ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರವಿಚಂದ್ರನ್‌ಗೆ ನಾಯಕಿಯಾಗಲು ನಮ್ಮ ಹುಡುಗೀರೇ ಒಪ್ಪಲ್ಲ ? (Narasimha | Ravichandran | Mohan | Hamsalekha)
PR
ಇತ್ತೀಚೆಗಷ್ಟೇ ಅದ್ದೂರಿ ಮುಹೂರ್ತ ಕಂಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ನರಸಿಂಹ' ಚಿತ್ರಕ್ಕೆ ಈಗ ನಾಯಕಿಯ ಕೊರತೆ ಕಾಡುತ್ತಿದೆಯೇ? ಗಾಂಧಿನಗರ ಮೂಲಗಳ ಪ್ರಕಾರ 'ನರಸಿಂಹ'ಗೆ ಜೋಡಿಯಾಗುವ ನಾಯಕಿ ಯಾರು ಎಂಬುದೇ ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆಯಂತೆ. ರವಿಚಂದ್ರನ್ ಚಿತ್ರದಲ್ಲಿ ನಟಿಸಲು ನಮ್ಮ ನಾಡಿನ ನಾಯಕಿ ನಟಿಯರೇ ಮನಸ್ಸು ಮಾಡುತ್ತಿಲ್ಲ ಎಂಬುದು ಕಗ್ಗಂಟಾಗಿದೆ.

ಕನ್ನಡದ ಅನೇಕ ನಾಯಕಿಯರನ್ನು ಕರೆಸಿ ಓಲೈಸಿದರೂ ಅದು ಫಲ ನೀಡಿಲ್ಲ. ಹಾಗಂತ ಚಿತ್ರದ ನಿರ್ದೇಶಕ ಮೋಹನ್ ಅವರೇ ಹೇಳಿಕೊಂಡು ಓಡಾಡಿದ್ದಾರೆ. 'ಕನ್ನಡದ ಕೆಲವೇ ಕೆಲವು ನಾಯಕಿಯರನ್ನು ಸಂಪರ್ಕಿಸಿ ಕೇಳಿ ನೋಡಿದ್ದಾಯಿತು. ಆದರೆ ಯಾರೊಬ್ಬರೂ ಒಪ್ಪುತ್ತಿಲ್ಲ. ಒಂದಲ್ಲ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಮ್ಮಿ, ಡ್ಯಾಡಿನ ಕೇಳಿ ಹೇಳ್ತೀನಿ ಆಗಬಹುದಾ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ' ಎಂಬುದು ಮೋಹನ್ ಕೊರಗು.

ಹಾಗಾಗಿ ಮೋಹನ್ ಈಗ ಬಾಲಿವುಡ್‌ನಿಂದ ಹೀರೋಯಿನ್ ಆಮದುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಒಂದಷ್ಟು ಹೀರೋಯಿನ್‌ಗಳ ಆಡಿಷನ್ ಆಗಿದೆಯಂತೆ. ತೆಲುಗಿನ ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸಿದ್ದ ನಾಯಕಿಯೊಬ್ಬರು ಬಂದು ಹೋಗಿದ್ದಾರಂತೆ. ಆದರೆ ನಮ್ಮ ಕ್ರೇಜಿ ಸ್ಟಾರ್‌ಗೆ ಆಕೆ ಪಸಂದ್ ಆಗಿಲ್ವಂತೆ.

ಆದರೂ ನಾಯಕಿಯ ಬೇಟೆ ಮುಂದುವರೆಸಿದ್ದಾರೆ ಮೋಹನ್. ಇನ್ನೆಂಥಾ ನಾಯಕಿಯನ್ನು ಹುಡುಕಿ ತರುತ್ತಾರೋ ಕಾದುನೋಡಬೇಕಿದೆ. ಅದರಲ್ಲಿ ಅನ್ಯಭಾಷಾ ನಾಯಕಿ ಎಂಬುದಂತೂ ಬಹುತೇಕ ಖಚಿತ. ಒಟ್ಟಿನಲ್ಲಿ ರವಿಚಂದ್ರನ್ ಅಭಿರುಚಿ ಎಲ್ಲಾ ಚಿತ್ರಪ್ರೇಮಿಗಳನ್ನು ಕೆರಳಿಸುತ್ತದೆ ಎಂಬುದು ಅವರ ತುಂಟ ಅಭಿಮಾನಿಗಳ ಅಂಬೋಣ.
ಇವನ್ನೂ ಓದಿ