ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ; ನಾಯಕಿ? (P.Vasu | Upendra | Krishna Prajwal | Shriya)
WD
WD
ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ವಾಸು ಅವರು ನಿರ್ದೇಶನ ನೀಡಲಿದ್ದಾರೆ. ಪ್ರಸಿದ್ಧ ನಟರಾದ ಡಾ. ರಾಜ್ ಕುಮಾರ್, ವಿಷ್ಣು ವರ್ಧನ್, ರಜನಿಕಾಂತ್, ಮೋಹನ್ ಬಾಬು, ಬಾಲಕೃಷ್ಣ ಮುಂತಾದವರ ಚಿತ್ರಕ್ಕೆ ನಿರ್ದೇಶನ ನೀಡಿದ್ದ ಪಿ.ವಾಸು ಇದೀಗ ಉಪೇಂದ್ರ ಅವರ ಚಿತ್ರಕ್ಕೆ ನಿರ್ದೇಶನ ನೀಡಲಿರುವುದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಆಪ್ತರಕ್ಷಕ ಚಿತ್ರವನ್ನು ನಿರ್ಮಿಸಿದ ಕೃಷ್ಣ ಪ್ರಜ್ವಲ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಕಥೆ, ಚಿತ್ರಕತೆ ಎಲ್ಲವನ್ನೂ ಪಿ.ವಾಸು ಅವರು ಈಗಾಗಲೇ ಸಿದ್ಧಪಡಿಸಿದ್ದಾರೆ. ಮೇ 15ರಂದು ಚಿತ್ರ ಮುಹೂರ್ತ ಕಾಣಲಿದೆ. ಹಲವಾರು ಸಾಂಸಾರಿಕ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ವಾಸು, ಉಪೇಂದ್ರ ಅವರಿಗಾಗಿ ಎಂತಹ ಚಿತ್ರ ಸಿದ್ಧಪಡಿಸಿದ್ದಾರೆ ಎಂಬುದು ಸದ್ಯಕ್ಕೆ ಸೀಕ್ರೆಟ್.

ಬಹು ನಿರೀಕ್ಷೆಯ ಈ ಚಿತ್ರಕ್ಕೆ ದಕ್ಷಿಣ ಭಾರತದ ಮೋಹಕ ನಟಿಯನ್ನು ಕರೆತರುವ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕ ಕೃಷ್ಣ ಪ್ರಜ್ವಲ್. ಇಬ್ಬರು ನಾಯಕಿಯರಿರುವ ಈ ಚಿತ್ರಕ್ಕೆ ಪ್ರಮುಖ ನಾಯಕಿಯ ಪಾತ್ರಕ್ಕೆ ಶ್ರೇಯಾ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.
ಇವನ್ನೂ ಓದಿ