ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದ್ವಾರಕೀಶ್ ಚಿತ್ರದಲ್ಲಿ ವಿಷ್ಣುವರ್ಧನ್-ಭಾರತಿ!! (Sandalwood | Kannada cinema | Sudeep | Bhavana)
ದ್ವಾರಕೀಶ್ ನಿರ್ಮಾಣ ಹಾಗೂ ನಿರ್ದೇಶನದ, ಸುದೀಪ್ ಮತ್ತು ಮಲಯಾಳಂ ಬೆಡಗಿ ಭಾವನಾ ಅಭಿನಯದ ವಿಷ್ಣುವರ್ಧನ ಎಂಬ ಶೀರ್ಷಿಕೆ ಇರಬಹುದಾದ ಚಿತ್ರಕ್ಕೆ ಬೆಂಗಳೂರಿನ ಲಗ್ಗೇರೆ ಸರ್ಕಲ್‌ನಲ್ಲಿ ಚಾಲನೆ ದೊರೆಯುತ್ತಿದೆ.

ವಿಶೇಷತೆ ಎಂದರೆ ಲಗ್ಗೇರೆ ಸರ್ಕಲ್‌ನಲ್ಲಿ ಸ್ಥಾಪಿಸಲಾದ ಸಾಹಸ ಸಿಂಹ ದಿವಂಗತ ವಿಷ್ಣುವರ್ಧನ್ ಅವರ ಪ್ರತಿಮೆಯನ್ನೂ ಈ ಸಂದರ್ಭದಲ್ಲಿ ಅನಾವರಣಗೊಳಿಸುವ ಮೂಲಕ ಚಿತ್ರೀಕರಣ ಶುರುವಾಗಲಿದೆ.

ದ್ವಾರಕೀಶ್ ಅವರೇ ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರಂತೆ. ವಿಷ್ಣುವರ್ಧನ ಚಿತ್ರದ ಶೀರ್ಷಿಕೆಗೆ ಸಂಬಧಿಸಿದಂತೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವಣ ವಿವಾದ ಇನ್ನೂ ಇತ್ಯರ್ಥಗೋಂಡಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿಷ್ಣುವರ್ಧನ ಶೀರ್ಷಿಕೆಯನ್ನು ದ್ವಾರಕೀಶಗೆ ಇನ್ನೂ ಮಂಜೂರು ಮಾಡಿಲ್ಲ. ಆದರೂ ಅದೇ ಹೆಸರಲ್ಲಿ ಚಿತ್ರ ಶುರುವಾಗುತ್ತಲಿದೆ.

ಮೇಲಾಗಿ ಚಿತ್ರದಲ್ಲಿ ನಾಯಕ ಸುದೀಪ್‌ಗೆ ವಿಷ್ಣು ಹಾಗೂ ನಾಯಕಿ ಭಾವನಾಳಿಗೆ ಭಾರತಿ ಎಂದು ಹೆಸರಿಡಲಾಗಿದೆ. ಇದು ಶೀರ್ಷಿಕೆ ವಿವಾದದ ಕಾವನ್ನು ಮತ್ತಷ್ಟು ಹೆಚ್ಚಿಸಲಿದೆ. ಮೊನ್ನೆ ಮೊನ್ನೆ ರಮ್ಯಾ-ಗಣೇಶ್ ವಿವಾದಕ್ಕೆ ಸಾಕ್ಷಿಯಾಗಿದ್ದ ಕನ್ನಡ ಚಿತ್ರಗಳ ಪ್ರೇಕ್ಷಕ ಸಮುದಾಯವನ್ನು ಕುತೂಹಲಕ್ಕೀಡು ಮಾಡಲು ಮತ್ತೊದು ವಿವಾದಾತ್ಮಕ ಪ್ರಸಂಗ ಶುರು ಇಟ್ಟುಕೊಳ್ಳಲಿದೆಯೇ ಎಂಬುದು ಗಾಂಧಿನಗರ ಪಂಡಿತರನ್ನು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ.
ಇವನ್ನೂ ಓದಿ