ಸ್ಯಾಂಡಲ್‌ವುಡ್‌ನಲ್ಲಿ ಹಿಂದೊಮ್ಮೆ ನಾಯಕಿಯಾಗಿ ಮೆರೆದ ನಟಿ ರಾಧಿಕಾ ಮತ್ತೆ ಅಭಿನಯಕ್ಕೆ ಹಿಂದಿರುಗುತ್ತಾರೆಯೇ? ಹೌದು ಎನ್ನುತ್ತಾರೆ ಗಾಂಧಿನಗರ ಪಂಡಿತರು.
ಕೆಲವೊಂದು ವಿವಾದಗಳಿಂದ ಚಿತ್ರರಂಗದಿಂದ ತುಸು ದೂರ ಇದ್ದ ರಾಧಿಕಾ ಮತ್ತೆ ಅಭಿನಯಕ್ಕೆ ಬರಲಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ತಂಗಿ ಸೆಂಟಿಮೆಂಟ್ ಚಿತ್ರಗಳಿಗೆ ಕಾಯಂ ತಂಗಿ ಪಾತ್ರಗಳಲ್ಲಿ ಮಿಂಚಿದ್ದ ರಾಧಿಕಾರನ್ನು ಮತ್ತೆ ಅದೇ ಅಣ್ಣ ಅರ್ಥಾತ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ತಂಗಿಯಾಗಿಸಿ ಓಂ ಸಾಯಿಪ್ರಕಾಶ್ ಚಿತ್ರ ನಿರ್ದೇಶನ ಮಾಡಲಿದ್ದಾರಂತೆ.
ಈ ವಿಷಯವನ್ನು ಸ್ವತಃ ಓಂ ಸಾಯಿಪ್ರಕಾಶ್ ಒಪ್ಪಿಕೊಂಡಿದ್ದಾರೆ. ಒಂದು ಕಾಲದಲ್ಲಿ 'ಅಣ್ಣ ತಂಗಿಯ ಅನುಬಂಧ ಜನುಮ ಜನುಮದ ಸಂಬಂಧ' ಎಂಬ ಹಾಡಿಗೆ ಹೆಜ್ಜೆ ಹಾಕಿ ಜನಪ್ರಿಯರಾಗಿದ್ದ ಇಬ್ಬರೂ ಮತ್ತೆ ಅಣ್ಣ ತಂಗಿಯಾಗಿ ಅಭಿನಯಿಸಲಿರುವುದು ಕನ್ನಡ ಚಿತ್ರರಂಗದಲ್ಲಿ ಅತೀವ ಕುತೂಹಲ ಮೂಡಿಸಿದೆ.