ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಸೀಕ್ರೆಟ್ ಲವ್ ಐಪಿಎಲ್‌ನಲ್ಲಿ ಬಹಿರಂಗ? (Ramya | Royal Challengers Bangalore | Sanju weds Geetha | Dandam Dashagunam)
ರಮ್ಯಾ ಸೀಕ್ರೆಟ್ ಲವ್ ಐಪಿಎಲ್‌ನಲ್ಲಿ ಬಹಿರಂಗ?
PR
'ಸಂಜು ವೆಡ್ಸ್ ಗೀತಾ' ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಟಿ ರಮ್ಯಾ ಮನದಲ್ಲಿ ಬಚ್ಚಿಟ್ಟಿದ್ದ ಪ್ರೀತಿಯ ಒಂದೊಂದೇ ತುಣುಕುಗಳನ್ನು ಬಿಚ್ಚಿಟ್ಟಿದ್ದಾರೆ. ಅದರಂತೆ ಅವರು ಪ್ರೀತಿಸುತ್ತಿರುವ ಹುಡುಗ ಪೋರ್ಚುಗಲ್ ಮೂಲದ ವಾಣಿಜ್ಯೋದ್ಯಮಿಯಂತೆ. ಏಪ್ರಿಲ್ 12 ರಂದು ಐಪಿಎಲ್ ಕ್ರಿಕೆಟ್ ವೀಕ್ಷಣೆಗೆ ಬರುತ್ತಿದ್ದಾರಂತೆ. ಸ್ಪಲ್ಪ ಸಂಕೋಚ ಸ್ಪಭಾವದ ಅವರು ಮಾದ್ಯಮದಿಂದ ತುಂಬಾ ದೂರ ಉಳಿಯಲು ಬಯಸುತ್ತಾರಂತೆ. ಇಲ್ಲಿ ಮಾತ್ರ ಅಲ್ಲ ಅವರು ಪೋರ್ಚುಗಲ್‌ನಲ್ಲೂ ಹಾಗೆ ಎಂದಿರುವ ರಮ್ಯಾ ಹೆಸರು ಈಗ ಹೇಳಲ್ಲ ಎಂದಿದ್ದಾರೆ.
ಪೋರ್ಚುಗಲ್‌ನಲ್ಲಿ ಉನ್ನತ ಮಟ್ಟದಲ್ಲಿರುವ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ರಮ್ಯಾ ಅವರ ಭಾವಿ ಮಾವ ಅತ್ಯಧಿಕ ಶೇರು ಹೊಂದಿದ್ದಾರಂತೆ. ಮತ್ತು ಪೋರ್ಚುಗಲ್ ಆರ್ಥಿಕತೆಗೆ ಅಧಿಕ ಕೊಡುಗೆ ನೀಡುತ್ತಿರುವವರ ಪಟ್ಟಿಯಲ್ಲಿ ರಮ್ಯಾ ಅವರ ಭಾವಿ ಮಾವನೂ ಇದ್ದಾರಂತೆ.
ಮುಂದಿನ ಸಂಸಾರ ಜೀವನದಲ್ಲಿ ಸಂವಹನ ತುಂಬಾ ಮುಖ್ಯ ಅಲ್ವಾ. ಆ ಕಾರಣದಿಂದ ಪೋರ್ಚುಗೀಸ್ ಭಾಷೆಯನ್ನು ನಿಧಾನವಾಗಿ ಅಭ್ಯಸಿಸುತ್ತಿದ್ದಾರಂತೆ ರಮ್ಯಾ. ಆದ್ದರಿಂದಲೇ ಇತ್ತೀಚೆಗೆ ಯುರೋಪ್ ಪ್ರವಾಸ ಹೋಗುತ್ತಿದ್ದೆ. ಅಲ್ಪ ಕಾಲ ಅಲ್ಲೇ ಉಳಿಯುತ್ತಿದ್ದೆ ಎಂದಿದ್ದಾರೆ.
ನಟಿ ರಮ್ಯಾ ಐಪಿಎಲ್ ಕ್ರಿಕೆಟ್‌ನ ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿಗಳಲ್ಲಿ ಒಬ್ಬರು. ಹಾಗಾಗಿ ಅವರ ಪ್ರತಿಭೆಯನ್ನು ನೋಡಿ ಆನಂದಿಸಲು ಬರುತ್ತಿದ್ದಾರೆ ಅವರ ಸೀಕ್ರೇಟ್ ಪ್ರಿಯಕರ.
ಅಭಿಮಾನಿಗಳ ಊಹೆ ತಪ್ಪಾಗಿತ್ತು... ಸದಾ ಮೂಗುತುದಿಯಲ್ಲೇ ಕೋಪ ಇರಿಸಿಕೊಂಡಿರುವ ರಮ್ಯಾ ಪ್ರೀತಿಯಲ್ಲಿ ಬಿದ್ದಿರುವುದಾಗಿ ಈಗಾಗಲೇ ಘೋಷಿಸಿದ್ದರು. ಯಾರು ಬೀಳಿಸಿದ್ದು, ಈಗ ಏನಾಗಿದೆ, ಹೇಗಿದೆ, ಔಷಧ ತೆಗೆದುಕೊಂಡಿದ್ದಾರಾ.., ವೈದ್ಯರನ್ನು ಸಂಪರ್ಕಿಸಿದ್ದಾರಾ ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸದೆ ಮುಖ ತಿರುಗಿಸಿ ನಡೆದಿದ್ದರು.
ಆದರೆ ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ಪ್ರೀತಿಸುತ್ತಿರುವ ಹುಡುಗನ ಗುಣ ಮತ್ತು ನಡತೆ ಉತ್ತಮ ಎಂದೆಲ್ಲಾ ಹೇಳಿಕೊಂಡಿದ್ದರು. ಅಷ್ಟರಲ್ಲೇ ರಮ್ಯಾ ಪ್ರೀತಿಸುತ್ತಿರುವ ಹುಡುಗ ಮದ್ಯದ ದೊರೆಯೊಬ್ಬರ ಮಗ, ಗೌಡ ಸಮುದಾಯಕ್ಕೆ ಸೇರಿದ ಐಎಎಸ್ ಅಧಿಕಾರಿ ಎಂದೆಲ್ಲಾ ಗಾಸಿಪ್‌ಗಳು ಕೇಳಿಬಂದಿತ್ತು.
ಆದರೂ ಮುಖ್ಯ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ ರಮ್ಯಾ. ಆದರೆ 'ಸಂಜು ವೆಡ್ಸ್ ಗೀತಾ' ಬಿಡಬೇಕಲ್ಲಾ. ಈಗಾಗಲೇ ಹಲವಾರು ಯುವ ಪ್ರೇಮಿಗಳ ಮನದಲ್ಲಿ ಸಂಚಲನ ಉಂಟು ಮಾಡಿರುವ 'ಸಂಜು ವೆಡ್ಸ್ ಗೀತಾ', ನಟಿ ರಮ್ಯಾ ಅವರ ಮೇಲೂ ಏನೋ ಒಂಥರಾ ಪ್ರಭಾವ ಭೀರಿರುವಂತಿದೆ.
ಏನೇ ಇರಲಿ ರಮ್ಯಾ ಅವರು ಸಮೀಪದಲ್ಲೇ ಹಸೆಮಣೆ ಸೇರಲಿರುವುದು ಖಾತ್ರಿಯಾಗುತ್ತಾ ಬರುತ್ತಿರುವಂತೆ, ಅವರ ಕಟ್ಟಾ ಅಭಿಮಾನಿಗಳು ಇದನ್ನು ಕೇಳಿದ್ದೇ ತಡ, ಭಾರತದ (ಕರ್ನಾಟಕ) ಮೇಲೆ ಪೋರ್ಚುಗೀಸರ ಆಕ್ರಮಣ ಎಂಬ ಇತಿಹಾಸದ ಸಾಲುಗಳು ನೆನಪಿಗೆ ಬಂದಂತೆ, ಇದಕ್ಕೇನಾ ಅಂದು ವಿಶ್ವ ಕನ್ನಡ ಸಮ್ಮೇಳನಕ್ಕೆ ಗೈರು ಹಾಜರಾದದ್ದು ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದು ಗಾಂಧೀನಗರದಲ್ಲಿ ಗಾಳಿಸುದ್ಧಿ ಎದ್ದಿದೆ.