ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೂಪರ್' ಸೂಪರ್ ಎನ್ನುತ್ತಿದೆ ಟಾಲಿವುಡ್! (Super | Upendra | Rock line Venkatesh | Tolly Wood)
PR
ಸೂಪರ್ ಸ್ಟಾರ್ ಉಪೇಂದ್ರ ಅವರ 'ಸೂಪರ್' ಎಲ್ಲೆಲ್ಲೂ ಜಯಭೇರಿ ಭಾರಿಸುತ್ತಿದೆ. 2030ರ ಭಾರತದ ಪರಿಕಲ್ಪನೆಯನ್ನು 'ಸೂಪರ್' ಚಿತ್ರದಲ್ಲಿ ತೋರಿಸಿರುವ ರೀತಿ ಕನ್ನಡಿಗರ ಮನ ಗೆದ್ದಿದೆ.

ಕರ್ನಾಟಕದಲ್ಲಿ 'ಸೂಪರ್' ಚಿತ್ರ ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲೇ ನೆರೆಯ ಆಂಧ್ರ ಪ್ರದೇಶ ರಾಜ್ಯದಾದ್ಯಂತ 'ಸೂಪರ್' ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ.

ಟಾಲಿವುಡ್ ಪ್ರೇಕ್ಷಕರು 'ಸೂಪರ್' ಚಿತ್ರವನ್ನು ಸೂಪರ್ ಎನ್ನುತ್ತಿದ್ದಾರೆ. ಆಂಧ್ರ ಪ್ರದೇಶದ 95 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರದ ಗಳಿಕೆ ಆರಂಭದ ದಿನದಿಂದಲೂ ಉತ್ತಮವಾಗಿದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಕನ್ನಡದ 'ಸೂಪರ್' ಚಿತ್ರದ ಶತದಿನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಜರುಗಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಆ ನಂತರ ತಮಿಳಿನಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ. ತಮಿಳುನಾಡಿನ ಪ್ರೇಕ್ಷಕರ ಪ್ರಶಂಸೆಗೂ ನಮ್ಮ ಚಿತ್ರ ಪಾತ್ರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರಾಕ್‌ಲೈನ್ ವೆಂಕಟೇಶ್.
ಇವನ್ನೂ ಓದಿ