದಿಲ್ಲವೊ ಅಂತವರಿಗೆ ನನ್ನ ಬಗ್ಗೆ ಸುದ್ದಿ ವಾಹಿನಿಯಲ್ಲಿ ಮಾತನಾಡಲು ಸಮಯವಿರುತ್ತದೆ' ಎಂದು ಮಂಗಳವಾರ ಇದೇ ವಿವಾದದ ಕುರಿತು ಸುದ್ದಿ ವಾಹಿನಿಯೊಂದರಲ್ಲಿ ರಮ್ಯಾ ಅವರ ವಿರುದ್ದ ಮಾತಿನ ಚಾಟಿ ಬೀಸಿದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರನ್ನು ನಯವಾಗಿ ಕುಟುಕಿದ್ದಾರೆ.

ಕ್ಲೈಮ್ಯಾಕ್ಸ್....

* ಕನ್ನಡ ಚಿತ್ರರಂಗಕ್ಕೆ ಬಂದು ಕೆಲವು ಸಜ್ಜನರನ್ನು ಸಂಪಾದಿಸಿದ್ದೇನೆ. ಆ ಅಪರೂಪದ ವ್ಯಕ್ತಿಗಳನ್ನು ಮುಂದೆಯೂ ನೆನಪಿಸಿಕೊಳ್ಳುತ್ತೇನೆ. ಹೆಸರು, ಕೀರ್ತಿಯೊಂದಿಗೆ ನಿಮ್ಮೆಲ್ಲರನ್ನೂ ನನಗೆ ನನ್ನ ಕಾಯಕ ಸಂಪಾದಿಸಿಕೊಟ್ಟಿದೆ. ಅದಕ್ಕೆಂದಿಗೂ ಅಭಾರಿಯಾಗಿರುತ್ತೇನೆ.

* ಇನ್ಮುಂದೆ ಕೆಲಸಮಾಡಲು ಬಯಸುವುದಿಲ್ಲ. ಯಾಕಂದ್ರೆ ಗಲಾಟೆ ಮಾಡಲು ನನ್ನಲ್ಲಿ ಶಕ್ತಿಯೇ ಉಳಿದಿಲ್ಲ. ನನ್ನ ಜೀವಿತಾವಧಿಯಲ್ಲಿ ನಟನೆಯನ್ನು ಮಾತ್ರ ಸಂಪಾದಿಸಿದ್ದೇನೆ. ಸ್ವ ಇಚ್ಚೆಯಿಂದ ಚಿತ್ರೋದ್ಯಮಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ. ಹೊಸ ದೃಷ್ಠಿಯಿಂದ ಮುಂದಿನ ಜೀವನವನ್ನು ಪ್ರಾರಂಭಿಸುತ್ತೇನೆ.

ಇದು ಇವತ್ತಿನ ಪತ್ರಿಕೋದ್ಯಮ....

'ನನಗೆ ಮದುವೆ ಆಗಿದೆ, ಆದ್ದರಿಂದ ಚಿತ್ರರಂಗದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ'.
'ಪ್ರಭಾವಿ ವ್ಯಕ್ತಿಯೊಬ್ಬರ ಮಗ ನನ್ನಲ್ಲಿ ಪ್ರೇಮ ಪ್ರಸ್ಥಾಪಿಸಿದ್ದಾನೆ ಆತನೊಂದಿಗೆ ವಿಶ್ವಪರ್ಯಟನೆಯಲ್ಲಿ ತೊಡಗಿದ್ದೇನೆ'.

ಹೀಗೆಲ್ಲಾ ರಮ್ಯಾ ಅವರ 'ದಂಡಂ ದಶಗುಣಂ' ವಿವಾದವನ್ನು ರಂಜಿಸಿದ ಮಾದ್ಯಮಗಳನ್ನು ಹೆಸರು ಬಹಿರಂಗ ಪಡಿಸದೆ, ಕೇವಲ ಅವರು ಅವರು ಪ್ರಸ್ತಾಪಿಸಿದ ವಿಷಯಗಳನ್ನು ಉಲ್ಲೇಖಿಸಿ 'ಹ್ಹಹ್ಹಹ್ಹಹ್ಹಹ್ಹ' ಎಂದು ವ್ಯಂಗ್ಯವಾಗಿ ತಮ್ಮ ಟ್ವಿಟ್ಟರಿನಲ್ಲಿ ನಕ್ಕಿದ್ದಾರೆ.

ಒಟ್ಟಾರೆ ಏನೋ ಮಾಡಬೇಕಾದ ಟಿವಿ ಮಾದ್ಯಮಗಳು, ಯಾವುದಕ್ಕೋ ಬಳಕೆಯಾಗಬೇಕಿದ್ದ ಅಂತರ್ಜಾಲ ಸಾಮಾಜಿಕ ತಾಣಗಳು, ಈಗ ಒಬ್ಬರಿಂದ ಒಬ್ಬರ ನಡುವೆ ಕಲಹವೆಬ್ಬಿಸಿ ಏನೋ ಒಂಥರಾ ಮಜಾ ನೋಡುತ್ತಿರುವುದು ಮಾತ್ರ ದುರಂತವೇ ಸರಿ ಎಂದು ಗಾಂಧೀನಗರ ಪಂಡಿತರು ಚಿಂತಿಸುತ್ತಿರುವುದು ಸುಳ್ಳಲ್ಲ.
ಇವನ್ನೂ ಓದಿ