ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಲಾವಿದರ ಸಭೆ; ರಮ್ಯಾ ನಿಜಕ್ಕೂ ಚಿತ್ರರಂಗಕ್ಕೆ ವಿದಾಯ ಹೇಳ್ತಾರಾ...? (Ramya | Dandam Dashagunam | Rockline Venkatesh | A.Ganesh)
PR
'ದಂಡಂ ದಶಗುಣಂ' ವಿವಾದದಿಂದ ಮನನೊಂದು ಕನ್ನಡ ಚಿತ್ರರಂಗಕ್ಕೆ ಗುಡ್‌ಬೈ ಘೋಷಿಸಿದ್ದ ನಟಿ ರಮ್ಯಾ ಅವರ ಮನವೊಲಿಕೆಗೆ ಶನಿವಾರ ಬೆಂಗಳೂರಿನ ಹೊಟೇಲೊಂದರಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಕಲಾವಿದರ ಸಂಘ ಆಯೋಜಿಸಿರುವ ಈ ಸಭೆಯಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ರಮ್ಯಾ, ತಾರಾ, ವಿಜಯ ರಾಘವೇಂದ್ರ, ರವಿಚಂದ್ರನ್, ಸರೋಜಾ ದೇವಿ, ಸುಧಾರಾಣಿ ಮುಂತಾದವರು ಪಾಲ್ಗೊಂಡಿದ್ದಾರೆ.

ರಮ್ಯಾ ದೂರು ನೀಡಿದ್ದರು....

'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಎ.ಗಣೇಶ್ ನನ್ನಿಂದ ಸಾಲ ಪಡೆದು ಈಗ ಹಿಂತಿರುಗಿಸಲು ಸತಾಯಿಸುತ್ತಿದ್ದಾರೆ. ಅದೂ ಅಲ್ಲದೆ ಚಿತ್ರದ ದ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ಒಡ್ಡಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮಾನ ಹರಾಜು ಮಾಡುತ್ತಿದ್ದಾರೆ. ಈ ವರ್ತನೆಯಿಂದ ತೀವ್ರ ಮನನೊಂದು ಚಿತ್ರರಂಗದಿಂದ ಶಾಶ್ವತ ನಿವೃತ್ತಿ ಹೊಂದುತ್ತಿದ್ದೇನೆ ಎಂದೆಲ್ಲ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದರು.

ಈ ವಿಚಾರದ ಕುರಿತು ಕಲಾವಿದರ ಸಂಘಕ್ಕೆ ದೂರನ್ನೂ ನೀಡಿದ್ದರು ರಮ್ಯಾ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಉಲ್ಬಣಗೊಂಡಿದ್ದ ಹಲವಾರು ವಿವಾದಗಳು, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಮದ್ಯಸ್ಥಿಕೆಯಲ್ಲಿ ಬಗೆಹರಿದಿತ್ತು. ಈ ಕಾರಣದಿಂದ ಅಂಬರೀಷ್ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದೂ ಹೇಳಿಕೆ ಕೊಟ್ಟಿದ್ದರು ರಮ್ಯಾ.

ಆದರೆ ಸುದ್ದಿವಾಹಿನಿಗಳಲ್ಲಿ ಈ ವಿವಾದ ಕುರಿತು ಒಂದೊಂದು ರೀತಿಯಲ್ಲಿ ರಮ್ಯಾ ಪ್ರತಿಕ್ರಿಯಿಸಿದ್ದರು. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ ರಮ್ಯಾ, ಕೆಲವೊಮ್ಮೆ ಏನೇ ನಿರ್ಧಾರ ತೆಗೆದುಕೊಳ್ಳುವುದಾದರೂ ಕಲಾವಿದರ ಸಂಘದ ಸಭೆಯ ತೀರ್ಮಾನದ ನಂತರವೇ ಎಂದು ಹೇಳಿಕೆ ಕೊಟ್ಟಿದ್ದರು.

ಈ ನಿಟ್ಟಿನಲ್ಲಿ ರಮ್ಯಾ ಅವರ ಅಭಿಮಾನಿ ವರ್ಗಗಳಲ್ಲಿ ಕಲಾವಿದರ ಸಂಘದ ಸಭೆ ಕುತೂಹಲ ಕೆರಳಿಸಿದೆ.

ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ.....

ಒಂದು ಹೆಣ್ಣಿನ ವಿರುದ್ಧ ಕೆಲವು ನಿರ್ದೇಶಕರು, ನಿರ್ಮಾಪಕರು, ಮಾದ್ಯಮಗಳು ತಿರುಗಿ ಬಿದ್ದಿದೆ. ಸೌಜನ್ಯಕ್ಕಾದರೂ ನನ್ನ ಪರವಾಗಿ ಯಾರೂ ಧ್ವನಿ ಎತ್ತಲಿಲ್ಲ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾ ಮಾದ್ಯಮದ ಮುಂದೆ ಕಣ್ಣೀರಿಟ್ಟಿದ್ದರು ರಮ್ಯಾ.

ಮೊಬೈಲ್ ಸ್ವಿಚ್ ಆಫ್ ಆಗಿತ್ತು....

ಆದರೆ 'ದಂಡಂ ದಶಗುಣಂ' ವಿವಾದದಿಂದ ಮನನೊಂದಿದ್ದ ರಮ್ಯಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂಬುದು ಆಪ್ತವಲಯಗಳ ತಕರಾರು.

ಏನೇ ಇದ್ದರು ಈ ಸಭೆಯಲ್ಲಿ ನಟಿ ಪೂಜಾಗಾಂಧಿ ಅವರ 'ನೀನಿಲ್ಲದೆ' ಚಿತ್ರದ ವಿವಾದವೂ ಚರ್ಚೆಗೆ ಬರಲಿದೆ, ಒಂದೇ ಸಭೆಯಲ್ಲಿ ಎರಡೆರಡು ವಿವಾದಗಳಿಗೆ ಉತ್ತರ ಸಿಕ್ಕಿದಂತಾಗುತ್ತದೆ ಎಂಬುದು ಅಭಿಮಾನಿಗಳ ಅಭಿಲಾಷೆ.
ಇವನ್ನೂ ಓದಿ