'ಸೂಪರ್' ಸಿನಿಮಾ ಮಾಡಿ ಜಾಕ್‌ಪಾಟ್ ಹೊಡೆದ ರಾಕ್‌ಲೈನ್ ವೆಂಕಟೇಶ್ ಅವರಿಗೆ ಈಗ ಇನ್ನೊಂದು ಜಾಕ್‌ಪಾಟ್! ಅವರೀಗ ಅಜ್ಜನಾಗಿದ್ದಾರೆ. ಅವರ ಮಗ ಯತೀಶ್ ಅವಳಿ ಜವಳಿ ಮಕ್ಕಳ ತಂದೆಯಾಗಿದ್ದಾರೆ. ಯತೀಶ್ ಅವರ ಪತ್ನಿ ಸಿಂಧೂರಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ದಾರೆ.
ಅಜ್ಜನಾದ ಖುಷಿಯಲ್ಲಿ ಮಾತನಾಡಿದ ರಾಕ್‌ಲೈನ್, 'ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಎಲ್ಲ ದೈವ ಕೃಪೆ. ಸುಖ ದುಃಖಗಳನ್ನೆಲ್ಲ ಕೊಡೋದು ಅವನೇ' ಎಂದರು.
'ನನ್ನ ಸೂಪರ್ ಚಿತ್ರ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲಿನ ಮೂವತ್ತು ಚಿತ್ರಮಂದಿರಗಳಲ್ಲಿ ನೂರು ದಿನ ಓಡಿದೆ. ಇದರ ಬೆನ್ನಲ್ಲೇ ನನ್ನ ಮಗ ಅವಳಿ ಮಕ್ಕಳ ತಂದೆಯಾಗಿದ್ದಾನೆ. ದೇವರು ಕೊಟ್ರೆ ಈ ತೆರನ ಖುಷಿ ಕೊಡ್ತಾನೆ ನೋಡಿ' ಎಂದು ಅತೀವ ಸಂತಸದಲ್ಲೇ ನುಡಿದರು.
ರಾಕ್‌ಲೈನ್ ಅವರ ಬೀಗರಾದ ಮುನಿರತ್ನ ಅವರೂ ಖ್ಯಾತ ಚಿತ್ರ ನಿರ್ಮಾಪಕರು ಹಾಗೂ ಸಕ್ರೀಯ ರಾಜಕಾರಣಿ. ಮುನಿರತ್ನ ಅವರೂ ಕೂಡ ತಾತನಾದುದರ ಬಗ್ಗೆ ಹರ್ಷ ಹಂಚಿಕೊಂಡಿದ್ದಾರೆ.
ಹತ್ತು ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಸೂಪರ್' ಚಿತ್ರ ನೀರೀಕ್ಷೆಯಂತೆ ಶತದಿನೋತ್ಸವ ಆಚರಿಸಿದ್ದು ಇದು ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಇಪ್ಪತ್ತೈದನೇ ಚಿತ್ರ.