ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಮು ಚಿತ್ರದಲ್ಲಿ ಪ್ರಜ್ವಲ್‌ಗೆ ಜೋಡಿಯಾಗಿ ಸಂಜನಾ ಸಂಚಲನ! (Sanjana | Raamu | Prajwal | Mylari)
PR
ಸಂಜನಾ ಎಂದೊಡನೆ ಚಿತ್ರರಸಿಕರು ಏನೋ ಒಂಥರಾ ಸಂಚಲನಗೊಳ್ಳುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಚಿತ್ರದಲ್ಲಿ ನಟಿಸುತ್ತಾರೆ ಎಂದರೆ ಆ ಚಿತ್ರದಲ್ಲಿ ಸಂಜನಾ ಹೇಗೆಲ್ಲಾ ನಟಿಸಬಹುದು ಎಂದು ಊಹಿಸಲು ಆರಂಭಿಸುತ್ತಾರೆ. ಅವರೂ ನನ್ನ ಅಭಿಮಾನಿಗಳೇ ಎಂಬುದನ್ನು ತಳ್ಳಿಹಾಕುವುದಿಲ್ಲ ಸಂಜನಾ.

ಇತ್ತೀಚೆಗೆ ಸಂಜನಾ ಸುದ್ಧಿಯಾದದ್ದು ತೆಲುಗು ಚಿತ್ರವೊಂದರಲ್ಲಿ ಬೆತ್ತಲು ಬೆನ್ನಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ. ಅದೂ ಹೆಣವಾಗಿ. ಸ್ವತಃ ಸಂಜನಾ ಅವರೇ ಪತ್ರಿಕಾಗೋಷ್ಠಿಗೆ ಬಂದು ತೆಲುಗು ಚಿತ್ರವೊಂದರಲ್ಲಿ ನಾನು ಹೀಗೀಗೆಲ್ಲ ನಟಿಸುತ್ತಿದ್ದೇನೆ. ಅನ್ಯತಾ ಭಾವಿಸಬೇಡಿ ಎಂದು ಪಡ್ಡೆಗಳಿಗೆ ಚಮಕ್ ನೀಡಿದ್ದರು.

ಈ ರೀತಿ ಚಿತ್ರದ ಬಿಡುಗಡೆಗೆ ಮೊದಲೇ ಬಂದು ಹೇಳಿಕೆಕೊಡುತ್ತಿರುವುದು ಚಿತ್ರದ ಪ್ರಚಾರ ಗಿಟ್ಟಿಸಿಕೊಳ್ಳಲು ಎಂದು ಗಾಂಧೀನಗರದ ಪಂಡಿತರು ಊಹಿಸಿದರೆ ತಪ್ಪಾಗಬಹುದೇನೊ. ಏಕೆಂದರೆ ಈ ರೀತಿಯ ಹೇಳಿಕೆ ಕೊಡುತ್ತಿರುವುದಕ್ಕೆ ಸಂಜನಾ ಕೊಡುತ್ತಿರುವ ಕಾರಣ. ಮರೆಯಲಾಗದ 'ಗಂಡ ಹೆಂಡತಿ'!.

ಅದೊಂದು ಚಿತ್ರದಲ್ಲಿ ನಟಿಸಿ ಜನರು ನನ್ನನ್ನು ನೋಡುವ ದೃಷ್ಟಿಯೇ ಬದಲಾಗಿದೆ. ನನ್ನಲ್ಲಿ ತರಾವರಿ ಪ್ರತಿಭೆಗಳಿವೆ. ಅದನ್ನೆಲ್ಲ ಹೊರತರಬಹುದೆಂದು ಅವಕಾಶಕ್ಕಾಗಿ ಕಾದರೆ ನನಗೆ ಸಿಗುವುದೇ ಗಂಡಹೆಂಡತಿಯಂಥ ಅಶ್ಲೀಲ ಪಾತ್ರಗಳು.

ಹೀಗೆಲ್ಲಾ ಹೇಳಿಕೊಂಡಿದ್ದ ನಟಿ ಸಂಜನಾ ಅವರನ್ನು ಕೋಟಿ ನಿರ್ಮಾಪಕನೆಂಬ ಬಿರುದಾಂಕಿತ ನಿರ್ಮಾಪಕ ರಾಮು ಅವರು ವಿಭಿನ್ನ ಪಾತ್ರದಲ್ಲಿ ತೋರಿಸಲು ಸಜ್ಜಾಗಿದ್ದಾರೆ. 'ಕಂಠೀರವ' ಚಿತ್ರದ ಬಳಿಕ ನಿರ್ಮಾಣ ಮಾಡಲು ನಿರ್ದರಿಸಿರುವ ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ. ನಿರ್ದೇಶನ ಎಂ.ಡಿ.ಶ್ರೀಧರ್ ನೀಡಲಿದ್ದಾರೆ.

'ಕೋಟೆ' ಚಿತ್ರದಲ್ಲಿ ಪ್ರಜ್ವಲ್ ಮತ್ತು 'ಮೈಲಾರಿ' ಚಿತ್ರದಲ್ಲಿ ಸಂಜನಾ ಅವರು ತಮ್ಮದೇ ಆದ ನಟನೆ, ಕುಣಿತದಲ್ಲಿ ಹೆಸರು ಮಾಡಿದ್ದಾರೆ. ಅದೇ ರೀತಿಯಲ್ಲಿ ಇನ್ನೂ ಹೆಸರಿಡದ ಈ ಚಿತ್ರವೂ ಇವರಿಬ್ಬರ ಹೆಸರನ್ನು ಉತ್ತುಂಗಕ್ಕೆ ಏರಿಸಲಿದೆ ಎನ್ನಲಾಗಿದೆ. ಏನಿದ್ದರೂ ಕೋಟಿ ರಾಮು ಚಿತ್ರ ಎಂದರೆ ಅಂತಹ ಒಂದು ಆಶಾಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಏಪ್ರಿಲ್ ಮಧ್ಯ ಭಾಗದಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ.
ಇವನ್ನೂ ಓದಿ